RSS ಚಡ್ಡಿ ಸುಟ್ಟು ಹಾಕಿದರು : ಸೊಗಡು ಶಿವಣ್ಣ ಆಕ್ರೋಶ..!

suddionenews
1 Min Read

 

ತುಮಕೂರು: ನಿನ್ನೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಮನೆಗೆ ಮುತ್ತಿಗೆ ಹಾಕಿದ ಎನ್​​ಎಸ್​ಯುಐ ದಾಂಧಲೆ ನಡೆಸಿದ್ದಾರೆ. ಈ ಸಂಬಂಧ ಈಗಾಗಲೇ ಹದಿನೈದು ಜನರ ಬಂಧನವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಈ ಸಂಬಂಧ ಇಂದು ಸುದ್ದಿಗೋಷ್ಟಿ ನಡೆಸಿ ಆಕ್ರೋಶ ಹೊರಹಾಕಿರುವ ಸೊಗಡು ಶಿವಣ್ಣ , ಪಾಪಿಗಳು ಆರ್​ಎಸ್​ಎಸ್​ ಸಂಘದ ಚಡ್ಡಿ ಸುಟ್ಟು ಹಾಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇಂತಹ ಪಾಪಿಗಳಿಗೆ ಕಂಡಲ್ಲಿ ಗುಂಡಿಕ್ಕಬೇಕು. ಶಿಕ್ಷಣ ಸಚಿವರ ಮನೆಗೆ ನುಗ್ಗಿ ದಾಂಧಲೆ ನಡೆಸಿ, ಭಯ ಹುಟ್ಟಿಸಿ ವಿಕೃತಿ ಮೆರೆದವರ ವಿರುದ್ಧ ಉತ್ತರ ಪ್ರದೇಶದ ಸಿಎಂ ಯೋಗಿ ಮಾದರಿಯಲ್ಲಿ ಉಗ್ರ ಕ್ರಮ ಕೈಗೊಳ್ಳಬೇಕು. ಇಂತಹವರಿಗೆ ಕಂಡಲ್ಲಿ ಗುಂಡು ಹೊಡೆಯಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಶಾಂತಿ ಕದಡಲಿದೆ. ಸಚಿವರ ಮನೆಯಲ್ಲಿ ದಾಂಧಲೆ ನಡೆದ ಸಂದರ್ಭದಲ್ಲಿ ಅವರ ಪುತ್ರ, ಸೊಸೆ ಇದ್ದರು. ಏಕಾಏಕಿ ಘಟನೆಯಿಂದ ಮಾನಸಿಕವಾಗಿ ಆ ಹೆಣ್ಣು ಮಗಳು ಆಘಾತಕ್ಕೊಳಗಾಗಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಗಲಭೆ ಬಗ್ಗೆ ಈವರೆಗೆ ಹೇಳಿಕೆ ನೀಡಿಲ್ಲ ಏಕೆ? ಎಂದು ಆಕ್ರೋಶ ಹೊರಹಾಕಿದರು.

ಅಲಿ ರೆಹಮತ್ ಖಾನ್ ಅಲಿಯಾಸ್ ಪೈಲ್ವಾನ್, ಮಹಮ್ಮದ್ ರಜಾಕ್, ಅಮರುಲ್ಲಾಖಾನ್, ಮಹಮ್ಮದ್ ಬೇಗ್, ಸಂಪತ್, ಮಧು, ಅಮೃತಕುಮಾರ್, ರೆಹಮಾನ್,‌ ಲಕ್ಷ್ಮೀಶ್, ಕೀರ್ತಿ ಬೆಂಗಳೂರು ಇವರೆಲ್ಲಾ ಕಾಂಗ್ರೆಸ್ NSUI ಕಾರ್ಯಕರ್ತರು. ಮನೆಗೆ ಬೆಂಕಿ ಇಡಲು ಬಂದಿದ್ದರು. ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿನ ಘಟನೆಯಂತೆ ಇದು ಭೀತಿ ಹುಟ್ಟಿಸುವುದಾಗಿದೆ‌. ಇಂತಹ ಪಾಪಿಗಳಿಗೆ ಉಗ್ರ ಶಿಕ್ಷೆ ಆಗಬೇಕು. ಇವರು 4 ಕಾರಲ್ಲಿ ಬಂದಿದ್ದರು. ಇನ್ನೆರಡು ಕಾರು ಎಲ್ಲಿವೆ? ಆ ಕಾರುಗಳನ್ನು ಈವರೆಗೆ ಸೀಜ್ ಮಾಡಿಲ್ಲ ಎಂದು ಗರಂ ಆಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *