in

ರೈತರ ಜಮೀನಿನಲ್ಲಿ ಪತ್ತೆಯಾಯ್ತು ದೇವರ ಮೂರ್ತಿಗಳು..ನೋಡೋದಕ್ಕೆ ಮುಗಿಬಿದ್ದ ಜನ..!

suddione whatsapp group join

ಹಾವೇರಿ: ಜಿಲ್ಲೆಯ ರೈತನೊಬ್ಬನ ಜಮೀನಿನಲ್ಲಿ ದೇವರ ಮೂರ್ತಿ ಪತ್ತೆಯಾಗಿದ್ದು, ಇಡೀ ಜೊಲ್ಲೆಯಾದ್ಯಂತ ಸಿಕ್ಕಾಪಟ್ಟೆ ಸದ್ದಾಗುತ್ತಿದೆ. ಸವಣೂರು ಗ್ರಾಮದ ಇಚ್ಚಂಗಿ ಗ್ರಾಮಕ್ಕೆ ಜನಸಾಗರವೇ ದೌಡಾಯಿಸಿ ಬರುತ್ತಿದೆ.

ಗ್ರಾಮದ ಉಡಚಪ್ಪ ಕೊಡೆಪ್ಪನವರ ಜಮೀನಿನಲ್ಲಿ ಈ ದೃಶ್ಯ ಕಂಡು ಬಂದಿದ್ದು, ದೇವರ ಮೂರ್ತಿಗಳು ಮಣ್ಣಿನಲ್ಲಿ ಹುದುಗಿರುವ ರೀತಿ ಕಾಣಿಸುತ್ತಿವೆ. ರೈತ ಉಡಚಪ್ಪ ಕೊಡೆಪ್ಪನವರ ಕುಟುಂಬ ಸದಸ್ಯರು ದೇವಿಯ ಆಜ್ಞೆಯಂತೆ ಐದು ದಿನಗಳಿಂದ ಊರೂರು ತಿರುಗಾಡಿ ಭಿಕ್ಷೆ ಬೇಡುತ್ತಿದ್ದಾರೆ. ಜಮೀನಿನಲ್ಲೇ ದಾವಣಗೆರೆ ಜಿಲ್ಲೆ ಹರಪನಹಳ್ಳಿ ಮೂಲದ ಓರ್ವ ಸ್ವಾಮೀಜಿ ಮೂಲಕಪೂಜೆ ಮಾಡಿಸಿ ಅನುಷ್ಠಾನ ಕೈಗೊಂಡಿದ್ದಾರೆ.

ಕಳೆದೊಂದು ವರ್ಷದಿಂದ ರೈತ ಉಡಚಪ್ಪ ಮತ್ತು ಆತನ ಪತ್ನಿ ಮಂಜವ್ವಳ ಕನಸಿನಲ್ಲಿ ಉಡಚಮ್ಮದೇವಿ ಬರುತ್ತಿದ್ದಳಂತೆ. 21 ದಿನಗಳ ಕಾಲ 21 ಗ್ರಾಮದಲ್ಲಿ ಭಿಕ್ಷೆ ಬೇಡಿ ತನ್ನನ್ನು ಪೂಜಿಸಿದರೆ ಆ ಜಾಗದಲ್ಲಿ ಪ್ರತ್ಯಕ್ಷಳಾಗುತ್ತೇನೆ ಎಂದು ಕನಸಿನಲ್ಲಿ ಹೇಳಿದ್ದಳಂತೆ. ಈಗ ಎರಡು ದಿನಗಳಿಂದ ರೈತ ಉಡಚಪ್ಪನ ಜಮೀನಿನಲ್ಲಿ ಪಾರ್ವತಿ, ಪರಮೇಶ್ವರ, ಗಣೇಶ, ಉಡಚಮ್ಮ, ನಾಗವೇಣಿ, ಯಲ್ಲಮ್ಮಳ ದೇವರ ಮೂರ್ತಿಗಳು ಅಸ್ಪಷ್ಟವಾಗಿ ಗೋಚರಿಸಿವೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ನಿವೃತ್ತಿ ಘೋಷಿಸಿದ ಶ್ರೀಲಂಕಾ ಹಿರಿಯ ವೇಗಿ ಮಲಿಂಗ

ಕೋವಿಡ್ ಆತಂಕದಲ್ಲೂ ಸಂಪ್ರದಾಯವಾಗಿ ನಡೆದ ಗೌರಸಮುದ್ರ ಮಾರಮ್ಮನ ಜಾತ್ರೆ; 7 ಲಕ್ಷ ರು ಹುಂಡಿ ಸಂಗ್ರಹ