ಇಂದು ಜೇಮ್ಸ್ ಸಿನಿಮಾ ಅದ್ಧೂರಿಯಾಗಿ ತೆರೆಕಂಡಿದೆ. ಎಲ್ಲೆಡೆ ಫ್ಯಾನ್ಸ್ ಹಬ್ಬದಂತೆ ಆಚರಣೆ ಮಾಡಿದ್ದಾರೆ. ಸಿನಿಮಾ ಉತ್ತಮ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ. ಈ ಬಗ್ಗೆ ಶಿವಣ್ಣ ಮಾತನಾಡಿದ್ದು, ಅಪ್ಪು ಇಲ್ಲ ಅಂತ ದುಃಖ ಪಡಬೇಕೋ, ಇಲ್ಲ ಜೇಮ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕೋ ಎಂದು ಗೊತ್ತಾಗ್ತಿಲ್ಲ ಎಂದಿದ್ದಾರೆ.

ಇದು ಒಂದು ರೀತಿಯ ಎಮೋಷನಲ್ ಹಬ್ಬ. ಅಪ್ಪು ಸಿನಿಮಾ ರಿಲೀಸ್ ಆಗಿದೆ. ಜನಕ್ಕೆ ಈ ಸಿನಿಮಾ ಇಷ್ಟ. ಆದ್ರೆ ಸಾಕು. ಈ ಸಮಯದಲ್ಲಿ ಜನ ನಮ್ಮ ಜೊತೆ ಇರೋದೆ ನಮ್ಮ ಶಕ್ತಿ. ಈ ಸಿನಿಮಾವನ್ನ ಹಬ್ಬದಂತೆ ಆಚರಿಸುತ್ತಿದ್ದಾರೆ. ಅದು ಖುಷಿ ಕೊಟ್ಟಿದೆ.

ಅಪ್ಪು ಅಂದ್ರೆ ನಂಗೆ ಫೇವರಿಟ್ ತಮ್ಮ. ಪುನೀತ್ ಇಲ್ಲದೆ ಫಸ್ಟ್ ಟೈಂ ಅವನ ಬರ್ತ್ ಡೇ ಮಾಡ್ತಿದ್ದೀವಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗ್ಗೆ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಮಾಧಿ ಬಳಿ ಹೋಗಿ ಪೂಜೆ ಸಲ್ಲಿಸಿದ್ದಾರೆ. ರಾಘವೇಂದ್ರ ರಾಜ್‍ಕುಮಾರ್ ಕೇಕ್ ಕತ್ತರಿಸಿ, ಅಭಿಮಾನಿಗಳ ಮುಂದೆ ಹುಟ್ಟುಹಬ್ಬ ಆಚರಿಸಿದ್ದಾರೆ.


