Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಮ್ಮ ಸರ್ಕಾರವನ್ನ 10% ಸರ್ಕಾರ ಎಂದಿದ್ರಿ, ಧಮ್ ಇದ್ದರೆ ಈಗ ತನಿಖೆ ಮಾಡಿಸಿ : ಮೋದಿಗೆ ಸವಾಲು ಹಾಕಿದ ಸಿದ್ದರಾಮಯ್ಯ

Facebook
Twitter
Telegram
WhatsApp

 

ಚಾಮರಾಜನಗರ: ದೇಶದಲ್ಲಿ‌ ಮತ್ತು ರಾಜ್ಯದಲ್ಲಿ ಅತ್ಯಂತ ದುರಾಡಳಿತ ಮಾಡುವಂತ, ಜನವಿರೋಧಿಯಾದಂತ, ಭ್ರಷ್ಟಾಚಾರ ದಿಂದ ತುಂಬಿ ತುಳುಕುತ್ತಿರುವಂತ, ರೈತ ವಿರೋಧಿ ಸರ್ಕಾರವನ್ನು ನಾವೀಗ ಕಾಣುತ್ತಾ ಇದ್ದೇವೆ. ಕಳೆದ 45 ವರ್ಷಗಳಿಂದ ರಾಜಕಾರಣದಲ್ಲಿದ್ದೀನಿ. ಇಷ್ಟು ಭ್ರಷ್ಟ ಸರ್ಕಾರವನ್ನ, ಸುಳ್ಳೇಳುವ ಸರ್ಕಾರವನ್ನು ದೇಶದಲ್ಲಿ ಅಶಾಂತಿ ನಿರ್ಮಾಣ ಮಾಡಿರುವ ಸರ್ಕಾರವನ್ನು, ದ್ವೇಷದ ವಿಷ ಬೀಜ ಬಿತ್ತುತ್ತಿರುವ ಸರ್ಕಾರವನ್ನು ನನ್ನ ರಾಜಕೀಯ ಅನುಭವದಲ್ಲಿ ಕಂಡಿಲ್ಲ.

ಇವತ್ತು ಕರ್ನಾಟಕದಲ್ಲಿ ಹಿಂದೆಂದು ಕೇಳರಿಯದಂತ ಭ್ರಷ್ಟ ಸರ್ಕಾರವಿದೆ. ಇದನ್ನು ಕಾಂಗ್ರೆಸ್ ನವರು ಹೇಳೋದಲ್ಲ. ನಾವೂ ಹೇಳಿದರೆ ವಿರೋಧ ಪಕ್ಷದಲ್ಲಿದ್ದಾರೆ ಅದಕ್ಕೆ ಹೇಳುತ್ತಾರೆ ಎನ್ನುತ್ತಾರೆ. ಇಡೀ ರಾಜ್ಯದ ಜನ ಮಾತಾಡ್ತಾ ಇದ್ದಾರೆ. ಅಧಿಕಾರಿಗಳು ಮಾತಾಡ್ತಾ ಇದ್ದಾರೆ, ಇಂಥ ಭ್ರಷ್ಟ ಸರ್ಕಾರವನ್ನು ಯಾವತ್ತು ನೋಡಿರಲಿಲ್ಲ ಎಂದು. ಪತ್ರಿಕೆಯಲ್ಲೆಲ್ಲಾ ನೋಡಿರ್ತೀರಿ. 7-6-21 ರಲ್ಲಿ ಗುತ್ತಿಗೆದಾರರ ಸಂಘದವರು, ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಪ್ರಧಾ‌ಮಂತ್ರಿಯವರೇ, ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ನಾವೂ ಕಾಂಟ್ರಾಕ್ಟ್ ತೆಗೆದುಕೊಂಡರೆ ಅದಕ್ಕೆ 40% ಕಮಿಷನದ ಕೊಡಬೇಕಂತೆ. 40% ಕಮಿಷನ್ ಕೊಟ್ಟು ಗುಣಮಟ್ಟದ ಕೆಲಸ ಮಾಡಲು ಸಾಧ್ಯವಿಲ್ಲ. ಈ ರಾಜ್ಯ ಸರ್ಕಾರ ಕಿರುಕುಳ ಕೊಡುತ್ತಿದೆ. ದಯವಿಟ್ಟು ಇದನ್ನು ತಪ್ಪಿಸಿ, ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದರು.

ಆ ಪತ್ರದ ಕಾಪಿ ನನ್ ಹತ್ರಾನು ಇದೆ. ಪತ್ರಿಕೆಗಳಲ್ಲಿ ವರದಿಯು ಆಗಿದೆ. ಎಲ್ಲಾ ಪತ್ರಿಕೆಗಳಲ್ಲಿ ವರದಿಯಾಗಿದೆ. ನನಗೆ ಗೊತ್ತಿರುವ ಮಟ್ಟಿಗೆ ಕರ್ನಾಟಕದ ಇತಿಹಾಸದಲ್ಲಿ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದೆ. ಇಷ್ಟು ವರ್ಷದಲ್ಲಿ ಕಾಂಟ್ರಾಕ್ಟರ್ ಗಳಿಂದ ಕಮಿಷನ್ ವಿಚಾರದ ಪತ್ರ ಬರೆದಿದ್ದು ಇದೇ ಮೊದಲು. ನನಗೆ ಗೊತ್ತಿರುವ ಮಟ್ಟಿಗೆ ಈ ಕೇಸ್ ಇದೇ ಮೊದಲು ಎಂದು ಕಿಡಿಕಾರಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿಸಿದ್ದರಾಮಯ್ಯ ಸರ್ಕಾರ 10% ಸರ್ಕಾರ ಅಂತ ಇದೇ ಪ್ರಧಾನಿ ಹೇಳಿದ್ದರು. ಆಗ ನಾನ್ ಹೇಳಿದ್ದರು. ನಾನ್ ಹೇಳಿದೆ, ನೀವೂ ಪ್ರಧಾನಮಂತ್ರಿಗಳಿದ್ದೀರಿ. ನಿಮ್ಮತ್ರ ಸಿಬಿಐ ಇದೆ, ರಾ ಇದೆ, ಇಂಟೆಲಿಜೆನ್ಸ್ ಇದೆ. ಮಾಹಿತಿ ಇದ್ದರೆ ತನಿಖೆ ಮಾಡಿಸಿ ಅಂತ ಹೇಳಿದ್ದೆ. ಈಗಲೂ ಅದೇ ಮಾತಿಗೆ ಬದ್ಧವಾಗಿದ್ದೇನೆ. ನಿಮಗೆ ದಾಖಲಾತಿಗಳಿದ್ದರೆ ಈಗಲೂ ತನಿಖೆ ನಡೆಸಿ. ಧಮ್ ಇದ್ದರೆ ನಿಮಗೆ ಕೆಂಪಣ್ಣ ಪತ್ರ ಬರೆದಿದ್ದಾರಲ್ಲ ತನಿಖೆ ಮಾಡಿಸಿ. ಮೌನವಾಗಿದ್ದೀರಿ. ಯಾಕೆ ಮೌನವಾಗಿದ್ದೀರಿ ಎಂದರೆ ನಿಮ್ಮ ಕುಮ್ಮಕ್ಕಿದೆ ಅಂತ ಅಲ್ವಾ ಎಂದು ವ್ಯಂಗ್ಯವಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಏಪ್ರಿಲ್ 24 ರಂದು ಚಿತ್ರದುರ್ಗಕ್ಕೆ  ಸಿಎಂ ಯೋಗಿ ಆದಿತ್ಯನಾಥ್ | ಗೋವಿಂದ ಕಾರಜೋಳ ಪರ ಮತಯಾಚನೆ 

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಏ. 20 : ಚಿತ್ರದುರ್ಗದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ರೋಡ್ ಶೋ ಬದಲು ಸಮಾವೇಶ ನಡೆಸಲಾಗುವುದೆಂದು

ಕಾಂಗ್ರೆಸ್ ಗ್ಯಾರಂಟಿಗಳು ಹರ್ಷದ ಕೂಳು, ಬಿಜೆಪಿಯದ್ದು ವರ್ಷದ ಕೂಳು : ಕೆಎಸ್ ನವೀನ್

ಸುದ್ದಿಒನ್, ಚಿತ್ರದುರ್ಗ ಏ. 20 : ಕಾಂಗ್ರೆಸ್ ನವರ ಗ್ಯಾರಂಟಿಗಳು ಹರ್ಷದ ಕೂಳು, ಬಿಜೆಪಿಯ ಸಂಕಲ್ಪ ಪತ್ರ ವರ್ಷದ ಕೂಳು ಎಂದು ವಿಧಾನ ಪರಿಷತ್ ಸದಸ್ಯ ಕೆಎಸ್ ನವೀನ್ ಹೇಳಿದರು. ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ

ನಮ್ಮ ಮಗಳು ಅಂತವಳಲ್ಲ, ಫೋಟೋ ಹೇಗೆ ಬೇಕೋ ಹಾಗೇ ಎಡಿಟ್ ಮಾಡ್ತಾರೆ : ನೇಹಾ ತಾಯಿ ಹೇಳಿಕೆ

ಹುಬ್ಬಳ್ಳಿ : ಪ್ರೀತಿ ವಿಚಾರಕ್ಕೆ ನೇಹಾರ ಕೊಲೆಯಾಗಿದೆ. ಆರೋಪಿಯ ಬಂಧನವೂ ಆಗಿದೆ. ತನಿಖೆಯೂ ನಡೆಯುತ್ತಿದೆ. ಇದರ ನಡುವೆ ಫಯಾಜ್ ತಂದೆ-ತಾಯಿ ಕ್ಷಮಾಪ್ಪಣೆ ಕೇಳಿ, ಮಗನಿಗೆ ಶಿಕ್ಷೆಯಾಗಲಿ ಎಂದೇ ಒತ್ತಾಯಿದ್ದಾರೆ. ಇಬ್ವರು ಲವ್ ಮಾಡುತ್ತಿದ್ದರು ಅಂತ

error: Content is protected !!