ಮಡಿಕೇರಿ: ಪೋಸ್ಟ್ ಮಾರ್ಟಮ್ ಗೆ ಹೋಗುವ ದೇಹಗಳನ್ನು ಆದಷ್ಟು ಬೇಗ ವಾಪಾಸ್ ಕೊಡುವ ಬರದಲ್ಲಿ ಇರುತ್ತಾರೆ ಒಳಗಿರುವವರು. ಎಷ್ಟೇ ಧೈರ್ಯವಂತರಾದರೂ, ಜೀವವಿಲ್ಲದ ದೇಹ ನೋಡುವುದು ಕಷ್ಟವೇ. ಆದರೆ ಅಲ್ಲೊಬ್ಬ ಕಾಮುಕ ಹೆಣವಾಗಿ ಬರುತ್ತಿದ್ದ ಮಹಿಳೆಯರ ಫೋಟೋಗಳನ್ನು ಸೆರೆಹಿಡಿದು, ತನ್ನ ಮೊಬೈಲ್ ನಲ್ಲಿ ಇಟ್ಟುಕೊಂಡಿದ್ದ ಘಟನೆ ಬೆಳಕಿಗೆ ಬಂದಿದೆ.
ಸೈಯ್ಯದ್ ಎಂಬಾತ 2021ರಲ್ಲಿ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಮ್ ನಲ್ಲಿ ಅಟೆಂಡರ್ ಆಗಿ ಕೆಲಸಕ್ಕೆ ಸೇರಿದ್ದನಂತೆ. ಅದು ಕಾಂಟ್ರಾಕ್ಟ್ ಬೇಸ್ ಮೇಲೆ. ಪೋಸ್ಟ್ ಮಾರ್ಟಮ್ ಗೆ ಬರುವ ಮಹಿಳೆಯರ ನಗ್ನ ಚಿತ್ರಗಳನ್ನು ತೆಗೆಯುತ್ತಿದ್ದನಂತೆ. ಅಷ್ಟೇ ಅಲ್ಲ ಆಸ್ಪತ್ರೆಯ ಕೆಲವು ಮಹಿಳೆಯರ ಮೇಲೂ ದೌರ್ಜನ್ಯ ಎಸಗುತ್ತಿದ್ದನಂತೆ.
ಇತ್ತಿಚೆಗೆ ಸೈಯ್ಯದ್ ಮಡಿಕೇರಿಯಲ್ಲಿ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದ್ದನಂತೆ. ಈ ವೇಳೆ ಜನರೆಲ್ಲ ಸೇರಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದರಂತೆ. ಈತನ ಫೋನ್ ಕೂಡ ಪೊಲೀಸರ ವಶದಲ್ಲಿತ್ತಂತೆ. ಫೋನ್ ಪರಿಶೀಲಿಸಿದಾಗ ಅವನ ಕಾಮ ಕೃತ್ಯಗಳೆಲ್ಲಾ ಬಯಲಾಗಿದೆ.
ಸದ್ಯ ಸಯ್ಯದ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹಿಂದೂ ಜಾಗರಣಾ ವೇದಿಕೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳ ನಿರ್ದೇಶಕ ಹಾಗೂ ಡೀನ್ ಗೆ ದೂರು ನೀಡಿದ್ದಾರೆ.
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 24 :…