Connect with us

Hi, what are you looking for?

ಪ್ರಮುಖ ಸುದ್ದಿ

ಅದೃಷ್ಟ ಅಂದ್ರೆ ಇದು ಗುರು…..! ಎಲಿಮಿನೇಟ್ ಆದ್ರೂ ಶಮಂತ್ ಸೇಫ್ ಆಗಿದ್ದೇ ಗ್ರೇಟ್…..!

ಬಿಗ್ ಬಾಸ್ ಮನೆಯಲ್ಲಿ ಶಮಂತ್ ಗೌಡ ಆರಂಭದಿಂದ ಅದೃಷ್ಟವಂತ ಅನ್ನೋದು ಪ್ರೋವ್ ಆಗಿದೆ. ಇದೀಗ ಮತ್ತೊಮ್ಮೆ ಶಮಂತ್ ಎಂತಹ ಲಕ್ಕಿ ಹುಡ್ಗ ಅನ್ನೋದು ಮನೆ ಮಂದಿಗೆಲ್ಲಾ ಗೊತ್ತಾಗಿದೆ. ಎಲಿಮಿನೇಟ್ ಆದ ಶಮಂತ್ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳವಂತಹ ಅವಕಾಶ ಪಡೆದುಕೊಂಡಿದ್ದಾರೆ. ಇದಕ್ಕೆ ಹೇಳ್ತಿರೋದು ಶಮಂತ್ ಅದೃಷ್ಟವನ್ನು ಬೆನ್ನಿಗಂಟಿಸಿಕೊಂಡಿದ್ದಾರೆ.

ಬಿಗ್ ಬಾಸ್ ರೂಲ್ಸ್ ಪ್ರಕಾರ ಎಲಿಮಿನೇಟ್ ಆದ ಸದಸ್ಯ ಬಿಗ್ ಬಾಸ್ ಜರ್ನಿ ಮುಗಿಸಿ ಮನೆಯಿಂದ ಹೊರ ನಡೆಯಬೇಕು. ಅದರಂತೆ ಈ ವಾರದ ನಾಮಿನೇಷನ್ ನಲ್ಲಿ ಪ್ರಕ್ರಿಯೆಲ್ಲಿ ಏಳು ಮಂದಿ ನಾಮಿನೇಟ್ ಆಗಿದ್ದರು. ಕೊನೆಯದಾಗಿ ನಾಮಿನೇಟ್ ಆದ ಎಲ್ಲಾ ಸದಸ್ಯರು ಸೇಫ್ ಆದರು. ಆದ್ರೆ ಶಮಂತ್ ಎಲಿಮಿನೇಷನ್ ಆದರು. ಸುದೀಪ್ ಕೂಡ ಶಮಂತ್ ಎಲಿಮಿನೇಷನ್ ಎಂದು ಘೋಷಣೆ ಮಾಡಿದರು. ಅದೇನೂ ಮ್ಯಾಜಿಕ್ ಅಂತೀರಾ, ಕೊನೆಯದಾಗಿ ಶಮಂತ್ ಮನೆಯಲ್ಲಿ ಉಳಿದುಕೊಂಡರು.

 

ಶಮಂತ್ ಏನೋ ಎಲಿಮಿನೇಟ್ ಆದರು. ಈ ಮಧ್ಯೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದ ವೈಜಯಂತಿ ಅಡಿಗಗೆ, ‘ನೀವು ಹೊರಗೆ ಹೋಗುವುದಾದರೆ ಕಳಿಸುತ್ತೇವೆ. ನೀವು ಹಲವು ಬಾರಿ ಹೊರಗೆ ಹೋಗುವ ಮಾತನಾಡಿದ್ದೀರಿ. ಒಂದುವೇಳೆ ನೀವು ಹೋಗುವುದಾದರೆ, ಎಲಿಮಿನೇಟ್ ಆದ ಸ್ಪರ್ಧಿಯನ್ನು ಮನೆಯಲ್ಲೇ ಇಟ್ಟುಕೊಳ್ಳುತ್ತೇವೆ’ ಎಂದು ಸುದೀಪ್ ಹೇಳಿದರು. ಅದಕ್ಕಾಗಿ 2 ನಿಮಿಷ ಸಮಯಾವಕಾಶ ನೀಡಿದರು. ನಂತರ ನಾನು ಹೊರಗೆ ಹೋಗುವುದಾಗಿ ವೈಜಯಂತಿ ಹೇಳಿದರು. ಆ ಕ್ಷಣದಲ್ಲಿ ಶಮಂತ್‌ ಸಂತೋಷದಿಂದ ಕುಣಿದು ಕುಪ್ಪಳಿಸಿದರು.

ಶಮಂತ್ ಇದೊಂದು ವಿಚಾರಕ್ಕೆ ಅದೃಷ್ಟವಂತ ಅನ್ನುತ್ತಿಲ್ಲ. ಅವರಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದಲೂ ಒಂದಲ್ಲ ಒಂದು ಅದೃಷ್ಟ ಅವರನ್ನು ಹುಡುಕಿಕೊಂಡು ಬಂದಿದೆ. ಬಿಗ್ ಮನೆಗೆ ಹೋದ ಮೊದಲ ವಾರವೇ ಶಮಂತ್ ಕ್ಯಾಪ್ಟನ್ ಆದ್ರು. ಆ ನಂತ್ರ ಯಾವುದೇ ಟಾಸ್ಕ್ ಇಲ್ಲದೆ ಮೂರನೇ ವಾರವೂ ಕ್ಯಾಪ್ಟನ್ ಆಗಿ ಮುಂದುವರೆದರು. ಶಮಂತ್ ಉಳಿಸಿಕೊಳ್ಳೋದಿಕ್ಕೆ ಮನೆಯವರು ಬೆಡ್ ರೂಮ್ ತ್ಯಾಗ ಮಾಡಿದ್ರು. ಹೀಗೆ ಒಂದಲ್ಲ ಒಂದು ವಿಚಾರಕ್ಕೆ ಶಮಂತ್ ಲಕ್ಕಿ.

ಶಮಂತ್ ಸೇಫ್ ಆಗಿದ್ದು, ಸುದೀಪ್ ಶಾಕ್ ಆಗಿದೆ. ನೀವು ಇಲ್ಲಿಗೆ ಬರುತ್ತೀರಾ ಎಂದು ನಾನು ಸಂತೋಷ ಪಡುತ್ತಿದ್ದೇನು. ಏನ್ರೀ ನಿಮ್ಮ ಲಕ್. ನೀವು ವೈಜಯಂತಿ ಅವರಿಂದ ಸೇಪ್ ಆಗಿದ್ದೀರಾ. ನೀವು ಜನರ ಮನಸ್ಸನ್ನು ಗೆಲ್ಲಬೇಕು. ನಿಮಗೆ ಸಮಯ ಇದೆ. ಚೆನ್ನಾಗಿ ಆಡಿ ಇದೊಂದು ಅವಕಾಶ ನಿಮಗೆ ಸಿಕ್ಕಿದೆ. ಆದರೆ ಮುಂದಿನ ವಾರಕ್ಕೆ ನೇರವಾಗಿ ನಿಮ್ಮನ್ನು ನಾಮಿನೇಟ್ ಮಾಡುತ್ತಿದ್ದೇವೆ ಎಂದು ಶಮಂತ್ ಗೆ ಸುದೀಪ್ ಶಾಕ್ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

error: Content is protected !!