ಸೋನು ಸೂದ್ ಅಂದ್ರೆ ಯಾರಿಗೆ ನೆನಪಿಲ್ಲ ಹೇಳಿ. ಕೊರಿನಾದಂತ ಕಠಿಣ ಕಾಲದಲ್ಲಿ ಸಹಾಯ ಮಾಡಿ ದೇವರೆನಿಸಿಕೊಂಡವರು. ಇದೀಗ ಅವರ ಸಹೋದರಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಸೇರಿದ ತಂಗಿಗೆ ಸೋನು ಸೂದ್ ಹಾರೈಸಿದ್ದಾರೆ.
ಮಾಳವಿಕ ಸೂದ್ ಕಾಂಗ್ರೆಸ್ ಪಕ್ಷ ಸೇರಿದ್ದು, ಮಾಹಿತಿ ಹಂಚಿಕೊಂಡಿರುವ ಸೋನು ಸೂದ್, ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ನನ್ನ ತಂಗಿ ಬಗ್ಗೆ ಹೆಮ್ಮೆ ಇದೆ. ಕಳೆದ ಕೆಲವು ವರ್ಷಗಳಿಂದ ಆಕೆ ಪಂಜಾಬ್ ನಲ್ಲಿ ವಾಸವಿದ್ದಾಳೆ. ಹೀಗಾಗಿ ಆಕೆಗೆ ಅಲ್ಲಿನ ಜನರ ಕಷ್ಟ ಚೆನ್ನಾಗಿಯೇ ಗೊತ್ತು.
ಜನರ ಸಂಪರ್ಕದಲ್ಲಿದ್ದುಕೊಂಡು ಅವರ ಸಮಸ್ಯೆ ಬಗೆಹರಿಸುತ್ತಾಳೆ. ರಾಜಕೀಯದಲ್ಲಿ ಮುಂದುವರೆಯಬೇಕು ಎಂಬುದು ಆಕೆಯ ನಿರ್ಧಾರ ಎಂದಿದ್ದಾರೆ. ಇನ್ನು ಸೋನು ಸೂದ್ ಇಷ್ಟೆಲ್ಲಾ ಸಮಾಜ ಸೇವೆ ಮಾಡುತ್ತಿರುವುದು ರಾಜಕೀಯ ಪ್ರವೇಶಕ್ಕೆ ಎಂದು ಹಲವರು ಮಾತಾಡಿಕೊಳ್ಳುತ್ತಿದ್ದರು. ಅದಕ್ಕೆ ಈಗ ಉತ್ತರ ಕೊಟ್ಟಿದ್ದು, ನಾನು ರಾಜಕೀಯ ಪ್ರವೇಶ ಮಾಡಲ್ಲ. ಆದರೆ ನನ್ನ ಸೇವೆ ಹೀಗೆಯೆ ಮುಂದುವರೆಯುತ್ತೆ ಎಂದಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…