ಚಿತ್ರದುರ್ಗ, (ಜ.06) : ಡಾ. ಬಿ.ಆರ್.ಅಂಬೇಡ್ಕರ್ ರವರು ಮನೆದೇವರಾಗಬೇಕು ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ತಿಳಿಸಿದರು.
ಭೋವಿ ಗುರುಪೀಠದಲ್ಲಿ ನಡೆದ ರಾಜ್ಯಮಟ್ಟದ ಸಭೆಯಲ್ಲಿ ಮತನಾಡಿದ ಅವರು, ಸಿದ್ಧರಾಮೇಶ್ವರರ ಚಿಂತನೆಗಳು, ಅಂಬೇಡ್ಕರ್‌ರವರ ವಿಚಾರಗಳು ಒಂದೇ ಆಗಿವೆ. ಎಲ್ಲಾ ದಾರ್ಶನಿಕರು ಸಮಾನತೆಯನ್ನು ಬಯಸುತ್ತಾರೆಂದು ಹೇಳಿದರು.
2022 ನೇ ಸಿದ್ಧರಾಮೇಶ್ವರ ಜಯಂತಿಯನ್ನು ಪ್ರತಿ ಮನೆ ಮನೆಯಲ್ಲಿ ಆಚರಿಸುವಂತೆ ಪ್ರೇರಣೆ ನೀಡಬೇಕು. ಹಳ್ಳಿ, ಹಟ್ಟಿ, ಕಾಲೋನಿ, ಗ್ರಾಮಗಳಲ್ಲಿ ಸಿದ್ಧರಾಮೇಶ್ವರ ಭಾವಚಿತ್ರವನ್ನಿಟ್ಟು ಪೂಜಿಸಬೇಕು.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಸಿದ್ಧರಾಮೇಶ್ವರರ ಜಯಂತಿಯನ್ನು ಮಾಡಿ ಪೂಜಿಸುವಂತಾಗಬೇಕು. ಆಯಾ ತಾಲ್ಲೂಕು, ಜಿಲ್ಲಾ ಸಂಘಗಳಿಂದ ದಾನಿಗಳನ್ನು ಗುರುತಿಸಿ ಭಾವಚಿತ್ರಗಳನ್ನು ಪ್ರತಿ ಸರ್ಕಾರಿ ಕಛೇರಿಗಳಿಗೆ, ಗ್ರಾಮಪಂಚಾಯಿತಿ ಕಚೇರಿಗಳಿಗೆ ನೀಡಬೇಕೆಂದು ತಿಳಿಸಿದರು.
2023 ರಿಂದ ಪ್ರತಿ ವರ್ಷ ಭೋವಿ ಸಮಾಜದಿಂದ ಕಡ್ಡಾಯವಾಗಿ ರಾಜ್ಯಮಟ್ಟದ ಸಮಾವೇಶವನ್ನು ಸಮಾಜದ ಎಲ್ಲಾ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಒಂದೊಂದು ವರ್ಷ ಒಂದೊಂದು ಜಿಲ್ಲೆಯಲ್ಲಿ ಮಾಡುವಂತಾಗಬೇಕು ಎಂದು ಹೇಳಿದರು.
ಬಾಗಲಕೋಟೆಯಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟಿರುವ ಮಠದ ಉದ್ಘಾಟನೆಯನ್ನು ನಿಗದಿಪಡಿಸಲು ಬಾಗಲಕೋಟೆಯ ಸುತ್ತಮುತ್ತಲಿನ ಹಾಗೂ ಉತ್ತರ ಕರ್ನಾಟಕದ ಎಲ್ಲಾ ಮುಖಂಡರನ್ನು ಸಭೆಕರೆದು ದಿನಾಂಕ ನಿಗದಿಪಡಿಸಲಾಗುವುದು ಎಂದರು.
ಆಗಸ್ಟ್ ತಿಂಗಳಿನಲ್ಲಿ ದಾವಣಗೆರೆಯಲ್ಲಿ ನಡೆಯುವ ರಥೋತ್ಸವ ಈ ವರ್ಷವೂ ಸಹ 60ನೇ ವರ್ಷದ ರಥೋತ್ಸವ ಆಗಿರುವುದರಿಂದ ವಜ್ರ ಮಹೋತ್ಸವ ಹೆಸರಿನಲ್ಲಿ ವಿಶೇಷ ಮತ್ತು ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಭೋವಿ ಸಮಾಜಕ್ಕೆ ಸಂಬಂಧಿಸಿದ ವಿಚಾರಗಳನ್ನು ಶಾಸಕರು, ಮುಖಂಡರ, ಸ್ವಾಮೀಜಿಗಳ ಬಗ್ಗೆ ಹಗುರವಾಗಿ ಬಿತ್ತರಿಸುವವರ ಬಗ್ಗೆ ಎಚ್ಚರವಹಿಸಿ ಉತ್ತರಿಸಬೇಕು ಎಂದು ತಿಳಿಸಿದರು. ಭೋವಿ ಅಭಿವೃದ್ಧಿ ನಿಗಮದ ಪಾರದರ್ಶಕತೆ ತರಬೇಕು. ಬಡವರಿಗೆ ಸೌಲಭ್ಯಗಳು ಸಿಗಬೇಕು. ಲೋಪವಾಗಿದ್ದರೆ ತನಿಖೆನಡೆಸಿ ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಓಸಿಸಿಐ ರಾಷ್ಟ್ರೀಯ ಅಧ್ಯಕ್ಷ ರವಿಮಾಕಳಿ, ರಾಜ್ಯಾಧ್ಯಕ್ಷ ಹೆಚ್.ಆನಂದಪ್ಪ, ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಸೀತರಾಮು, ಚಿತ್ರದುರ್ಗ ಜಿಲ್ಲೆಯ ಭೋವಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ಲಕ್ಷ್ಮಣ, ನಗರಸಭೆ ಸದಸ್ಯ ಡಿ,ತಿಮ್ಮಣ್ಣ, ಎಸ್.ಜೆ.ಎಸ್.ಜ್ಞಾನಪೀಠದ ಕಾರ್ಯದರ್ಶಿ ಡಿ.ಸಿ.ಮೋಹನ್, ನಿರ್ದೇಶಕರಾದ ನೇರಲಕುಂಟೆ ರಾಮಪ್ಪ, ಹನುಮಂತಪ್ಪ ಗೋಡನಹಳ್ಳಿ, ಮಂಜುನಾಥ.ಇ, ಪ್ರಕಾಶ್, ಬಾಬು, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಆಂಜನೇಯ, ಜಿಲ್ಲಾಧ್ಯಕ್ಷರುಗಳಾದ ಹಾವೇರಿಯ ರವಿಪೂಜಾರಿ, ದಾವಣಗೆರೆ ಸಿದ್ದಪ್ಪ ಜಯಣ್ಣ, ತುಮಕೂರು ಉಮೇಶ್, ರಾಮನಗರ ಕನಕರಾಜು, ಮಂಡ್ಯ ಗುರಪ್ಪ, ಮೈಸೂರು ನಾಗರಾಜು, ವಿಜಯಪುರ ರಾಮು, ಹೊಸಪೇಟೆ, ಬಳ್ಳಾರಿ ಮಹೇಶ್, ರಾಯಚೂರು ಲಕ್ಷ್ಮಣ, ಕಲ್ಬುರುಗಿ ತಿಮ್ಮಣ್ಣ ಒಡೆಯರು, ಬೀದರ್ ಮಾಣಿಕ್ಯರಾವ್ ವಾಡೆಕರ್, ಮಂಗಳೂರು ಉಡುಪಿ ಶ್ರೀನಿವಾಸ್, ಹಾಸನ್ ಉಮಾಶಂಕರ್, ಚಿಕ್ಕಮಗಳೂರು, ಚಂದ್ರಶೇಖರ್, ಬೆಳವಾಗಿ ವಿಠಲ್, ಕಾರವಾರ ಶಿವಾನಂದ, ಬೆಂಗಳೂರು ಗ್ರಾಮಾಂತರ ಮುರುಳಿ, ವಿಜಯನಗರ ದೊಡ್ಡರಾಮಣ್ಣ, ಕೊಪ್ಪಳ ಸತ್ಯಪ್ಪ, ಕೊಡಗು ಸೃಜಿತ್, ಶಿವಮೊಗ್ಗ ರವಿಕುಮಾರ್, ಒಸಿಸಿಐ ಪ್ರಧಾನ ಕಾರ್ಯದರ್ಶಿ ಎಲ್.ಶ್ರೀಧರ್, ಶಿವರುದ್ರಯ್ಯ ಸ್ವಾಮಿ, ಭೋವಿಮಹಾಸಭದ ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…