in

ರಸ್ತೆ ಗುಂಡಿ ತಪ್ಪಿಸಲು ಹೋಗಿ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಲಿ..!

suddione whatsapp group join

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳಿಂದ ಈಗಾಗಲೇ ಸಾಕಷ್ಟು ಜನರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಆದ್ರೂ ರಸ್ತೆ ಗುಂಡಿಗಳನ್ನ ಬಿಬಿಎಂಪಿ ಸಂಪೂರ್ಣವಾಗಿ ಮುಚ್ಚಿಲ್ಲ. ಇದೀಗ ಮತ್ತೊಂದು ಜೀವ ಬಲಿಯಾಗಿದೆ.

ಸಾವಿರ ಕನಸು ಕಂಡು ಶಿರಸಿಯಿಂದ ಬೆಂಗಳೂರಿಗೆ ಬಂದಿದ್ದ ಯುವಕ ರಸ್ತೆ ಗುಂಡಿಗೆ ಬಲಿಯಾಗಿದ್ದಾನೆ. ಈ ಘಟನೆ ನಡೆದಿರೋದು ರಾಜ್ ಕುಮಾರ್ ಸಮಾಧಿ ರಸ್ತೆ ಬಳಿ. ಮನೋಜ್ ಮೃತ ದುರ್ದೈವಿ.

ಮನೋಜ್ ಎಂದಿನಂತೆ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದರಂತೆ. ರಾಜ್ ಕುಮಾರ್ ಸಮಾಧಿ ಬಳಿ ಹೋಗುತ್ತಿದ್ದಾಗ ರಸ್ತೆ ಗುಂಡಿ ಸಿಕ್ಕಿದೆ. ಅದನ್ನ ತಪ್ಪಿಸಲು ಹೋದಾಗ, ಹಿಂದೆಯಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಮನೋಜ್ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಮನೋಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮನೋಜ್ ಮೃತದೇಹವನ್ನ ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಆಸ್ತಿಗಾಗಿ ಒಡಹುಟ್ಟಿದವನನ್ನೇ ಕೊಂದ..ಈಗ ಜೈಲು ಸೇರಿದ..!

ಮೋದಿ ಹುಟ್ಟುಹಬ್ಬಕ್ಕೆ ಎಚ್‌ಡಿಡಿ, ಎಚ್ಡಿಕೆ ಶುಭಕೋರಿಕೆ