ಮತ್ತೆ ಶೂಟಿಂಗ್ ಹೊರಟ ‘ಶಿವನ ಪಾದ’ ಚಿತ್ರತಂಡ

suddionenews
1 Min Read

ಲಾಕ್ ಡೌನ್ ಕಾರಣದಿಂದಾಗಿ ಸಿನಿಮಾ ಚಟುವಟಿಕೆ ಮೇಲೆ ತೀರ ಪರಿಣಾಮ ಬೀರಿತ್ತು. ಆದರೆ ಈಗ ಚಿತ್ರಮಂದಿರದಲ್ಲಿ 100% ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಈ ಬೆನ್ನಲ್ಲೇ ಸಿನಿಮಾರಂಗದ ಚಟುವಟಿಕೆಗಳು ಮತ್ತೆ ಗರಿಗೆದರಿದೆ. ಹೊಸ ಹೊಸ ಸಿನಿಮಾಗಳ ಪ್ರದರ್ಶನದ ಜೊತೆ ಜೊತೆಗೆ ಈಗಾಗಲೇ ಅರ್ಧಂಬರ್ಧ ಕೆಲಸ ಪೂರೈಸಿಕೊಂಡಿದ್ದ ಸಿನಿಮಾಗಳು ತಮ್ಮ ಕಾರ್ಯಗಳನ್ನು ಮುಂದುವರಿಸಿದೆ. ಅದೇ ರೀತಿ ‘ಶಿವನಪಾದ’ ಸಿನಿಮಾ ಬಾಕಿ ಉಳಿಸಿಕೊಂಡಿರುವ ಚಿತ್ರೀಕರಣವನ್ನ ಈಗ ಮುಂದುವರೆಸಲು ಸಜ್ಜಾಗಿದೆ.

ಸಂದೀಶ್ ಹೆಚ್ .ಟಿ ಹಾಗೂ ಪೆರುಮಾಳ್ ವಿ. ನಿರ್ಮಾಣದ ಶಿವನಪಾದ ಚಿತ್ರಕ್ಕೆ ಮಾ ಚಂದ್ರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಬಂಗಾರಿ, ಬೆಟ್ಟದ ದಾರಿ, ನಡಗಲ್ಲು ಚಿತ್ರ ನಿರ್ದೇಶನ ಮಾಡಿದ್ದ ಮಾಚಂದ್ರು ಇದೀಗ ಮತ್ತೊಂದು ಹೊಸ ಸಿನಿಮಾ ಜೊತೆ ಮತ್ತೆ ಬಂದಿದ್ದಾರೆ. ‘ಶಿವನ ಪಾದ’ ಚಿತ್ರಕ್ಕೆ ತಾವೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಶೇಕಡಾ 50ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಎರಡು ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣಕ್ಕೆ ಮುಂದಿನ ವಾರದಿಂದ ತೆರೆಳಲಿದೆ.


ಈ ಚಿತ್ರ ಸಸ್ಪೆನ್ಸ್, ಥ್ರಿಲ್ಲರ್ ,ಹಾರಾರ್ ಜೊತೆಗೆ ಕ್ರೈಂ ಕಥಾನಕ ಒಳಗೊಂಡಿದೆ. ಹೀಗಾಗಿ ಈ ಚಿತ್ರದ ಮೇಲೆ‌ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿದೆ. ವಿಶೇಷವೆಂದರೆ ಸಿನಿಮಾದಲ್ಲಿ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಹೆಚ್ .ಟಿ ಸಾಂಗ್ಲಿಯಾನ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಾಗೇಶ್ ಆರ್, ಆನಂದ್, ವರ್ಷೀತಾ ಗಿರೀಶ್, ಮೇಘಾನಾ ನಟಿಸಿದ್ದು, ಬಾಲ ರಾಜವಾಡಿ, ನವೀನ್ ಡಿ ಪಡೀಲ್, ಅಂಜಲಿ, ಹರಿಹರನ್ ಬಿ.ಪಿ ಮುಂತಾದವರ ತಾರಗಣವಿದೆ. ವೀನಸ್ ಮೂರ್ತಿ ಛಾಯಾಗ್ರಾಹಣ ಚಿತ್ರಕ್ಕಿದ್ದು, ವೀರ್ ಸಮರ್ಥ್ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿಬರಲಿದೆ.

Share This Article
Leave a Comment

Leave a Reply

Your email address will not be published. Required fields are marked *