ಸೋಷಿಯಲ್ ಮೀಡಿಯಾದಲ್ಲಿ ಶುರುವಾಯ್ತು ಸಿದ್ದು ನೆಕ್ಸ್ಟ್ ಸಿಎಂ ಪೋಸ್ಟ್

1 Min Read

ಬೆಂಗಳೂರು: ಸಿದ್ದರಾಮಯ್ಯ ಅಮೃತ ಮಹೋತ್ಸವ ಹಿನ್ನೆಲೆ, ಹುಟ್ಟಹಬ್ಬದ ಸಂಭ್ರಮಾಚರಣೆ ನೆಪದಲ್ಲಿ ಮುಂದಿನ ಸಿಎಂ ಎಂದು ಬಿಂಬಿತವಾಗಿದೆ. ಸಿದ್ದರಾಮಯ್ಯ ಟೀಮ್ ನಿಂದ ಇದಕ್ಕೆ ಭರ್ಜರಿ ತಯಾರಿ ನಡೆದಿದೆ. ಈಗಾಗಲೇ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಬಿಂಬಿಸುತ್ತಿರುವ ಸಿದ್ದು ಟೀಮ್ ಬಿಂಬಿಸುತ್ತಿದೆ.

ಸೋಷಿಯಲ್ ಮೀಡಿಯಾದಲ್ಲೂ ಫುಲ್ ಆಕ್ಟಿವ್ ಆಗಿದ್ದಾರೆ. ಸಿದ್ದರಾಮಯ್ಯ ಫೇಸ್ ಬುಕ್ ಹೆಸರು ಬದಲಾವಣೆ ಮಾಡಲಾಗಿದೆ. ಸಿದ್ದರಾಮಯ್ಯ ದಿ ಮಾಸ್ ಲೀಡರ್ ಎಂದಿದ್ದ ಫೇಸ್ ಬುಕ್ ಫೇಜ್ ನೇಮ್ ಬದಲಾವಣೆಯಾಗಿದೆ. ಸಿದ್ದರಾಮಯ್ಯ 2023 ಎಂದು ಸಿದ್ದು ಬೆಂಬಲಿಗರು ಬದಲಾವಣೆ ಮಾಡಿದ್ದಾರೆ. ಸದ್ಯ ಈ ಪ್ರೊಫೈಲ್ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.

ಜುಲೈ 02- 2022 ರಂದು ಹೆಸರು ಬದಲಾವಣೆ ಮಾಡಿರುವ ಸಿದ್ದು ಟೀಮ್. ಒಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಬದಲಾವಣೆ ಪಾಲಿಟಿಕ್ಸ್. ಮತ್ತೊಂದೆಡೆ ಸಿದ್ದರಾಮೋತ್ಸವಕ್ಕೆ ಸಿದ್ದಪಡಿಸಿದ ಲೇಟರ್ ಹೆಡ್ ನಲ್ಲೂ ಮುಂದಿನ ಸಿಎಂ ಎಂದು ಬಿಂಬಿತ. ಕಾರ್ಯಕ್ರಮಕ್ಕಾಗಿ ಕ್ರಿಯೆಟ್ ಮಾಡಿರುವ ಮೇಲ್ ನಲ್ಲಿ ಬಿಂಬಿತವಾಗಿದೆ. [email protected] ಎಂದು ಕ್ರಿಯೆಟ್ ಮಾಡಲಾಗಿದೆ. ಸಿದ್ದರಾಮಯ್ಯ ದೆಹಲಿ ಭೇಟಿ ಬಳಿಕ ಹೆಚ್ಚಿದ ಸಿದ್ದು ಪಡೆ ಹವಾ ಎಬ್ಬಿಸಿದೆ.

Share This Article
Leave a Comment

Leave a Reply

Your email address will not be published. Required fields are marked *