ಶೀಬಾರದಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ರಥೋತ್ಸವ

 

 

ಸುದ್ದಿಒನ್, ಚಿತ್ರದುರ್ಗ, ಫೆ. 28 : ನಗರಕ್ಕೆ ಸಮೀಪದ ಶೀಬಾರದಲ್ಲಿ ನಿನ್ನೆ ಗುರುವಾರ ಸಂಜೆ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪ್ರತಿವರ್ಷ ನಡೆಸಿಕೊಂಡು ಬರಲಾಗುತ್ತಿರುವ ಶ್ರೀ ಜಗದ್ಗುರು ಗುರುಪಾದ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಹಾಗು ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ 70ನೇ ವರ್ಷದ ರಥೋತ್ಸವ ಅದ್ದೂರಿಯಾಗಿ ನಡೆಯಿತು.

ಈ ಬಾರಿ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 150ನೇ ವರ್ಷದ ಜಯಂತೋತ್ಸವವೂ ಬಂದಿರುವ ಕಾರಣ ಅವರ ಹೆಸರಿನಲ್ಲಿಯೂ ಸೇರಿದಂತೆ ನಿನ್ನೆ ಜಾತ್ರೆಗೆ ಚಾಲನೆ ನೀಡಲಾಯಿತು. ಬಸವೇಶ್ವರರು ಹಾಗೂ ಶ್ರೀ ಗುರುಪಾದ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಭಾವಚಿತ್ರವನ್ನು ಅಲಂಕೃತಗೊಂಡ ಟ್ರಾಕ್ಟರ್‍ನಲ್ಲಿ ಶ್ರೀಮಠದಿಂದ ಜಾತ್ರೆಗೆ ತೆಗೆದುಕೊಂಡು ಹೋಗಿ ಅದರೊಂದಿಗೆ ಮೈಲಾರಲಿಂಗೇಶ್ವರ ಉತ್ಸವ ಮೂರ್ತಿಯನ್ನು ರಥದ ಮೇಲೆ ಕೂರಿಸಿ ಪೂಜಾ ವಿಧಾನಗಳನ್ನು ವಚನಗಳ ಮೂಲಕ ನೆರವೇರಿಸಿ ಸೀಬಾರದ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರ ಹರ್ಷೋದ್ಘಾರದ ನಡುವೆ ರಥೋತ್ಸವಕ್ಕೆ ಚಾಲನೆ ನೀಡಿ ರಥವನ್ನು ಎಳೆಯಲಾಯಿತು.

ಈ ಸಂದರ್ಭದಲ್ಲಿ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರ ಡಾ. ಬಸವಕುಮಾರ ಮಹಾ ಸ್ವಾಮಿಗಳು ಹಾಗೂ ದಾವಣಗೆರೆ ವಿರಕ್ತಮಠದ ಡಾ.ಬಸವ ಪ್ರಭುಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಚಾಲನೆ ನೀಡಿ ರಥೋತ್ಸವದೊಂದಿಗೆ ಹೆಜ್ಜೆ ಹಾಕಿದರು.

ರಥೋತ್ಸವ ಪ್ರಾರಂಭದೊಂದಿಗೆ ದನಗಳ ಜಾತ್ರೆಗೆ ವಿದ್ಯುಕ್ತವಾಗಿ ದೊರಕಿತು. ಮಧ್ಯಕರ್ನಾಟಕದ ಈ ಭಾಗದ ಜನಪ್ರಿಯ ದನಗಳ ಜಾತ್ರೆಗೆ ವಿಶೇಷ ಮೆರಗು ಇದೆ. ರೈತರು, ವ್ಯಾಪಾರಸ್ಥರು ಭಾಗವಹಿಸಿ ಸೇರುವ ವಿವಿಧ ತಳಿಯ ರಾಜ್ಯ ಹಾಗೂ ಬೇರೆ ರಾಜ್ಯಗಳಿಂದ ಬರುವ ರಾಸುಗಳನ್ನು ಕೊಂಡುಕೊಂಡು ಯಶಸ್ವಿಗೊಳಿಸಬೇಕೆಂದು, ಇಲ್ಲಿ ಉತ್ತಮ ರೀತಿಯ ನೀರು, ನೆರಳು ಹಾಗೂ ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು ಕೃಷಿಕರು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಂಡು ಉತ್ತಮ ರೀತಿಯ ತಳಿಯ ರಾಸುಗಳನ್ನು ಕರೆದುಕೊಂಡು ಬರಲು ತಿಳಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಜಿ.ಎಂ.ಪ್ರಕಾಶ್, ಜಿ.ಎಮ್. ಕುಮಾರ್, ಚಿದಾನಂದ ಮೂರ್ತಿ, ಸತೀಶ್ ಜಿ.ಎಂ., ಗೌಡರ ಜಯದೇವಪ್ಪ, ಜಿ.ಎಂ. ತಿಪ್ಪೇಸ್ವಾಮಿ, ಜಿ.ಎಂ. ಶಿವಮೂರ್ತಿ, ಗ್ರಾಮ ಪಂಚಾಯತಿ ಸದಸ್ಯರಾದ ಶಂಕರಮ್ಮ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ನರಸಿಂಹರಾಜು, ಶಿವಲಿಂಗಪ್ಪ.ಜಿ.ಎಂ, ಜಿ.ಎಂ. ಪುಟ್ಟಸ್ವಾಮಿ, ಜಂಬುನಾಥ್ ಸೇರಿದಂತೆ ಸೀಬಾರ ಗುತ್ತಿನಾಡಿನ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

suddionenews

Recent Posts

ಪೋಕ್ಸೋ ಹಾಗೂ ಬಾಲ್ಯ ವಿವಾಹ ತಡೆಗೆ ನಾಲ್ಕು ಹಂತದಲ್ಲಿ ಜಾರಿ ತಂಡಗಳ ರಚನೆ : ಜಿಲ್ಲಾಧಿಕಾರಿ ಸೂಚನೆ

ಚಿತ್ರದುರ್ಗ.ಎಪ್ರಿಲ್.11: ಜಿಲ್ಲೆಯಲ್ಲಿ ಪೋಕ್ಸೋ ಹಾಗೂ ಬಾಲ್ಯ ವಿವಾಹ ಪ್ರಕರಣಗಳ ತಡೆಗೆ ಸಮಗ್ರ ಯೋಜನೆ ರೂಪಿಸುವುದರೊಂದಿಗೆ ಹಳ್ಳಿ, ಗ್ರಾಮ ಪಂಚಾಯಿತಿ, ತಾಲ್ಲೂಕು…

1 hour ago

ವಕ್ಫ್ ಬಿಲ್ ವಿರೋಧಿಸಿ ಪ್ರಚೋದನಕಾರಿ ಹೇಳಿಕೆ : ಸೂಕ್ತ ಕ್ರಮಕ್ಕೆ ಬಿಜೆಪಿ ಒತ್ತಾಯ

ಸುದ್ದಿಒನ್, ದಾವಣಗೆರೆ, ಏಪ್ರಿಲ್. 11 : ಮಹಾನಗರ ಪಾಲಿಕೆಯ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ವಕ್ಫ್ ಬಿಲ್ ವಿರೋಧಿಸಿ ಪ್ರಚೋದನಕಾರಿಯಾಗಿ ಆಡಿದ…

2 hours ago

ಯತ್ನಾಳ್ ಪರವಾಗಿ ಮಾತನಾಡಿದ್ದ ಜಯಮೃತ್ಯುಂಜಯ ಸ್ವಾಮೀಜಿ; ಎಚ್ಚರಿಕೆ ನೀಡಿದ ಪಂಚಮಸಾಲಿ ಟ್ರಸ್ಟ್

ಹುಬ್ಬಳ್ಳಿ; ಇತ್ತೀಚೆಗಷ್ಟೇ ಶಾಸಕ ಯತ್ನಾಳ್ ಅವರನ್ನು ಬಿಜೆಪಿ ಉಚ್ಛಾಟನೆ ಮಾಡಿದೆ. ಆರು ವರ್ಷಗಳ ಕಾಲ ಪಕ್ಷದಿಂದ ಹೊರಗಿಟ್ಟಿದೆ. ಹೀಗಾಗಿ ಪಂಚಮಸಾಲಿ…

2 hours ago

ಹಿರಿಯೂರಿನಲ್ಲಿ ಆಲಿಕಲ್ಲು ಸಹಿತ ಮಳೆಯ ಆರ್ಭಟ : ಬೆಳೆ ಹಾನಿ

ಸುದ್ದಿಒನ್, ಹಿರಿಯೂರು, ಏಪ್ರಿಲ್. 11 : ನಗರ ಪ್ರದೇಶ ಹಾಗೂ ತಾಲೂಕಿನ ವಿವಿಧ ಕಡೆಗಳಲ್ಲಿ ಗಾಳಿ, ಗುಡುಗು, ಮಿಂಚು ಸೇರಿದಂತೆ…

2 hours ago

ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅವಿರೋಧ ಆಯ್ಕೆ ; ಯಾರೀ ನೈನಾರ್ ನಾಗೇಂದ್ರನ್..?

    ಚೆನ್ನೈ; ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ಕೊಟ್ಟ ಬಳಿಕ ಇದೀಗ ಅವಿರೋಧ ಆಯ್ಕೆ ಮಾಡಲಾಗಿದೆ.…

3 hours ago

ಗುತ್ತಿಗೆದಾರರ ಸಂಘದ ಆರೋಪ : ಸಚಿವಸಂಪುಟದಲ್ಲಿ ಏನೆಲ್ಲಾ ಚರ್ಚೆಯಾಯ್ತು ?

    ಬೆಂಗಳೂರು, ಏಪ್ರಿಲ್ 11: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಆರೋಪಗಳ ಬಗ್ಗೆ ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ಅವರ…

3 hours ago