Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿದ್ದರಾಮಯ್ಯ ಮಾತು ಜೆಡಿಎಸ್ ಗೆ ವರದಾನವಾಗಲಿದೆ : ಕುಮಾರಸ್ವಾಮಿ

Facebook
Twitter
Telegram
WhatsApp

ಮೈಸೂರು: ಪರಿಷತ್ ಚುನಾವಣೆಯ ಹಿನ್ನೆಲೆ ಜಿಲ್ಲೆಗೆ ಭೇಟಿ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಗರಂ ಆಗಿದ್ದಾರೆ.

 

ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 2018 ರಿಂದ ಇದೇ ರೀತಿ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಕುತ್ತಿಗೆಗೆ ಸ್ಲೇಟ್ ಹಾಕಿಕೊಂಡು ಓಡಾಡಲಿ. ತಮ್ಮ ಕುತ್ತಿಗೆಗೆ ಈ ಸ್ಲೇಟ್ ಹಾಕಿಕೊಂಡು ಓಡಾಡಲಿ. ಪದೇ ಪದೇ ಇದೆ ಹೇಳಿಕೆ ನೀಡಿ ಬಾಯಿ ನೋಯಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದು ಸಿದ್ದರಾಮಯ್ಯಗೆ ತಿರುಗು ಬಾಣವಾಗಿ ಜೆಡಿಎಸ್ಗೆ ಲಾಭವಾಗಲಿದೆ. ಬಿಜೆಪಿ ಬೆಂಬಲಿಗರ ಮತ ಜೆಡಿಎಸ್ ಗೆ ಬರಲಿದೆ ಎಂದಿದ್ದಾರೆ.

ಕುಟುಂಬ ರಾಜಕಾರಣ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಮಗ ಶಾಸಕರಾಗಿದ್ದಾರೆ. ಅಕಾಲಿಕ ಮರಣಕ್ಕೀಡಾದ ಮಗ ಕೂಡ ರಾಜಕಾರಣದಲ್ಲಿದ್ದರು. ಅವರು ಕುಟುಂಬ ರಾಜಕಾರಣದ ಬಗ್ಗೆ ಮಾತಾಡ್ತಾರೆ. ಪರಿಷತ್ ಚುನಾವಣೆಯಲ್ಲಿ ಯಾರ ಬೆಂಬಲವನ್ನು ಕೇಳಲ್ಲ. ನಮ್ಮ ಅಭ್ಯರ್ಥಿಗಳು 6 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ಅಷ್ಟು ಕ್ಷೇತ್ರಗಳಲ್ಲೂ ಕೇಳಲ್ಲ. ಅವರ ಅಭ್ಯರ್ಥಿ ಸೋಲಿಸಿ ಬೆಂಬಲ ಕೊಡಿ ಎನ್ನಲ್ಲ. 2023ರ ಚುನಾವಣೆ ಗಮನದಲ್ಲಿಟ್ಟುಕೊಂಡು ಬೆಂಬಲ ನೀಡ್ತೇವೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಬಂಜಾರ ಸಮಾಜದಿಂದ ಗೋವಿಂದ ಕಾರಜೋಳ ಪರ ಮತಯಾಚನೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552   ಸುದ್ದಿಒನ್,ಚಿತ್ರದುರ್ಗ, ಏಪ್ರಿಲ್.24 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಜಿಲ್ಲಾ ಬಂಜಾರ

ಪ್ರಿಯಾಂಕಾಗಾಂಧಿ ಹೇಳಿಕೆಗೆ ಗೋವಿಂದ ಕಾರಜೋಳ ತಿರುಗೇಟು

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್,ಚಿತ್ರದುರ್ಗ, ಏಪ್ರಿಲ್.24  : ಅಪ್ಪರ್ ಭದ್ರಾ ಯೋಜನೆ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಸೋನಿಯಾಗಾಂಧಿ ಪುತ್ರಿ ಪ್ರಿಯಾಂಕಾಗಾಂಧಿ ಮಾತನಾಡಿರುವುದು ಸೋಜಿಗದ ಸಂಗತಿ

ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ :  ರಾಘವೇಂದ್ರನಾಯ್ಕ ಮನವಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.23 : ಸಂವಿಧಾನ ವಿರೋಧಿ ಬಿಜೆಪಿ.ಯನ್ನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿ ಬಡವರು, ದಲಿತರು,

error: Content is protected !!