ಸಾಮಾಜಿಕ ಕಾರ್ಯಕ್ಕೆ ಅಧಿಕಾರಿಗಳು ಅಡ್ಡಿ : ಅನ್ನ-ನೀರು ಬಿಟ್ಟ ಕಾಮೇಗೌಡರು..!

suddionenews
1 Min Read

ಮಂಡ್ಯ: ನಿಮ್ಗೆಲ್ಲಾ ನೆನಪಿರಬಹುದು ಆಧುನಿಕ ಭಗೀರಥನೆಂದೆ ಖ್ಯಾತರಾಗಿರುವ ಕಾಮೇಗೌಡರು. ಹೌದು ಅವರ ಪರಿಸರ ಪ್ರೇಮಕ್ಕೆ, ಕೆರೆಗಳ ಮೇಲಿರುವ ಕಾಳಜಿಗೆ ಪ್ರಧಾನಿ ನರೇಂದ್ರ ಮೋದಿಯವರೇ ಹೊಗಳಿಕೆಯನ್ನು ಗಳಿಸಿದ್ದರು. ಇದೀಗ ಅನ್ನ ನೀರು ಬಿಟ್ಟು ಕೂತು ಪ್ರತಿಭಟನೆಗೆ ಇಳಿದಿದ್ದಾರೆ.

ಕಾಮೇಗೌಡ ಅವರು ಸುಮಾರು 40-50 ವರ್ಷಗಳಿಂದ ಸ್ವಂತ ಖರ್ಚಿನಲ್ಲಿ ಮರಗಿಡಗಳನ್ನ ಪೋಷಣೆ ಮಾಡುತ್ತಾ ಬಂದಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಕಾಮೇಗೌಡರಿಗೆ ಮನೆ, ಮಕ್ಕಳಿಗೆ ಉದ್ಯೋಗ ಹಾಗೂ ತಮ್ಮ ಸೇವೆಗೆ ಆರ್ಥಿಕ ನೆರವು ಭರವಸೆ ನೀಡಿದ್ದರು. ಆದರೆ ಈ ವರೆಗೂ ಅವರಿಗೆ ನೀಡಿರುವ ಯಾವುದೇ ಭರವಸೆಗಳು ಈಡೇರಲಿಲ್ಲ.

ಈ ಮಧ್ಯೆ ಕಾಮೇಗೌಡರ ಸಾಮಾಜಿಕ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದಿ ಹೇಳಿದ್ದಾರೆ. ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದು, ಆಹಾರ ತ್ಯಜಿಸಿ ಧರಣಿ ಕುಳಿತಿದಿದ್ದಾರೆ. ಇದೀಗ ಮಳವಳ್ಳಿ ತಾಲೂಕು ಆಡಳಿತ ಮಂಡಳಿಯವರು ಸದ್ಯ ಕಾಮೇಗೌಡರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *