ಸುದ್ದಿಒನ್, ಚಿತ್ರದುರ್ಗ, (ಅ.23) : ಕೇದಾರನಾಥ ಪೀಠದ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಸಂಪೂರ್ಣ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿ ಮಹಾರಾಷ್ಟ್ರದ ನಾಂದೇಡ್ ಆಶ್ರಮಕ್ಕೆ ಶನಿವಾರ ಮರಳಿದ್ದಾರೆ.
ಅಕ್ಟೋಬರ್ 20ರ ಮುಂಜಾನೆ ಎದೆನೋವು ಕಾಣಿಸಿಕೊಂಡಿದ್ದರಿಂದ ಸ್ವಾಮೀಜಿ ಅವರನ್ನು ಮುಂಬೈನ ಜಸ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ರೀಗಳಿಗೆ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದು, ಈಗ ಗುಣಮುಖರಾಗಿದ್ದಾರೆ.
ನಾಲ್ಕು ದಿನಗಳ ಚಿಕಿತ್ಸೆ ನಂತರ ಶಸ್ತ್ರ ಚಿಕಿತ್ಸೆ ಮಾಡಿ, ಹೃದಯಕ್ಕೆ ಸ್ಟಂಟ್ ಹಾಕಿ, ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಆಶ್ರಮಕ್ಕೆ ಕಳುಹಿಸಿಕೊಡಲಾಗಿದೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. ಭಕ್ತವೃಂದ ಯಾವುದೇ ರೀತಿ ಆತಂಕ ಪಡಬೇಕಾಗಿಲ್ಲ ಎಂದು ಜಗಳೂರಿನ ಗವಿಮಠದ (ಕಣ್ವಕುಪ್ಪೆ) ಶ್ರೀ ನಾಲ್ನಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.