
ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಎಂಬ ಗೊಂದಲವಿತ್ತು. ಆ ಗೊಂದಲಕ್ಕೆ ಸಿದ್ದರಾಮಯ್ಯ ಅವರೇ ತೆರೆ ಎಳೆದಿದ್ದರು. ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಆದರೆ ಕೆಲವೊಬ್ಬರು ನೇರವಾಗಿಯೇ ಸಲಹೆಯನ್ನು ನೀಡಿದ್ದರು. ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಹಲವರು ಕೋಲಾರ ಸೇಫ್ ಅಲ್ಲ ಎಂದೇ ಹೇಳಿದ್ದರು. ಆದರೂ ಸಿದ್ದರಾಮಯ್ಯ ಕೇಳಿರಲಿಲ್ಲ. ಈಗ ಹೈಕಮಾಂಡ್ ಕೂಡ ಕೋಲಾರ ಬೇಡ ಎಂದೇ ಹೇಳುತ್ತಿದೆ.

ಈ ಬಗ್ಗೆ ವರ್ತೂರ್ ಪ್ರಕಾಶ್ ಪ್ರತಿಕ್ರಿಯೆ ನೀಡಿದ್ದು ಸವಾಲು ಹಾಕಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ವರ್ತೂರ್ ಪ್ರಕಾಶ್, ನಾನು ಒಂದೂವರೆ ತಿಂಗಳ ಹಿಂದೆಯೇ ಹೇಳಿದ್ದೆ. ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲಲ್ಲ ಎಂದು. ಕೋಲಾರದಲ್ಲಿ ಅವರು ನಿಂತರೆ ಸ್ಪರ್ಧೆ ಕಷ್ಟ ಎಂದೇ ಹೇಳಿದ್ದೆ. ಈಗ ಅವರದ್ದೇ ಪಕ್ಷದವರು ಅದನ್ನು ಒಪ್ಪಿಕೊಂಡಿದ್ದಾರೆ. ನಾನು ಈಗಲೂ ಸಿದ್ದರಾಮಯ್ಯ ಅವರಿಗೆ ಆಗ್ರಹಿಸುತ್ತೇನೆ. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ.
ಸಿದ್ದರಾಮಯ್ಯ ಅವರನ್ನು ಮೈಸೂರು ಹುಲಿ ಅಂತಾರೆ. ಈಗ ಆಡಿದ ಮಾತನ್ನು ಉಳಿಸಿಕೊಳ್ಳಲಿಲ್ಲ ಅಂದ್ರೆ ಏನಾಗುತ್ತೆ..? ಅವರು ಕೋಲಾರಕ್ಕೆ ಬರಬೇಕು, ಕೋಲಾರದಿಂದಾನೇ ನಿಲ್ಲಬೇಕು. ಈಗ ಅವರೇನಾದರೂ ಕ್ಷೇತ್ರ ಬಿಟ್ಟು ಹೋದರೆ ನನಗೆ ಹೆದರಿಕೊಂಡು ಹೋದರೂ ಎಂದು ಮಾತನಾಡಿಕೊಳ್ಳುತ್ತಾರೆ ಎಂದಿದ್ದಾರೆ.
GIPHY App Key not set. Please check settings