ಮೈಸೂರು: ವ್ಯಾಪಾರ ದಂಗಲ್ ಬಗ್ಗೆ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಮಾಜದಲ್ಲಿ ಅನೇಕ ಚರ್ಚೆಗಳು ಬರುತ್ತವೆ. ಆದರೆ ನಮ್ಮ ಸರ್ಕಾರದ ನಿಲುವಲ್ಲಿ ಇಡೀ ಸಮಾಜ ಒಟ್ಟಾಗಿ ಒಂದಾಗಿ ಬದುಕಬೇಕಾಗಿದೆ. ಯಾರೋ ಒಬ್ಬರು ಹೇಳಿರುತ್ತಾರೆ. ಒಬ್ಬೊಬ್ಬರು ಟೀಕೆ ಮಾಡುತ್ತಾರೆ, ಇನ್ನೊಬ್ಬರು ಮರು ಟೀಕೆ ಮಾಡುತ್ತಾರೆ. ಸರ್ಕಾರ ಯಾವತ್ತು ಕೂಡ ಎಲ್ಲರನ್ನು ಒಳಗೊಂಡಂತೆ ಆಡಳುತ ಮಾಡುತ್ತೆ. ಎಲ್ಲರಿಗೂ ಸಮಾನ ನ್ಯಾಯ ಕಿಡೋದಕ್ಕೆ ಬದ್ಧವಾಗಿದೆ. ಪ್ರಚಾರದ ಹುಚ್ಚು ಸರ್ಕಾರಕ್ಕಿಲ್ಲ. ಭಾವನೆಗಳನ್ನು ಅರ್ಥ ಮಾಡಿಕೊಂಡು, ಸಾಮಾಜಿಕ ನ್ಯಾಯದ ಚೌಕಟ್ಟಿನಲ್ಲಿ ಕೆಲಸ ಮಾಡುವುದು ಸರ್ಕಾರದ ಜವಬ್ದಾರಿ ಅದನ್ನು ಅರ್ಥಪೂರ್ಣವಾಗಿ ಮಾಡುತ್ತದೆ.
ಕಾಂಗ್ರೆಸ್ ನವರು ಯಾವತ್ತಾದ್ರೂ ಬಿಜೆಪಿಯನ್ನು ಹೊಗಳಿದ್ದಾರಾ..? ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ಯಾವಾಗಲೂ ಬಿಜೆಪಿ ಸರ್ಕಾರ ಸಾಮರಸ್ಯಕ್ಕೆ ಬದ್ಧವಾಗಿದೆ ಅಂತ ಹೇಳಿದ್ದಾರಾ..? ಬಿಜೆಪಿಯ ಬೊಮ್ಮಾಯಿ ಅವರ ಸರ್ಕಾರ ಸರ್ವರಿಗೂ ಸಾಮಾಜಿಕ ನ್ಯಾಯ ಕೊಡುವಂತೆ, ಕಠಿಣವಾದ ಸಾಮಾಜಿಕ ಸುವ್ಯವಸ್ಥೆ ಕಾಪಾಡಿಕೊಂಡು ಬಂದಿದೆ. ಹಿಜಾಬ್ ಸೇರಿದಂತೆ ಯಾವುದೇ ಸಮಸ್ಯೆ ಬಂದಾಗಲೂ ಕಾನೂನಿನಲ್ಲಿ ಯಾವ ರೀತಿ ಪರಿಹಾರವಾಗುತ್ತೆ, ನ್ಯಾಯಾಲಯ ಏನು ಆದೇಶ ಕೊಡುತ್ತದೆ ಅದರ ಮೇಲೆಯೇ ನಡೆಯುತ್ತದೆ.
ಕೆಲವು ಆರೋಪಗಳನ್ನು ಎದುರಿಸಿದ್ದರು ಸಹ ಬಿಜೆಪಿ ಸರ್ಕಾರ ಸರಿಯಾದ ಧಿಕ್ಕಿನಲ್ಲಿ ಬಿಜೆಪಿ ಸರ್ಕಾರ ನಡೆಯುತ್ತದೆ. ವ್ಯವಸ್ಥಿತವಾದಂತ, ಯೋಜನೆ ಬದ್ಧವಾದಂತ ಆಡಳಿತ ನಡೆಸುತ್ತಿದೆ. ಯಾವುದೇ ಆತಂಕಗಳು ಬೇಡ ಎಂದಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…