ಜೂ.08 ರಂದು ಶ್ರೀ ಉಮಾಮಹೇಶ್ವರಿ ಅಮ್ಮನವರ ನೂತನ ದೇವಸ್ಥಾನ ಲೋಕಾರ್ಪಣೆ

suddionenews
2 Min Read

ವರದಿ ಮತ್ತು ಫೋಟೋ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ : ಮೆದೇಹಳ್ಳಿ ಗ್ರಾಮದಲ್ಲಿ ಶ್ರೀ ಉಮಾಮಹೇಶ್ವರಿ ಅಮ್ಮನವರ ನೂತನ ದೇವಸ್ಥಾನ ಅನಾವರಣ, ಕಳಸಾರೋಹಣ, ಕುಂಬಾಭಿಷೇಕ, ಪ್ರಾಣ ಪ್ರತಿಷ್ಠಾಪನೆ ಜೂ.8 ರಿಂದ 10 ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.

ಜೂ. 8 ರಂದು ಬೆಳಿಗ್ಗೆ 6 ಕ್ಕೆ ಗಂಗಾಪೂಜೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ, ಧ್ವಜಾರೋಹಣ, ಅಂಕುರಾರ್ಪಣೆ, ಕಳಶ ಸ್ಥಾಪನೆ, ರಕ್ಷಾಸೂತ್ರ ಧಾರಣೆ, ಯಾಗಶಾಲಾ ಪ್ರವೇಶ, ನವಗ್ರಹ ಆರಾಧನೆ, ವಾಸ್ತುಪೂಜೆ, ಸಕಲ ಕಲಶಗಳ ಆವಾಹನೆ, ಪಿಂಡಿಕಾ ಸ್ಥಾಪನೆ, ನಿಧಿ ಸ್ಥಾಪನೆ, ಅಗ್ನಿ ಸ್ಥಾಪನೆ, ಗಣ ಹೋಮ, ನವಗ್ರಹ ಹೋಮ, ವಾಸ್ತು ಹೋಮ, ರಕ್ಷೆಯಘ್ನ ಹೋಮ, ವಿಜಯದುರ್ಗ ಹೋಮ, ಅಮ್ಮನವರಿಗೆ ಆದಿವಾಸಗಳು, ಲಘು ಪೂರ್ಣಾಹುತಿ, ಜಲಾಧಿವಾಸ, ಕ್ಷೀರಾಧಿವಾಸ, ಧ್ಯಾನಧಿವಾಸ ನಂತರ ಬೆಳಿಗ್ಗೆ 9 ಕ್ಕೆ ಗ್ರಾಮದ ಸಕಲ ದೇವತೆಗಳ ಆಗಮನ.

9 ರಂದು ಬೆಳಿಗ್ಗೆ 5 ಗಂಟೆಗೆ ಸುಪ್ರಭಾತ, ಮಹಾಲಕ್ಷ್ಮಿ ಹೋಮ, ವೇದ ಪಠಣ, ಸಕಲ ಕಳಸಗಳ ಆರಾಧನೆ, ಪುಷ್ಪಾಧಿವಾಸ, ಚಿತ್ರಕಲಾಧಿವಾಸ, ರತ್ನಾಧಿವಾಸ, ಲಘುಪೂರ್ಣಾಹುತಿ, ಶಯನಾಧಿವಾಸ ನೆರವೇರಲಿದೆ.

10 ರಂದು ಪ್ರಾತಃಕಾಲ 4-20 ರಿಂದ 5 ರವರೆಗೆ ಅಮ್ಮನವರ ವಿಗ್ರಹ ಪ್ರತಿಷ್ಟಾಪನೆ, ಕಳಸಾವಾಹನೆ, ಪ್ರಾಣ ಪ್ರತಿಷ್ಟಾಪನೆ, ಬಲಿ ಹರಣ, ಧೇನು ದರ್ಶನ, ದರ್ಪಣ ದರ್ಶನ ಕುಂಬಾಭಿಷೇಕ, ಕಳಸ ಪ್ರತಿಷ್ಟಾಪನೆ, ಪ್ರತಿಷ್ಟಾಂಗ ಹೋಮ, ಕಳಾಹೋಮ, ಪ್ರಧಾನ ಬಲಿ, ಪೂರ್ಣಾಹುತಿ, ಅವಧಾನ ಸೇವೆ, ಅಷ್ಟೋತ್ತರ, ಸಕಲ ದೇವತೆಗಳಿಗೆ ಗೌರವ ಸಮರ್ಪಣೆ, ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗವಿರುತ್ತದೆ.
ಸಂಜೆ 6 ಗಂಟೆಗೆ ನಡೆಯುವ ಧಾರ್ಮಿಕ ಸಭೆಯ ಸಾನಿಧ್ಯವನ್ನು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಇವರುಗಳು ವಹಿಸಲಿದ್ದಾರೆ.

ಬೃಹನ್ಮಠದ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಕಾರ್ಯಕ್ರಮ ಉದ್ಗಾಟಿಸಲಿದ್ದು, ವಿ.ಎಸ್.ಎಸ್.ಎನ್. ಸೊಸೈಟಿಯ ಅಧ್ಯಕ್ಷ ಎಂ.ಸಿ.ರೇವಣ್ಣ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಮಾಜಿ ಸದಸ್ಯ ರಘು ಆಚಾರ್, ಬಿ.ಎ.ಲಿಂಗಾರೆಡ್ಡಿ, ಅಂತರಾಷ್ಟೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹನುಮಲಿ ಷಣ್ಮುಖಪ್ಪ, ವಾಣಿಜ್ಯೋದ್ಯಮಿ ಕೆ.ಸಿ.ವೀರೇಂದ್ರ ಪಪ್ಪಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹೆಚ್.ಮಂಜಣ್ಣ, ಮೆದೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಧನ್ಯಕುಮಾರ್ ಇವರುಗಳು ಆಗಮಿಸಲಿದ್ದಾರೆ.

10 ರಂದು ಬೆಳಿಗ್ಗೆ 11 ಕ್ಕೆ ನಡೆಯುವ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯವನ್ನು ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿಗಳು, ಹೊಸದುರ್ಗ ಬ್ರಹ್ಮವಿದ್ಯಾನಗರ ಭಗೀರಥ ಪೀಠದ ಡಾ.ಪುರುಷೋತ್ತಮಾನಂದಪುರಿ ಸ್ವಾಮಿಗಳು ವಹಿಸಲಿದ್ದಾರೆ.

ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಧಾರ್ಮಿಕ ಸಭೆಯನ್ನು ಉದ್ಘಾಟಿಸಲಿದ್ದು, ಮೆದೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಭಾಗ್ಯಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ, ನಿರ್ಮಿತಿ ಕೇಂದ್ರದ ಕೆ.ಜಿ.ಮೂಡಲಗಿರಿಯಪ್ಪ ಇವರುಗಳು ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 12-30 ರಿಂದ ಅನ್ನಸಂತರ್ಪಣೆಯಿರುತ್ತದೆ.
ಸಮಸ್ತ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉಮಾ ಮಹೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಮೆದೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಎಂ.ಸಿ.ಶಂಕರ್, ಅಜ್ಜಪ್ಪ, ತಿಮ್ಮಣ್ಣ, ವಿ.ಎಸ್.ಎಸ್.ಎನ್.ಅಧ್ಯಕ್ಷ ಎಂ.ಸಿ.ರೇವಣ್ಣ, ಗುತ್ತಿಗೆದಾರ ಜಯರಾಂರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕೆ.ನಿಂಗಪ್ಪ, ಹನುಮಂತಪ್ಪ, ಮಹಲಿಂಗಪ್ಪ ಇವರುಗಳು ವಿನಂತಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *