ಡಿಕೆಶಿ, ಎಂಬಿ ಪಾಟೀಲ್ ಜೊತೆಗಿನ ಫೋಟೋ ಹಾಕಿ ಗುಡ್ ಜಾಬ್ ಎಂದ ರಮ್ಯಾ.!

suddionenews
1 Min Read

ಬೆಂಗಳೂರು: ಅಶ್ವತ್ಥ್ ನಾರಾಯಣ್ ಮತ್ತು ಎಂಬಿ ಪಾಟೀಲ್ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆಯಿಂದ ಶುರುವಾದ ವಿವಾದ ನಲಪಾಡ್ ಮತ್ತು ರಮ್ಯಾ ಇಬ್ಬರು ಟ್ವೀಟ್ ನಲ್ಲಿಯೇ ಕಿತ್ತಾಡಿಕೊಂಡು ಬಂದು ನಿಂತಿದೆ. ಇದೀಗ ಜಗಳಕ್ಕೆ ಕಾರಣವಾದವರನ್ನು ಸುರ್ಜೇವಾಲ್ ಒಂದು ಮಾಡಿದ್ದು, ಕಂಡು ರಮ್ಯಾ ಗುಡ್ ಜಾಬ್ ಸುರ್ಜೆವಾಲ್ ಎಂದು ಟ್ವೀಟ್ ಮಾಡಿದ್ದಾರೆ.

ರಾಜಸ್ಥಾನದಲ್ಲಿ ಎಐಸಿಸಿ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದಿಂದಲೂ ನಾಯಕರು ಹೋಗಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಎಂಬಿ ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಈ ವೇಳೆ ರಾಜ್ಯದಲ್ಲಿ ಎದ್ದಿರುವ ಟ್ವೀಟ್ ಬಿರುಗಾಳಿಯನ್ನು ಶಮನ ಮಾಡುವುದಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲ ಪ್ರಯತ್ನಿಸಿದ್ದಾರೆ. ಅಲ್ಲಿಯೇ ಎಂಬಿ ಪಾಟೀಲ್ ಮತ್ತು ಡಿಕೆ ಶಿವಕುಮಾರ್ ಅವರ ಮನಸ್ಸಿನ ಉರಿಯನ್ನು ಶಮನಗೊಳಿಸಿ ತಣ್ಣಗೆ ಮಾಡಿದ್ದಾರೆ.

ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದೀಗ ಆ ಫೋಟೋ ಶೇರ್ ಮಾಡುವ ಮೂಲಕ ರಮ್ಯಾ ಟ್ವೀಟ್ ಮಾಡಿದ್ದಾರೆ. ಗುಡ್ ಜಾಬ್ ಎಂದು ಹೊಗಳಿ, ರಂದೀಪ್ ಸುರ್ಜೆವಾಲ ಅವರಿಗೆ ಟ್ಯಾಗ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *