ಚಿತ್ರದುರ್ಗದಲ್ಲಿ ಇಂಡೋ ಫಾರ್ಮ್ ನ ನೂತನ ಶೋರೂಂ ಶಿವಾಂಶ್ ಟ್ರಾಕ್ಟರ್ ಶುಭಾರಂಭ

ಸುದ್ದಿಒನ್, ಚಿತ್ರದುರ್ಗ, ಜನವರಿ. 31 : ಇಂಡೋ ಫಾರ್ಮ್ ಟ್ರಾಕ್ಟರ್ ನ ನೂತನ ಶೋರೂಂ ಶಿವಾಂಶ್ ಟ್ರಾಕ್ಟರ್ ನಗರದ ಆರ್.ಟಿ.ಒ ಕಚೇರಿ ಬಳಿ, ವಿ.ಆರ್.ಎಸ್. ಬಡಾವಣೆ, ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ನೂತನ ಶೋರೂಂ ಇಂದಿನಿಂದ ಶುಭಾರಂಭವಾಗಿದೆ.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಭರತ್.ಎಂ. ಕಾಳಿಸಿಂಗ್ ಅವರು ನೂತನ ಶೋರೂಂ ಅನ್ನು ಉದ್ಘಾಟಿಸಿ ಶುಭ ಹಾರೈಸಿದರು. ಇದೇ ವೇಳೆಗೆ ನೂತನ ಟ್ರಾಕ್ಟರ್ ಖರೀದಿಸಿದ ಮೊಳಕಾಲ್ಮೂರು ತಾಲ್ಲೂಕಿನ ರೈತ ಮಹಂತೇಶ್ ಮತ್ತು ರಾಜಣ್ಣ ಅವರಿಗೆ ಟ್ರಾಕ್ಟರ್ ಕೀಯನ್ನು ಹಸ್ತಾಂತರಿಸಿ ಶುಭ ಕೋರಿದರು.


ಶೂರೂಂ ನ ಮಾಲೀಕರಾದ ಎಸ್.ಎನ್. ಶಿವಪ್ರಕಾಶ್ ಅವರು ಮಾತನಾಡಿ, ಇಂಡೋ ಫಾರ್ಮ್ ಟ್ರಾಕ್ಟರ್ ಶೋರೂಂ ಮಾಡುವ ನಮ್ಮ ಕನಸು ಇಂದು ನನಸಾಗಿದೆ. ಈ ಶೋರೂಂ ಪ್ರಾರಂಭಿಸುವ ಉದ್ದೇಶವು ತುಂಬಾ ಸರಳವಾಗಿತ್ತು. ರೈತ ದೇಶದ ಬೆನ್ನೆಲುಬು. ನಾವು ಕೂಡಾ ರೈತ ಕುಟುಂಬದವರಾಗಿದ್ದು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯೊಂದಿಗೆ ಕೃಷಿ ಟ್ರ್ಯಾಕ್ಟರ್‌ಗಳನ್ನು ರೈತರಿಗೆ ನೀಡಬೇಕೆಂಬ ಉದ್ದೇಶದಿಂದ ಈ ಶೋರೂಂ ಪ್ರಾರಂಭಿಸಿದ್ದೇವೆ ಎಂದು ಹೇಳಿದರು.

ಟ್ರಾಕ್ಟರ್ ಬಗ್ಗೆ ಮಾಹಿತಿ ನೀಡಿದ ದೇವೇಂದ್ರ ಅವರು ಮಾತನಾಡಿ, ರೈತರಿಗಾಗಿ ಉತ್ತಮ ಗುಣಮಟ್ಟದ ಬಹು ವೈಶಿಷ್ಟ್ಯಗೊಳಿಂದ ಕೂಡಿದ ಕೈಗೆಟುಕುವ ವೆಚ್ಚದಲ್ಲಿ ನೀಡಲು ಮತ್ತು ಮಾರಾಟದ ನಂತರದ ಕಡಿಮೆ ದರದಲ್ಲಿ ಬಿಡಿಭಾಗಗಳನ್ನು ಹೊಂದಿರುವ ಅತ್ಯುತ್ತಮ ಸೇವೆಯನ್ನು ವಿಶ್ವದರ್ಜೆಯ ಕಾರ್ಯಕ್ಷಮತೆಯನ್ನು ನೀಡಲು ನಮ್ಮ ಶೋರೂಂ ಸದಾ ಸಿದ್ದವಾಗಿರುತ್ತದೆ ಎಂದರು.

ಇಂಡೋ ಫಾರ್ಮ್ ಕಂಪನಿಯು ಹಿಮಾಚಲ ಪ್ರದೇಶದ ಬಡ್ಡಿಯಲ್ಲಿ ನೆಲೆಗೊಂಡಿರುವ ಒಂದು ವಿಶಿಷ್ಟವಾದ ISO-ಪ್ರಮಾಣೀಕೃತ ಟ್ರಾಕ್ಟರ್ ಉತ್ಪಾದನಾ ಕಂಪನಿಯಾಗಿದೆ. ಅದರ ಉತ್ಪಾದನಾ ಕಾರ್ಯಾಚರಣೆಗಳ ಪ್ರಾರಂಭವು 1997 ರಲ್ಲಿ, ಅತ್ಯಾಧುನಿಕ ತಾಂತ್ರಿಕ ಸಹಯೋಗದ ಮೂಲಕ ಪ್ರಾರಂಭವಾಯಿತು. ಈಗ, ಇಂಡೋ ಫಾರ್ಮ್ ವಿಶ್ವ ದರ್ಜೆಯ ಕೃಷಿ ಟ್ರ್ಯಾಕ್ಟರ್‌ಗಳು, ಮತ್ತು ಇತರ ಹಲವಾರು ಕೃಷಿ ಉಪಕರಣಗಳ ಪ್ರಮುಖ ತಯಾರಕ ಕಂಪನಿಯಾಗಿದೆ.

ಕಂಪನಿಯ ಅತ್ಯಾಧುನಿಕ ಉತ್ಪಾದನಾ ಸೌಲಭ್ಯವು ಪ್ರಭಾವಶಾಲಿ 34 ಎಕರೆಗಳಲ್ಲಿ ವ್ಯಾಪಿಸಿದೆ, ಇದು 20 HP ಯಿಂದ 110 HP ವರೆಗಿನ ಕೃಷಿ ಟ್ರಾಕ್ಟರ್ ಮಾದರಿಗಳನ್ನು ರೂಪಿಸಲು ಸಮರ್ಪಿಸಲಾಗಿದೆ. ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಹಲವಾರು ರೂಪಾಂತರಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್.ಎಂ. ಕಾಳಿಸಿಂಗ್, ಸಿ.ಜಿ. ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಸುಮಲತಾ ಬಸ್ ಮಾಲೀಕರಾದ ಎಸ್.ವಿ. ನಾಗರಾಜ್, ವಲಯ ವ್ಯವಸ್ಥಾಪಕರಾದ ಶ್ರೀಕಾಂತ್, ಕ್ಷೇತ್ರ ಅಧಿಕಾರಿಯಾದ ನಾಗರಾಜ್ ಕೆ. ಎಂ, ಸೇರಿದಂತೆ ಶೋರೂಂ ನ ಸಿಬ್ಬಂದಿ ವರ್ಗದವರು ಹಾಜರಿದ್ದರು.

suddionenews

Recent Posts

ರತನ್ ಟಾಟಾ ಉಯಿಲ್ ನಲ್ಲಿ ಮೋಹಿನಿಗೆ 500 ಕೋಟಿ : ಹುಡುಕಾಟ ಶುರು..!

ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ರತನ್ ಟಾಟಾ ಕಳೆದ ವರ್ಷ ಇಹಲೋಕ ತ್ಯಜಿಸಿದ್ದರು. ರತನ್ ಟಾಟಾ ಅವರಿಗೆ ಮದುವೆಯಾಗಿರಲಿಲ್ಲ. ಹೀಗಾಗಿ…

8 minutes ago

ಬಗರ್‍ಹುಕುಂ ಅರ್ಜಿಗಳನ್ನು ಮರು ಪರಿಶೀಲಿಸಿ : ಕುಮಾರ್ ಸಮತಳ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 07…

14 minutes ago

ಹೈಕೋರ್ಟ್ ತೀರ್ಪು : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಭ್ರಮಾಚರಣೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

18 minutes ago

ದಾವಣಗೆರೆ ವಿಶ್ವವಿದ್ಯಾನಿಲಯ : ಹೊಳಲ್ಕೆರೆ ವಿದ್ಯಾರ್ಥಿನಿ ಗಂಗಮ್ಮ ಪ್ರಥಮ ರ‌್ಯಾಂಕ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

21 minutes ago

ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನ : ಸಚಿವ ಮಧು ಬಂಗಾರಪ್ಪ

ಚಿತ್ರದುರ್ಗ.ಫೆ.07: ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜತೆಗೆ ದೇಶದ, ರಾಜ್ಯದ ಸಾಂಸ್ಕøತಿಕ ರಾಯಬಾರಿಗಳಾಗಿ ಕಲೆ, ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಕೊಂಡ್ಯೊಯುವ ಕೆಲಸ…

28 minutes ago

15 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ : ಸಚಿವ ಮಧು ಬಂಗಾರಪ್ಪ

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಶಿಕ್ಷಣ ಇಲಾಖೆಗೆ ಈಗಾಗಲೇ 13 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಹೊಸದಾಗಿ 15…

41 minutes ago