Connect with us

Hi, what are you looking for?

ಶರಣ ಸಂಸ್ಕೃತಿ ಉತ್ಸವ

ಸಜ್ಜನರ ಸಂಗದಿಂದ ಮಹದೇವನಾಗುವ ಪರಿಯನ್ನು ಬಸವಣ್ಣನವರು ತಿಳಿಸಿಕೊಟ್ಟರು : ಶ್ರೀ ಸಂಗಮೇಶ್ವರ

ಚಿತ್ರದುರ್ಗ,(ಅ.14) : ಬಸವಣ್ಣನವರ ಕಾಲದಲ್ಲಿ ಭಕ್ತಿಯ ಪ್ರವಾಹವೇ ಹರಿಯಿತು. ಮಾನವ ಸಜ್ಜನರ ಸಂಗದಿಂದ ಮಹದೇವನಾಗುವ ಪರಿಯನ್ನು ಅವರು ತಿಳಿಸಿಕೊಟ್ಟರು ಎಂದು ಪ್ರವಚನಕಾರರಾದ ಶ್ರೀ ಸಂಗಮೇಶ್ವರ ದೇವರು ಹೇಳಿದರು.

ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಶರಣ ಸಂಸ್ಕೃತಿ ಉತ್ಸವಕ್ಕು ಮುನ್ನ ನಡೆಯುತ್ತಿರುವ ವಿಶೇಷ ಪ್ರವಚನಮಾಲೆ 2ನೇ ದಿನದ ಕಾರ್ಯಕ್ರಮದಲ್ಲಿ ಪ್ರವಚನ ಮಾಡುತ್ತ, ಅರಿತವರ ಸಂಗ ಒಂದು ದಿನದ್ದಲ್ಲ ಅನುದಿನವೂ ಬೇಕಾಗಿರುವಂಥದ್ದು. ಸೂಳೆಸಂಕವ್ವೆ ಶರಣರ ಸತ್ಸಂಗದಿಂದ ಶರಣೆ ಸಂಕವ್ವೆಯಾಗಿ ಪರಿವರ್ತನೆಯಾಗುತ್ತಾಳೆ.

ಹಾಗಾಗಿ ಬದುಕಿನಲ್ಲಿ ಕೆಟ್ಟಜನರ ಸಂಗದಿಂದ ದುಃಖಕ್ಕೆ ಒಳಗಾಗುತ್ತೇವೆ. ಸಜ್ಜನರ ಸಂಗದ ಹಾದಿಯನ್ನು ನಾವು ಹಿಡಿಯಬೇಕು. ಹಾವಿನ ಹಲ್ಲಿನಲ್ಲಿ ವಿಷವಿದೆ. ಹಾಗಾಗಿ ಯಾರೂ ಜೀವಂತ ಹಾವಿಗೆ ಹಾಲನೆರೆಯದೆ ಕಲ್ಲಿನ ನಾಗಪ್ಪನಿಗೆ ಹಾಲನ್ನೆರೆಯುವುದನ್ನು ರೂಢಿಸಿಕೊಂಡು ಬಂದಿದ್ದಾರೆ.

ಜೀವಂತ ಹಾವಿನ ಬಳಿಗೆ ಯಾರೂ ಸುಳಿಯುವುದಿಲ್ಲ. ತನು ಮನ ಭಾವ ತ್ರಿಕರಣಗಳು ಪರಿಶುದ್ಧವಾಗಬೇಕೆಂದರೆ ಅದು ಶರಣರ, ಸಜ್ಜನರ ಸಂಗದಿಂದ ಮಾತ್ರ ಸಾಧ್ಯ. ಬರೀ ದಾರಕ್ಕೆ ಬೆಲೆ ಇಲ್ಲ, ಅದಕ್ಕೆ ಹೂವಿನ ಸಂಗದಿಂದ ಶೋಭೆ ಬರುತ್ತದೆ. ಹಾಗೆ ಎಂಥ ಕೆಟ್ಟ ಮನುಷ್ಯನೂ ಕೂಡ ಸಜ್ಜನರ ಸಂಗದಿಂದ ಪರಿವರ್ತನೆಯಾಗಲು ಸಾಧ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹರಗುರು ಚರಮೂರ್ತಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಶ್ರೀ ಬೃಹನ್ಮಠ ಪ.ಪೂ. ಕಾಲೇಜಿನ ಪ್ರಾಚಾರ್ಯ ಎಸ್. ಷಡಾಕ್ಷರಯ್ಯ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆಶಾರಾಣಿ, ಲತಾಕುಮಾರಿ ಮುಂತಾದವರಿದ್ದರು.

ಜಮುರಾ ಕಲಾವಿದರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ತಿಪ್ಪೇರುದ್ರಪ್ಪ ಸ್ವಾಗತಿಸಿದರು. ವಿ.ಉಮಾಶಂಕರ ನಿರೂಪಿಸಿದರು. ಧರಣೇಂದ್ರಪ್ಪ ಶರಣು ಸಮರ್ಪಣೆ ಮಾಡಿದರು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಮೈಸೂರು : ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಮೈಸೂರಿನ ಪಬ್ಲಿಕ್ ಟಿವಿ ಹಿರಿಯ ವರದಿಗಾರ ಕೆ.ಪಿ.ನಾಗರಾಜ್ ಅವರನ್ನು ಮಾಧ್ಯಮ ಕ್ಷೇತ್ರದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಮೈಸೂರು ಜಿಲ್ಲಾಡಳಿತ ಆಯ್ಕೆ ಮಾಡಿದೆ. ಮೂಲತಃ ಚಿತ್ರದುರ್ಗದವರಾದ ಕೆ.ಪಿ.ನಾಗರಾಜ್ ಪಿಯುಸಿವರೆಗೂ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅ.31) : ಅಂದು ಕೊಂಡಿದ್ದನ್ನು ಸಾಧಿಸುವ ಸದೃಢ ಛಲದ ಹಿರಿಯ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಒಮ್ಮೆ ನಿರ್ಧರಿಸಿದರೆ ಮುಗಿಯಿತು, ನಿರ್ಧಾರ ಫಲಿತಾಂಶವಾಗುವ ತನಕ ವಿರಮಿಸುವುದಿಲ್ಲ. ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಅದಕ್ಕೆ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅ.31) : ಜಿಲ್ಲೆಯ ಹಿರಿಯ ಪತ್ರಕರ್ತ, ಕನ್ನಡಪ್ರಭ ಜಿಲ್ಲಾ ವರದಿಗಾರರಾದ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ, ಮತ್ತು ಹವ್ಯಾಸಿ ಪತ್ರಕರ್ತ ಕೆ.ಎಂ.ಮುತ್ತುಸ್ವಾಮಿ, ರಂಗಭೂಮಿ ಕಲಾವಿದ ಹೆಚ್.ಟಿ.ಸಿದ್ದನಾಯಕ, ಮರಗಾಲು ಕುಣಿತದ ಜಿ.ಗಿರೀಶ್ ಸೇರಿದಂತೆ 12 ಮಂದಿ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅಕ್ಟೋಬರ್31): ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಶನಿವಾರದ ವರದಿಯಲ್ಲಿ 38 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12,342 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಆಸ್ಪತ್ರೆ...

ಪ್ರಮುಖ ಸುದ್ದಿ

ಚಿತ್ರದುರ್ಗ: ಸಣ್ಣ ಸಣ್ಣ ರಾಜ್ಯಗಳನ್ನು ಒಂದುಗೂಡಿಸಿ ಸಮಗ್ರ ಭಾರತವನ್ನು ಪ್ರಜಾಪ್ರಭುತ್ವದಡಿಯಲ್ಲಿ ತಂದವರು ಭಾರತದ ಮೊದಲ ಉಪ ಪ್ರಧಾನಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಎಂದು ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನುಮಂತಪ್ಪ ಸ್ಮರಿಸಿದರು....

ಪ್ರಮುಖ ಸುದ್ದಿ

ಚಿತ್ರದುರ್ಗ, (ಅಕ್ಟೋಬರ್31) : ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ನಮ್ಮ ನಿತ್ಯಜೀವನದಲ್ಲಿ ಪಾಲಿಸೋಣ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ತಿಳಿಸಿದರು. ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸರಳವಾಗಿ ಆಯೋಜಿಸಿದ್ದ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅ.31) : ನಗರದ ಜೆಸಿಆರ್ ಬಡಾವಣೆಯ ನಿವಾಸಿ ಮನೋಹರ ದರ್ಶನ ಹೆಚ್.ಡಿ(40) ಇಂದು(ಶನಿವಾರ) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಅಕ್ಕ, ಅಣ್ಣ ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ....

ಪ್ರಮುಖ ಸುದ್ದಿ

ರಾಮಾಯಣ ಮತ್ತು ವಾಲ್ಮೀಕಿ ಖಾಸಗಿ ಎನ್ನುವಷ್ಟರ ಮಟ್ಟಿಗೆ ಜನರಲ್ಲಿ ಆರಾಧನಾಭಾವ ಮೂಡಿಸಿರುವುದು ಸಂತೋಷ ಮತ್ತು ಆತಂಕದ ವಿಷಯ. ರಾಮಾಯಣವನ್ನು ಕುರಿತು ಮಾತನಾಡುವಾಗ ಪೂರ್ವಗ್ರಹದಿಂದ ಮಾತಾಡಿದರೂ ವಸ್ತುನಿಷ್ಠವಾಗಿ ಮಾತಾಡಿದರೂ ತಪ್ಪೆನ್ನುವಂತೆ ಖಾಸಗಿಯಾಗಿ ಭಾವಿಸಿಕೊಳ್ಳುತ್ತಿರುವುದು. ರಾಮಾಯಣದ...

ದಿನ ಭವಿಷ್ಯ

ಶನಿವಾರ ರಾಶಿ ಭವಿಷ್ಯ-ಅಕ್ಟೋಬರ್-31,2020 ಅಶ್ವಿನಿ ಪೂರ್ಣಿಮಾ ಸೂರ್ಯೋದಯ: 06:16, ಸೂರ್ಯಸ್ತ: 17:49 ಶಾರ್ವರಿ ನಾಮ ಸಂವತ್ಸರ ಆಶ್ವಯುಜ ದಕ್ಷಿಣಾಯಣ ತಿಥಿ: ಹುಣ್ಣಿಮೆ – 20:18 ವರೆಗೆ ನಕ್ಷತ್ರ: ಅಶ್ವಿನಿ – 17:58 ವರೆಗೆ...