ಬೆಂಗಳೂರು: ವಿಧಾನಪರಿಷತ್ ನಲ್ಲಿ ಸಚಿವ ಈಶ್ವರಪ್ಪ ಮಾತನಾಡುವಾಗ ಕಾಂತರಾಜು ವರದಿ ಬಗ್ಗೆ ಮಾತನಾಡಿದ್ದಾರೆ. ಕಾಂತರಾಜು ವರದಿ ಸ್ವೀಕರಿಸದೆ ಮೋಸ ಮಾಡಿದರು. ಸಿದ್ದರಾಮಯ್ಯ ಹಿಂದುಳಿದ ವರ್ಗಕ್ಕೆ ಮೋಸ ಮಾಡಿದರು. ಕಾಂತರಾಜು ವರದಿ ಬಗ್ಗೆ ನಾವೂ ಪರಿಶೀಲನೆ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿ ಚುನಾವಣೆ ಮಾಡುತ್ತೇವೆ.
ಜಿಲ್ಲಾ ಪಂಚಾಯತ್, ತಾ ಪಂಚಾಯತ್ ಚುನಾವಣೆಗೆ ನಾವೂ ಸಿದ್ಧವಿದ್ದೇವೆ. ಸೀಮಾ ನಿರ್ಣಯ ಸಮಿತಿ ಬಂದ ಬಳಿಕ ನಿರ್ಧಾರ ಮಾಡುತ್ತೇವೆ. ವರದಿ ಬರುವವರೆಗೂ ಏನು ಮಾಡಲು ಆಗಲ್ಲ.
ಒಬಿಸಿ ಮೀಸಲಾತಿಯನ್ನು ಸದ್ಯಕ್ಕೆ ಕೊಡುವ ಸ್ಥಿತಿಯಿಲ್ಲ. sc, St ಜನರಲ್ ಕ್ಯಾಟಗರಿ ಇಟ್ಟುಕೊಂಡು ಚುನಾವಣೆ ನಡೆಸಲಾಗುತ್ತೆ. ಯಾಕಂದ್ರೆ ಚುನಾವಣೆ ಮಾಡುವಂತೆ ಸುಪ್ರೀಂ ಕೋರ್ಟ್ ಹೇಳಿದೆ. 2010ರಿಂದ ಇದನ್ನ ಯಾರು ನೋಡಿಕೊಂಡು ಬಂದಿಲ್ಲ. ಈ ಬಗ್ಗೆ ಸಿಎಂ ಬೊಮ್ಮಾಯಿ ಜೊತೆ ಸಭೆ ಮಾಡಿದ್ದೇವೆ. ಆದಷ್ಟು ಬೇಗ ಒಬಿಸಿಗಳಿಗೆ ಅವಕಾಶ ನೀಡಿ ಚುನಾವಣೆ ಮಾಡುವುದಕ್ಕೆ ಯತ್ನಿಸುತ್ತೇವೆ ಎಂದಿದ್ದಾರೆ.
ಬೆಂಗಳೂರು ರಿಪೇರಿ ಮಾಡಲು ವಿಶ್ವಸಂಸ್ಥೆ ಬಂದರೂ ಆಗಲ್ಲ ಎಂದು MLC ಪಿ ಆರ್ ರಮೇಶ್ ಪ್ರಶ್ನೆಗೆ ಸಚಿವ ಈಶ್ವರಪ್ಪ ಉತ್ತರ ನೀಡಿದ್ದಾರೆ. ಬೆಂಗಳೂರಿನಲ್ಲಿ ಎಲ್ಲೆಲ್ಲೋ ಮನೆ ನಿರ್ಮಾಣವಾಗಿದೆ. ಬೆಂಗಳೂರು ರಿಪೇರಿಗೆ ಸಂಪುಟ ಉಪ ಸಮಿತಿ ರಚಿಸಿದ್ದೇವೆ. ಅರಣ್ಯ ಇಲಾಖೆ ಜೊತೆ ಚರ್ಚಿಸಿ ಜನರಿಗೆ ಅನುಕೂಲ ಮಾಡ್ತೇವೆ. ಕೊಳಚೆ ನೀರು ಕೆರೆಗಳಿಗೆ ಹೋಗದಂತೆ ಕ್ರಮ ಕೈಗೊಳ್ಳುತ್ತೇವೆ. 554 ಕೆರೆ ಅಭಿವೃದ್ಧಿಗೆ ಯೋಜನಾ ವರದಿ ರೆಡಿ ಮಾಡುತ್ತಿದ್ದೇವೆ ಎಂದಿದ್ದಾರೆ.
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 24 :…