Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎಂಟು ವರ್ಷ ನೂರೆಂಟು ಸುಳ್ಳು ಪುಸ್ತಕ ರಿಲೀಸ್.. ಏನೆಲ್ಲಾ ಇದೆ ಗೊತ್ತಾ..?

Facebook
Twitter
Telegram
WhatsApp

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಎಂಟು ವರ್ಷ ನೂರೆಂಟು ಸುಳ್ಳು ಎಂಬ ಪುಸ್ತಕ ರಿಲೀಸ್ ಮಾಡಿದ್ದಾರೆ. ಮೋದಿ ಪ್ರಧಾನಿಯಾಗಿ ಎಂಟು‌ ವರ್ಷ ಆಯ್ತು. 8 ವರ್ಷ ಪೂರೈಸಿದ ಸಂಭ್ರಮಾಚರಣೆ ಮಾಡ್ತಿದ್ದಾರೆ. ದೇಶದಲ್ಲಿ ಸುಭಿಕ್ಷೆ ತಂದಿದ್ದೇವೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ.

ದೇಶದ ಜನರಿಗೆ ಅವರು ಹೇಳಿದ್ದೇನು. ಪ್ರಧಾನಿಯಾಗಿ ಅವರು ಮಾಡಿದ್ದೇನು. ರೈತರು,ಸಾಮಾನ್ಯರು ಎಷ್ಟು ಕಷ್ಟ ಅನುಭವಿಸಿದ್ರು. ಇವರ ಭರವಸೆ ಹೇಗೆ ಹುಸಿಯಾದ್ವು. ಅವರ ಸಂಭ್ರಮ ಸುಳ್ಳಿನ ಸಂಭ್ರಮಾಚರಣೆ. ಇದರ ಬಗ್ಗೆ ಕಿರುಹೊತ್ತಿಗೆ ತಂದಿದ್ದೇವೆ. ‘ವರ್ಷ ಎಂಟು ಅವಾಂತರಗಳು ನೂರೆಂಟು’ ಪುಸ್ತಕ. ಇದನ್ನ ನಾವು ಹೊರತಂದಿದ್ದೇವೆ. ಹೈದ್ರಾಬಾದ್ ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಇದೆ. ಇದೇ ಸಂದರ್ಭದಲ್ಲಿ ನಾವು ಬಿಡುಗಡೆ ಮಾಡಿದ್ದೇವೆ. ನಮ್ಮ ಪ್ರಶ್ನೆಗೆ ಅವರು ಉತ್ತರ ಕೊಡಬೇಕು. ಪುಸ್ತಕ ರಿಲೀಸ್ ಮಾಡಿದ ಸಿದ್ದರಾಮಯ್ಯ

ಸೌಹಾರ್ಧ ವಾತಾವರಣ ನಿರ್ಮಾಣ ಮಾಡಿದ್ದೇವೆ. ಹೀಗಂತ ದೊಡ್ಡ ದೊಡ್ಡ ಜಾಹೀರಾತು ಕೊಟ್ಟಿದ್ದಾರೆ. ರಾಜ್ಯದಲ್ಲಿ‌ಎರಡು ದಿನ ಜಾಹಿರಾತು ಕೊಟ್ಟಿದ್ದಾರೆ. ಮೋದಿ ಗುಜರಾತ್ ನಲ್ಲಿ 12 ವರ್ಷ ಸಿಎಂ ಆಗಿದ್ರು. ಪ್ರಧಾನಿಯಾಗಿ ಎಂಟು ವರ್ಷ ಆಯ್ತು. ಭ್ರಷ್ಟಾಚಾರ ತೆಗೆದುಹಾಕ್ತೇವೆ ಅಂದ್ರು.

ಯುವಕರಿಗೆ 2 ಕೋಟಿ ಉದ್ಯೋಗ ಕೊಡ್ತೇವೆ. ರೈತರ ಆದಾಯ ದುಪ್ಪಟ್ಟು ಮಾಡ್ತೇವೆ. ಬೆಲೆ ಏರಿಕೆ ತಡೆದು ಅಚ್ಚೇದಿನ್ ತರ್ತೇವೆ ಎಂದ್ರು. ಆದರೆ ಅವರು ಹೇಳಿದ ಭರವಸೆ ಈಡೇರಲಿಲ್ಲ. ಇವರ ಮಾತು ನಂಬಿ ಜನ 2014 ರಲ್ಲಿ ಗೆಲ್ಲಿಸಿದ್ರು. ಅದರೆ ಕೊಟ್ಟ ಭರವಸೆ ಈಡೇರಿಸಲಿಲ್ಲ. ಜನ ಬಹಳ ಬೇಸರಗೊಂಡಿದ್ದರು. ಆಗ ಪುಲ್ವಾಮ, ಬಾಲ್ಕೋಟ್ ಘಟನೆ ಮುಂದೆ ತಂದ್ರು. ಜನರಿಂದ ವಾಸ್ತವ ಸಮಸ್ಯೆ ಮರೆಮಾಚಿದ್ರು.

2019 ರಲ್ಲಿಯೂ ಗೆದ್ದು ಬಂದ್ರು. 22.9 ಕೋಟಿ ಜನ ಅವರಿಗೆ ಮತ ಹಾಕಿದ್ರು. ಕೇಂದ್ರ ಸರ್ಕಾರದ ವಿರುದ್ಧ ಸಿದ್ದು ಆಕ್ರೋಶ. ಇವತ್ತು ಬೆಲೆ ಏರಿಕೆ ಗಗನ ಮುಟ್ಟಿದೆ. ಮನಮೋಹನ್ ಕಾಲದಲ್ಲಿ ಬ್ಯಾರಲ್ 120 ಡಾಲರ್. ಆದರೂ ಪೆಟ್ರೋಲ್ ಲೀಟರ್ 63 ರೂ ಇತ್ತು. ಇವರು ಬಂದ ಮೇಲೆ ಕಚ್ಚಾತೈಲ ಬೆಲೆ ಕಡಿಮೆಯಾಯ್ತು. ಬ್ಯಾರಲ್ ಬೆಲೆ 39 ಡಾಲರ್ ಗೆ ಬಂತು. ಆದರೂ ಪೆಟ್ರೋಲ್ ಬೇಲೆ ಏರ್ತಾನೇ ಇದೆ

8 ವರ್ಷದಲ್ಲಿ ರಾಜ್ಯದಿಂದ ಸಂಗ್ರಹವಾದ ತೆರಿಗೆ 19 ಲಕ್ಷ ಕೋಟಿ. ಆದರೆ ಅವರು ವಾಪಸ್ ಕೊಟ್ಟಿದ್ದು 1,29,766 ಮಾತ್ರ. ಕಳೆದ 1 ವರ್ಷದಲ್ಲಿ 3 ಲಕ್ಷ ಕೋಟಿ ತೆರಿಗೆ ಸಂಗ್ರಹ. ನಮಗೆ 48% ವಾಪಸ್ ಬರಬೇಕು. 19 ಲಕ್ಷ ಕೋಟಿಯಲ್ಲಿ 8 ಲಕ್ಷ ಕೋಟಿ ಬರಬೇಕು. ಆದರೆ ಕೊಟ್ಟಿರುವುದು 4 ಲಕ್ಷ ಕೋಟಿ ಮಾತ್ರ. ಭಿಕ್ಷೆ ಕೊಟ್ಟವರಂತೆ ಹೇಳ್ತಾರೆ. ಕೊಟ್ಟಿರುವುದು ನಮ್ಮ ರಾಜ್ಯದಿಂದ ಸಂಗ್ರಹಿಸಿದ ಹಣದಲ್ಲಿ ಎಂದು ಕಿಡಿಕಾರಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನೀವೂ ಐಫೋನ್ ಪ್ರಿಯರಾ..? ಇಲ್ಲಿದೆ ನೋಡಿ ಬಿಗ್ ಆಫರ್..!

ಇತ್ತಿಚೆಗಂತು ಯಾರ ಕೈನಲ್ಲಿ ನೋಡೊದರೂ ಐಫೋನ್ ಇದ್ದೇ ಇರುತ್ತದೆ. ಅದರಲ್ಲೂ ಹೊಸ ಹೊಸ ವರ್ಷನ್ ಬರ್ತಾನೆ ಇರುತ್ತದೆ. ಹೊಸ ವರ್ಷನ್ ಐಫೋನ್ ಬೆಲೆ ಗಗನ ಮುಟ್ಟಿರುತ್ತದೆ. ಹೀಗಾಗಿ ಐಫೋನ್ ತೆಗೆದುಕೊಳ್ಳಬೇಕೆಂಬ ಬಯಕೆ ಇರುವವರಿಗೆ ಸಂಕಟ,

ಚಿತ್ರದುರ್ಗ ಲೋಕಸಭಾ ಚುನಾವಣೆ, ಹೊರಗಿನವರಿಗೆ ಮಣೆ : ರಘು ಚಂದನ್ ಬೇಸರ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮಾ. 28 :  ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸ್ಥಳೀಯರಿಗೆ ಬಿಜೆಪಿ ಟಿಕೆಟ್ ನೀಡದೆ 500

ಚಿತ್ರದುರ್ಗ ಲೋಕಸಭಾ ಚುನಾವಣೆ ಅಧಿಸೂಚನೆ ಪ್ರಕಟ | ಏಪ್ರಿಲ್ 4ರ ವರೆಗೆ ನಾಮಪತ್ರ ಸ್ವೀಕಾರ

ಚಿತ್ರದುರ್ಗ. ಮಾರ್ಚ್. 28: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರ ಆಯ್ಕೆಗೆ ಮಾರ್ಚ್.28 ಗುರುವಾರದಂದು ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸ್ವೀಕರಿಸಲಾಗುತ್ತಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.‌ ನಂ.18 ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ

error: Content is protected !!