Connect with us

Hi, what are you looking for?

ಪ್ರಮುಖ ಸುದ್ದಿ

ವ್ಯಸನಗಳಿಗೆ ಹೆಚ್ಚು ಯುವಕರು ಬಲಿಯಾಗುತ್ತಿದ್ದಾರೆ : ಮನಃ ಶಾಸ್ತ್ರಜ್ಞ ಡಾ.ದೀಪಕ್

ಚಿತ್ರದುರ್ಗ: ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ಯಥೇಚ್ಛವಾಗಿ ಬಳಸಲಾಗುತ್ತಿದೆ. ಹಾಗೆಯೇ ತಂಬಾಕಿನ ಸೇವನೆಯೂ ಕೂಡ ಅಧಿಕವಾಗಿದೆ. ಮಾಧ್ಯಮಗಳು ಹಾಗೂ ಜಾಹೀರಾತುಗಳ ಪ್ರಭಾವದಿಂದಲೇ ಯುವಜನತೆ ಈ ವ್ಯಸನಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಬಸವೇಶ್ವರ ವೈದ್ಯಕೀಯ ಕಾಲೇಜಿನ ಮನಃ ಶಾಸ್ತ್ರಜ್ಞ ಡಾ.ದೀಪಕ್ ಹೇಳಿದರು.

ನಗರದ ಮುರುಘಾಮಠದ ಅನುಭವ ಮಂಟಪದಲ್ಲಿ ನಡೆಯುತ್ತಿರುವತಾವಿದ್ದಲ್ಲಿಯೇ ಶರಣ ಸಂಸ್ಕøತಿ ಉತ್ಸವದಲ್ಲಿ ಮಂಗಳವಾರ ನಡೆದ ವ್ಯಸನಮುಕ್ತ ಸಮಾಜ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಳೆದ 10-15 ವರ್ಷಗಳಲ್ಲಿ ಸಾಕಷ್ಟು ಜನ ವ್ಯಸನಗಳಿಗೆ ಬಲಿಯಾಗಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಿಗರೇಟ್ ಸೇವನೆಯಿಂದ ಶೇ.19 ಹಾಗೂ ಮದ್ಯಪಾನ ಸೇವನೆಯಿಂದ ಶೇ.5 ರಷ್ಟು ಬಲಿಯಾಗುತ್ತಿದ್ದಾರೆ. ದೇಶದ ಜನಸಂಖ್ಯೆಯಲ್ಲಿ ಶೇ.25ರಷ್ಟು ಜನ ಒಂದಲ್ಲಾ ಒಂದು ರೀತಿಯಲ್ಲಿ ವ್ಯಸನಕ್ಕೆ ಒಳಗಾಗುತ್ತಿದ್ದಾರೆ.

ಇದರಿಂದ ಅವರ ಕುಟುಂಬದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಿದೆ. ವ್ಯಸನಕ್ಕೆ ಬಲಿಯಾದವರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ವ್ಯಸನಕ್ಕೆ ಒಳಗಾದವರ ಮಕ್ಕಳು ಹಾಗೂ ಕುಟುಂಬದವರ ಮೇಲೂ ಕೂಡ ಇದು ದುಷ್ಪರಿಣಾಮ ಬೀರುತ್ತಿರುವುದು ಕಂಡು ಬರುತ್ತಿದೆ. ಆದ್ದರಿಂದ ಚಿಕ್ಕಮಕ್ಕಳಿಗೆ ಕೆಟ್ಟ ವ್ಯಸನಗಳಿಗೆ ಒಳಗಾಗುವುದರಿಂದ ಏನೇನು ತೊಂದರೆಗಳಾಗುತ್ತವೆ ಎಂಬ ಬಗ್ಗೆ ತಿಳುವಳಿಕೆ ನೀಡಬೇಕು ಎಂದರು.

ಯಾವ ಚಟಗಳಿಂದ ಏನು ತೊಂದರೆಯಾಗುತ್ತದೆ, ಅದು ಅವರ ವರ್ತನೆಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು, ಯುವಜನತೆ ಹೆಚ್ಚು ವ್ಯಸನಕ್ಕೆ ಒಳಗಾಗಲಿದ್ದಾರೆ, ಅವರು ಈ ವ್ಯಸನಗಳಿಂದ ಹೊರಬರಬೇಕು ಎಂದು ಹೇಳಿದರು.

ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ್ ಮಾತನಾಡಿ, ವ್ಯಸನಮುಕ್ತ ಸಮಾಜಕಟ್ಟಬೇಕಾದರೆ ಶರಣ ಸಂಸ್ಕøತಿ ಯಂತಹ ಉತ್ಸವಗಳು ಹೆಚ್ಚಾಗಬೇಕು. ನಾವೆಲ್ಲ ಮನುಷ್ಯರು, ಸ್ವಾಭಾವಿಕವಾಗಿದಯೆ ಇರುತ್ತದೆ.ಅಂತಹದಯೆಯನ್ನು ಹೊಂದಿದ ಪುಣ್ಯಕೋಟಿಯ ಸ್ಥಾನ ಶ್ರೀಮಠದ್ದಾಗಿದೆ.ಆ ಸ್ಥಳದ ಸ್ಪರ್ಶವೇ ಭಕ್ತಿಯ ಅನುಭಾವವನ್ನು ನೀಡುತ್ತದೆ ಎಂದರು.

ಇಂದು ಕೊರೊನಾ ಭಯದಿಂದ ನಮ್ಮವರನ್ನೇ ನಾವು ಮುಟ್ಟಲು ಸಾಧ್ಯವಾಗುತ್ತಿಲ್ಲ. ನಮ್ಮ ಸ್ವಾರ್ಥತನಕ್ಕಾಗಿ, ನಾವು ಮಾಡಿದದುಷ್ಕøತ್ಯಕ್ಕಾಗಿ, ನಿಸರ್ಗದ ಮೇಲೆ ಎಸಗಿದದೌರ್ಜನ್ಯದಿಂದಾಗಿ ಮುಖ ಮುಚ್ಚಿಕೊಳ್ಳುವ ಸ್ಥಿತಿ ಬಂದಿದೆ.ಪುಣ್ಯಕೋಟಿಯತ್ಯಾಗದಜೀವನ ಶರಣರು ಹಾಗೂ ಶರಣ ಸಂಸ್ಕøತಿಉತ್ಸವ ನಮಗಿಂದು ಹಾಕಿಕೊಟ್ಟಿದೆ.ಅಂತಹ ಸಂದೇಶವನ್ನು ಈ ಕೊರೊನಾದ ನಡುವೆಯೂ ನಮಗೆ ಶರಣ ಸಂಸ್ಕøತಿ ಕಲಿಸಿಕೊಡುತ್ತಿದೆ. ಹಳ್ಳಿಹಳ್ಳಿಗಳಲ್ಲಿ ಶರಣರ ಸಂದೇಶಗಳನ್ನು ಬಿತ್ತುವಂತ ಕೆಲಸ ಮಾಡಿದರೆ ಈ ಕೊರೊನಾದಂತಹ ಮಾರಿಯನ್ನುಗೆಲ್ಲಲು ಸಾಧ್ಯವಾಗುತ್ತದೆಎಂದು ಹೇಳಿದರು.

ಸಾಂಸ್ಕøತಿಕ ಸಂಜೆ ಕಾರ್ಯಕ್ರಮದಲ್ಲಿ ಕುಮಾರಿ ಜ್ಞಾನ ಐತಾಳ ಮತ್ತು ಸಂಗಡಿಗರು, ಮಂಗಳೂರಿನ ಹೆಜ್ಜೆನಾದ ನ್ಯತ್ಯ ತಂಡ ಮತ್ತು ಚಿತ್ರದುರ್ಗದ ಶ್ವೇತಾಭಟ್ ಮತ್ತು ಸಂಗಡಿಗರು ನೃತ್ಯವನ್ನು ನಡೆಸಿಕೊಟ್ಟರು.

1 Comment

1 Comment

Leave a Reply

Your email address will not be published. Required fields are marked *

You May Also Like

ದಿನ ಭವಿಷ್ಯ

ಮಂಗಳವಾರ ರಾಶಿ ಭವಿಷ್ಯ-ನವೆಂಬರ್-24,2020 ಸೂರ್ಯೋದಯ: 06:26, ಸೂರ್ಯಸ್ತ: 17:46 ಶಾರ್ವರಿ ನಾಮ ಸಂವತ್ಸರ ಕಾರ್ತಿಕ ಮಾಸ ದಕ್ಷಿಣಾಯಣ ತಿಥಿ: ದಶಮೀ – 26:41+ ವರೆಗೆ ನಕ್ಷತ್ರ: ಪೂರ್ವಾ ಭಾದ್ರ – 15:32 ವರೆಗೆ...

ಪ್ರಮುಖ ಸುದ್ದಿ

ಚಿತ್ರದುರ್ಗ : ಆರೋಗ್ಯ ಸರಿಯಿಲ್ಲದಿರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ವ್ಯಕ್ತಿಮೃತಪಟ್ಟ ಘಟನೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪಾಲೇಶ (32) ಆರೋಗ್ಯ ಸರಿಯಿಲ್ಲದ್ದಕ್ಕೆ ನೊಂದು ಸೋಮವಾರ ಮನೆಯಲ್ಲೇ ನೇಣು...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲಾ ಜೋಗಿ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಜೋಗಿಮಟ್ಟಿಯಲ್ಲಿ ಶ್ರೀ ಕಾಲಭೈರವ ಜಯಂತಿ ಆಚರಿಸಲಾಯಿತು. ನಗರದ ಚಂದ್ರವಳ್ಳಿಯ ಹುಲೆಗೊಂದಿ ಸಿದ್ದೇಶ್ವರಸ್ವಾಮಿಯ ಪೂಜೆ ಸಲ್ಲಿಸಿ ಬಳಿಕ ಕನಕದಾಸರು, ಸಂಗೋಳ್ಳಿರಾಯಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಒನಕೆ ಓಬವ್ವ...

ಪ್ರಮುಖ ಸುದ್ದಿ

ಚಿತ್ರದುರ್ಗ,(ನವೆಂಬರ್23): ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಸೋಮವಾರದ ವರದಿಯಲ್ಲಿ 33 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13,335 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಆಸ್ಪತ್ರೆ ಮತ್ತು...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲಾ ಪಂಚಾಯಿತಿ ಅಭಿವೃದ್ದಿ ಅನುದಾನದಡಿ ಹಿರೇಗುಂಟನೂರು ಕ್ಷೇತ್ರದ ನಾಲ್ಕು ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು. ಕುರುಬರಹಳ್ಳಿಯಲ್ಲಿ ಹೈಮಾಸ್ ವಿದ್ಯುತ್ ದೀಪ ಅಳವಡಿಕೆಗೆ ಭೂಮಿಪೂಜೆ, ಹುಲ್ಲೂರು...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯಲ್ಲಿ ಕೇವಲ ಐದು ತಿಂಗಳಲ್ಲಿ 24 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ 4ನೇ ತ್ರೈಮಾಸಿಕ...

ಪ್ರಮುಖ ಸುದ್ದಿ

ಚಿತ್ರದುರ್ಗ :ಭವ್ಯ ಪರಂಪರೆಯ ಕನ್ನಡವನ್ನು ಬೆಳೆಸುವ ಪ್ರಯತ್ನಕ್ಕೆ ಕೈ ಹಾಕದೇ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕವಾಗಿ ಅಧೋಗತಿಗೆ ನೂಕುತ್ತಿದ್ದೇವೆ ಎಂದು ಬಾಲಕರ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ರೇಣುಕಾ ಪ್ರಕಾಶ್ ಬೇಸರ ವ್ಯಕ್ತಪಡಿಸಿದರು....

ಪ್ರಮುಖ ಸುದ್ದಿ

ಚಿತ್ರದುರ್ಗ :ಯಾವ ರಾಷ್ಟ್ರದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಇರುತ್ತದೆಯೋ ಅಲ್ಲಿ ಅಭಿವೃದ್ಧಿ ಇರುತ್ತದೆ ಎಂದು ಪ್ರಾಂಶುಪಾಲ ಡಾ.ಪಿ.ಶಿವಲಿಂಗಪ್ಪ ಹೇಳಿದರು. ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಕಾರ್ಯಕ್ರಮದಲ್ಲಿ...

ಪ್ರಮುಖ ಸುದ್ದಿ

ಚಿತ್ರದುರ್ಗ :ಪರೀಕ್ಷೆಗಳಲ್ಲಿ ನಕಲು ಮಾಡಿ ಅಧಿಕಾರಿಗಳ ಕೈಗೆ ಸಿಕ್ಕಿ ಬೀಳುವುದು ಮಮೂಲಿಯಾಗಿದೆ. ಆದರೆ ನಕಲಿ ಅಭ್ಯರ್ಥಿಗಳೇ ಪರೀಕ್ಷೆ ಬರೆದು ಪೊಲೀಸ್ ಆಗಬೇಕಾದವರೆ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಭಾನುವಾರ ರಾಜ್ಯಾದ್ಯಂತ ನಡೆದ ಕೆಎಸ್‌ಆರ್‌ಪಿ ನೇಮಕಾತಿ...

error: Content is protected !!