ತಮ್ಮ ಹಳೆ ಸ್ನೇಹಿತರು ಗ್ಯಾರಂಟಿ ಕೊಟ್ಟರಷ್ಟೇ ಸಿದ್ದರಾಮಯ್ಯ ಕೋಲಾರದ ಆಯ್ಕೆ..!

suddionenews
1 Min Read

ಕೋಲಾರ: ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರ ಅಷ್ಟು ಸೇಫ್ ಅಲ್ಲ ಎನ್ನಲಾಗುತ್ತಿದೆ. ಯಾಕಂದ್ರೆ ಸಿದ್ದರಾಮಯ್ಯ ಅವರನ್ನು ಕರೆಸಿದವರೇ ಅವರಿಗೆ ಬೆಂಬಲ ನೀಡುತ್ತಿಲ್ಲ, ಒಳಗೊಳಗೆ ಏನೇನೋ ನಡೆಯುತ್ತಿರುವ ಕಾರಣಸ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಗೆಲ್ಲುವುದು ಸುಲಭವಲ್ಲ ಎಂದೇ ಹೇಳಲಾಗುತ್ತಿತ್ತು. ಇದೊಇಗ ಅವರನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟ ಅಹಿಂದ ಟೀಂ ಅಖಾಡಕ್ಕೆ ಧುಮುಕಿದೆ.

ಇಡೀ ಕೋಲಾರದ ಸಂಪೂರ್ಣ ವರದಿ ಕೊಡುವ ಜವಬ್ದಾರಿಯನ್ನು ಟೀಂ ಅಹಿಂದ ಒಪ್ಪಿಕೊಂಡಿದೆ. ಎಲ್ಲಾ ವರದಿಯ ಬಳಿಕ ಹಳೇ ಟೀಂ ಗ್ರೀನ್ ಸಿಗ್ನಲ್ ಕೊಟ್ಟರಷ್ಟೇ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ. ಹೀಗಾಗೊಯೇ ಅಹಿಂದ ಕಟ್ಟಲು ಸಹಕಾರ ನೀಡಿದ್ದ ಟೀಂ ಜೊತೆಗೆ ಇಂದು ಸಿದ್ದರಾಮಯ್ಯ ಎರಡು ರಹಸ್ಯ ಸಭೆ ನಡೆಸಿದ್ದಾರೆ ಎನ್ನುತ್ತಿವೆ ಆಪ್ತ ಮೂಲಗಳು.

ಈಗ ಅಹಿಂದ ಟೀಂನಿಂದ ಕೋಲಾರದಲ್ಲಿ ಪಿನ್ ಟು ಪಿನ್ ಕಾರ್ಯಾಚರಣೆ ನಡೆಯಲಿದೆ‌. ಒಳ ಏಟುಗಳು ಏನು, ಜನರ ಅಭಿಪ್ರಾಯವೇನಾಗಿದೆ..? ಬೆಂಬಲ ನೀಡುತ್ತೀವಿ ಅನ್ನುವವರ ಅಭಿಪ್ರಾಯವೇನು ಹೀಗೆ ಎಲ್ಲದನ್ನು ಟೀ ಅಹಿಂದ ಕಲೆ ಹಾಕಲಿದೆ. ಬಳಿಕವೇ ಸಿದ್ದರಾಮಯ್ಯ ತಮ್ಮ ಕ್ಷೇತ್ರವನ್ನು ಅಧಿಕೃತಗೊಳಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *