ಬೆಳಗಾವಿ: ಶಿವಸೇನೆ ಪುಂಡರ ಕೆಟ್ಟ ನಡವಳಿಕೆ ತೀರಾ ಅತಿಯಾಗಿದೆ. ರಾಯಣ್ಣನ ಪ್ರತಿಮೆ ಧ್ವಂಸ ಮಾಡಿ ಕನ್ನಡಿಗರನ್ನ ಕೆಣಕಿದ್ರು, ಕನ್ನಡದ ಧ್ವಜ ಸುಟ್ಟು ಆಕ್ರೋಶ ಹುಟ್ಟುವಂತೆ ಮಾಡಿದ್ರು. ಇದೀಗ ಸಚಿವೆಯ ಕಟ್ಟಡ ಕೆಲಸವನ್ನೇ ತಡೆದಿದ್ದಾರೆ. ಪದೇ ಪದೇ ಎಂಇಎಸ್ ಪುಂಡರೇ ಕಾಲು ಕೆರೆದುಕೊಂಡು ಬರುತ್ತಿದ್ದಾರೆ.
ಕೊಲ್ಲಾಪುರ ನಗರದ ಶಾಹುನಾಕಾ ಬಳಿ ಸಚಿವೆ ಶಶಿಕಲಾ ಜೊಲ್ಲೆಗೆ ಸಂಬಂಧಿಸಿದಂತ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಆ ಕಟ್ಟಡದ ಬಳಿ ಹೋದ ಎಂಇಎಸ್ ಪುಂಡರು ದಾಳಿ ಮಾಡಿ ಕಟ್ಟಡ ಕಾಮಗಾರಿಯನ್ನ ನಿಲ್ಲಿಸಿದ್ದಾರೆ.
ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಬೆದರಿಕೆ ಹಾಕಿದ್ದಾರೆ. ಕೆಲಸ ಮಾಡದಂತೆ ಹೆಸದರಿಸಿ ಕಳುಹಿಸಿದ್ದಾರೆ. ನಮ್ಮವರನ್ನ ಬಂಧಿಸಿದ್ದಾರೆ. ಅವರನ್ನ ಬಿಡುವವರೆಗೂ ಕಟ್ಟಡ ಕಾಮಗಾರಿ ನಡೆಯಲು ಬಿಡುವುದಿಲ್ಲ. ಎಂದು ಅವಾಜ್ ಹಾಕಿದ್ದಾರೆ ಎನ್ನಲಾಗಿದೆ. ಕಟ್ಟಡ ಕಾರ್ಮಿಕರಿಗೆ ಕೆಲಸ ಮಾಡದಂತೆ ಬೆದರಿಕೆ ಹಾಕಿದ್ದಾರೆ.
ಹೀಗೆ ಪದೇ ಪದೇ ಕಾಲು ಕೆರೆದುಕೊಂಡು ಬರುತ್ತಿರುವ ಎಂಇಎಸ್ ಪುಂಡರ ನಡವಳಿಕೆಗೆ ಆಕ್ರೋಶ ವ್ತಕ್ತವಾಗಿದ್ದು, ಎಂಇಎಸ್ ಬ್ಯಾನ್ ಮಾಡಬೇಕು, ಅವರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ. ಇಂದು ಬೆಳಗಾವಿ ಚಲೋ ಹಮ್ಮಿಕೊಂಡಿದ್ದಾರೆ.
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 24 :…