ಸಿನಿಮಾ ನೋಡೋದಕ್ಕೆ ಬನ್ನಿ ಎಂದ ಸ್ಪೀಕರ್ : ನಾನ್ ಬರಲ್ಲ ಎಂದ ಸಿದ್ದರಾಮಯ್ಯ : ಯಾಕೆ ಗೊತ್ತಾ..?

suddionenews
1 Min Read

ಸದ್ಯ ಬಾಲಿವುಡ್ ನ ದಿ ಕಾಶ್ಮೀರ್ ಫೈಲ್ ಸಿನಿಮಾ ಬರೀ ಚಿತ್ರರಂಗದ ಅಂಗಳದಲ್ಲಿ ಮಾತ್ರವಲ್ಲ, ರಾಜಕೀಯ ವಲಯದಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಸಿನಿಮಾ ನೋಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅದಾಗಲೇ ಸಿನಿಮಾಗೆ ತೆರಿಗೆ ವಿನಾಯಿತಿಯನ್ನು ನೀಡಿದ್ದಾರೆ.

ಇದೀಗ ಇಂದು ಸದನದಲ್ಲೇ ಎಲ್ಲಾ ಶಾಸಕರಿಗೂ ನಾಳೆ ಸಿನಿಮಾ ನೋಡುವ ಅವಕಾಶ ನೀಡಿದ್ದಾರೆ. ಇಂದು ಸದನದಲ್ಲಿ ಈ ಬಗ್ಗೆ ಘೋಷಣೆ ಮಾಡಿದ ಸಭಾಪತಿ, ನಾಳೆ 6.45ಕ್ಕೆ ಮಂತ್ರಿಮಾಲ್ ನಲ್ಲಿ ಈ ಸಿನಿಮಾ ಸ್ಕ್ರೀನಿಂಗ್ ಇದೆ ಎಂಬ ಮಾಹಿತಿ ನೀಡಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಏನದು ಸಿನಿಮಾ..? ನಾನಂತು ಸಿನಿಮಾ ನೋಡಲು ಹೋಗುತ್ತಿಲ್ಲ. ಆಸಕ್ತಿ ಇರುವವರು ಹೋಗುತ್ತಾರೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ನೀಡಿದ ಸಿನಿಮಾ ನೋಡುವ ಆಫರ್ ಅನ್ನ ತಿರಸ್ಕರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *