ಪುರಾತನ ಕಾಲದಿಂದಲೂ ರಂಗಭೂಮಿ ಮತ್ತು ರಂಗ ಕಲೆಗೆ ಹೆಚ್ಚು ಮಹತ್ವವಿದೆ : ಡಾ. ಯಶೋಧರ ಜಿ.ಎನ್

 

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.06 : ಪರಿಣಾಮಕಾರಿ ಶಿಕ್ಷಣದ ಕಲಿಕೆಗೆ ರಂಗಕಲೆ ಸಹಕಾರಿಯಾಗಿದೆ, ರಂಗ ಶಿಕ್ಷಣ ಮನುಷ್ಯನ ಹುಟ್ಟಿನಿಂದಲೇ ಪ್ರಾರಂಭವಾಗುತ್ತದೆ. ಭಾರತದಲ್ಲಿ ಪುರಾತನ ಕಾಲದಿಂದಲೂ ರಂಗಭೂಮಿಗೆ ಮತ್ತು ರಂಗ ಕಲೆಗೆ ಹೆಚ್ಚು ಮಹತ್ವವನ್ನು ನೀಡಲಾಗಿದೆ ಎಂದು ಸರ್ಕಾರಿ ಕಲಾ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಯಶೋಧರ ಜಿ.ಎನ್ ಅಭಿಪ್ರಾಯಪಟ್ಟರು.

ನಗರದ ಪಿಳ್ಳೆಕೆರೆನಗಳ್ಳಿಯ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಶಿಕ್ಷಣದಲ್ಲಿ ರಂಗಕಲೆ ಕುರಿತು ಒಂದು ದಿನದ ಕಾರ್ಯಾಗಾರ ಉದ್ಧಾಟಿಸಿ ಮಾತನಾಡಿದರು.

ಭಾರತದಲ್ಲಿ ಪುರಾತನ ಕಾಲದಿಂದಲೂ ರಂಗ ಕಲೆಗೆ ಹೆಚ್ಚಿನ ಮಹತ್ವವಿದೆ. ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳನ್ನು ಜನರಿಗೆ ಮನಮುಟ್ಟುವಂತೆ ಅಭಿನಯದ ಮೂಲಕ ಅಲ್ಲಿಯ ಪಾತ್ರ ಸೃಷ್ಟಿಯನ್ನು ಜನಸಾಮಾನ್ಯರಿಗೆ ಹತ್ತಿರವಾಗುವ ಹಾಗೆ ನಿರ್ಮಿಸಿ ನಿರ್ದೇಶಿಸಿದ ಅನೇಕ ಕಂಪನಿಗಳು ಕರ್ನಾಟಕದಲ್ಲಿ ಇವೇ. ಟಿವಿ, ಕಂಪ್ಯೂಟರ್, ಮೊಬೈಲ್‍ಗಳ ಅತಿ ಹೆಚ್ಚಿನ ಬಳಕೆಯಿಂದಾಗಿ ಮನೋರಂಜನೆ ಮಾಧ್ಯಮವಾಗಿದ್ದ ರಂಗಕಲೆಗಳು ಇಂದು ಮೂಲೆ ಗುಂಪಾಗುತ್ತಿರುವುದು ವಿಷಾದನೀಯ.

ಶಿಕ್ಷಕ ಪಾಠವನ್ನು ಬೋಧಿಸಿದರೆ ಮಾತ್ರ ಸಾಕಾಗುವುದಿಲ್ಲ ಅದಕ್ಕೆ ಪೂರಕವಾದ ಅಭಿವ್ಯಕ್ತಿಯು ಬೇಕಾಗುತ್ತದೆ. ಆದ್ದರಿಂದ  ಕಲಿಕಾರ್ತಿಯ ಕಲಿಕೆಯು ಪೂರ್ಣಗೊಳ್ಳಬೇಕಾದರೆ ರಂಗಕಲೆಯ ಅಗತ್ಯತೆ ಹೆಚ್ಚಾಗಿದೆ. ಈ ದೃಷ್ಟಿಯಿಂದ ಶಿಕ್ಷಕ ಪರಿಪೂರ್ಣ ಮತ್ತು ಪರಿಣಾಮಕಾರಿ ಬೋಧಕನಾಗಬೇಕೆಂದರೆ ರಂಗ ಕಲೆಯನ್ನು ತನ್ನ ಬೋಧನೆಯಲ್ಲಿ ಅಳವಡಿಸಿಕೊಳ್ಳುವುದು ಸೂಕ್ತವಾದುದು ಎಂದು ತಿಳಿಸಿದರು.

ಉಪನ್ಯಾಸಕ ಹಾಗೂ ರಂಗಕರ್ಮಿ ಸಿ.ಪಿ.ಜ್ಞಾನದೇವ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ರಂಗ ಕಲೆ ಅವಶ್ಯವಾಗಿದೆ. ಶಿಕ್ಷಕರು ಹಾಗೂ ಉಪನ್ಯಾಸಕರು ರಂಗಕಲೆಯನ್ನು ಮೈಗೂಡಿಸಿಕೊಂಡು ಪಾಠ ಮಾಡುವುದರಿಂದ ಮಕ್ಕಳಲ್ಲಿ ಶಿಕ್ಷಣದ ಒಲವು ಹೆಚ್ಚುವುದರ ಜೊತೆಗೆ ಜ್ಞಾಪಕ ಶಕ್ತಿ ಹೆಚ್ಚು ಮಾಡಲು ಸಹಾಕಾರಿಯಾಗುತ್ತದೆ.

ಪ್ರತಿ ಪ್ರಾಣಿ ಸಂಕುಲವು ಭೂಮಿಗೆ ಬಂದು ಜೀವಿಸುವುದು ಒಂದು ಕಲೆ, ಹಾಗಾಗಿಯೇ ಪ್ರತಿ ಜೀವನದ ಘಟ್ಟಗಳನ್ನು ನಮ್ಮ ಪರ್ವಿಕರು ರಂಗಭೂಮಿ, ಯುದ್ಧಭೂಮಿ, ರುದ್ರಭೂಮಿ ಎಂದು ಮೂರು ಭಾಗ ಮಾಡಿ ಅದರ ಮಹತ್ವ ಸಾರಿದ್ದಾರೆ. ರಂಗಭೂಮಿಯಲ್ಲಿ ದೃಶ್ಯ ಮತ್ತು ಶ್ರವಣ ಮಾಧ್ಯಮ ಎರಡು ಮೇಳಯಿಸಿ ವಿದ್ಯರ್ಥಿಗಳ ಮೇಲೆ ಒಂದು ಗಟ್ಟಿಯಾದ ಪ್ರಭಾವ ಬೀರಬಲ್ಲ ಮಾಧ್ಯಮವಾಗಿದೆ.

ದ್ವನಿ ಏರಿಳೀತಾ, ಬಾವಭಿನಯಗಳ ಮೂಲಕ ಪ್ರಸ್ತುತ ಸಾಮಾಜಿಕ ಸನ್ನಿವೇಶಗಳನ್ನು ಅರ್ಥ ಗರ್ಭಿತವಾಗಿ ಹೇಳುವುದರಿಂದ ಮಕ್ಕಳಲ್ಲಿ ಸಾಮಾಜಿಕ ಕಳಕಳಿಯ ಜೊತೆಗೆ ಉತ್ತಮ ಮೌಲ್ಯಗಳನ್ನು ಬೆಳೆಸುವಲ್ಲಿ ಸಹಕರಿಯಾಗುತ್ತದೆ. ರಂಗಭೂಮಿಯಿಂದ ಮಕ್ಕಳಲ್ಲಿ ಮುಕ್ತ ಮನಸ್ಥಿತಿಯೊಂದಿಗೆ ಅವರ ಆತ್ಮವಿಶ್ವಾಸ ಬೆಳೆಸಬಹುದಾಗಿದೆ ಎಂದರು.

ಬಾದರದಿನ್ನಿ ಆರ್ಟ್ಸ್ ಅಕಾಡೆಮಿಯ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಎಂ.ಆರ್.ಜಯಲಕ್ಷ್ಮೀ, ಉಪಪ್ರಾಚಾರ್ಯ ಎಚ್.ಎನ್.ಶಿವಕುಮರ, ಉಪನ್ಯಾಸಕರಾದ ಪದ್ಮಾಶ್ರೀ, ಓ.ಎಂ.ಮಂಜುನಾಥ್, ಮಂಜುನಾಥಪ್ಪ, ಪಲ್ಲವಿ, ಗೀತಾ, ಕಲಾವಿದರಾದ ರಚನ ಮಂಜುನಾಥ್, ಗುರುಕಿರಣ, ರಾಘವೇಂದ್ರ ಮತ್ತಿತರರು ಇದ್ದರು.

suddionenews

Recent Posts

ಬೆಳ್ಳಂಬೆಳಗ್ಗೆ ಚಿತ್ರದುರ್ಗ ಸೇರಿದಂತೆ ಹಲವೆಡೆ ಲೋಕಾಯುಕ್ತರಿಂದ ದಾಳಿ..!

ಸುದ್ದಿಒನ್, ಚಿತ್ರದುರ್ಗ, ಜನವರಿ. 31 : ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಚಳಿಯಲ್ಲೂ ಬೆವರುವಂತೆ ಮಾಡಿದ್ದಾರೆ. ಬೆಂಗಳೂರು, ರಾಯಚೂರು,…

36 minutes ago

ಇಂದಿನಿಂದ ಬಜೆಟ್ ಅಧಿವೇಶನ ಆರಂಭ

  ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ…

2 hours ago

ಯಾವ ವಯಸ್ಸಿನಿಂದ ಮಕ್ಕಳಿಗೆ ಚಹಾ ಅಥವಾ ಕಾಫಿಯನ್ನು ನೀಡಬಹುದು ? ಚಿಕ್ಕ ವಯಸ್ಸಿನಲ್ಲಿ ಕುಡಿಯುವುದು ಅಪಾಯಕಾರಿಯೇ ?

ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…

5 hours ago

ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ

ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…

6 hours ago

ಫೈನಾನ್ಸ್ ಕಿರುಕುಳಕ್ಕೆ ದಾವಣಗೆರೆಯ ಶಿಕ್ಷಕಿ ಆತ್ಮಹತ್ಯೆ ಕೇಸ್ : ಉಲ್ಟಾ ಹೊಡೆದ ಪತಿ..!

ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…

15 hours ago

ಹುತಾತ್ಮರ ದಿನ : ಗಾಂಧೀಜಿಯವರಿಗೆ ಪುಷ್ಪ ನಮನ

ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…

15 hours ago