in ,

ಬಿಜೆಪಿಯ ಹಲವಾರು ಮತದಾರರು ನಮ್ಮ ಪರ ಇದ್ದಾರೆ : ಮಾಜಿ ಸಚಿವ ಹೆಚ್.ಅಂಜನೇಯ

suddione whatsapp group join

ವರದಿ : ಸುರೇಶ್ ಪಟ್ಟಣ್

ಚಿತ್ರದುರ್ಗ, (ನ.25) :  ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಗ್ರಾಮ ಪಂಚಾಯಿತಿಯ ಅಧಿಕಾರವನ್ನು ಮೊಟಕುಗೂಳಿಸುವ ಕಾರ್ಯಕ್ಕೆ ಮುಂದಾಗಿದೆ. ಪಂಚಾಯಿತಿಯ ಮುಖ್ಯವಾದ ಗ್ರಾಮಸಭೆಯನ್ನು ರದ್ದು ಮಾಡುವ ಪ್ರಯತ್ನದಲ್ಲಿದೆ ಇದರ ಬಗ್ಗೆ ಮತದಾರರು ಎಚ್ಚರವಾಗಿರಬೇಕಿದೆ ಎಂದು ಮಾಜಿ ಸಚಿವ ಹೆಚ್.ಅಂಜನೇಯ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿ ಮಾಡಿ ಉತ್ತಮವಾದ ಯೋಜನಯನ್ನು ನೀಡಿ, ಪಂಚಾಯಿತಿ ಸದಸ್ಯರಿಗೆ ಅಧಿಕಾರವನ್ನು ನೀಡುವುದರ ಮೂಲಕ ಗ್ರಾಮದ ಅಭಿವೃದ್ದಿಗೆ ಪೂರಕವಾಗಿತ್ತು. ಗ್ರಾಮದ ಜನತೆ ತಮಗೆ ಏನಾದರೂ ಬೇಡಿಕೆ ಇದ್ದರೆ ಗ್ರಾಮಸಭೆಯ ಮೂಲಕ ಆಯ್ಕೆ ಮಾಡಿ ಜಾರಿ ಮಾಡಲಾಗುತ್ತಿತು. ಇದರಿಂದ ಗ್ರಾಮದಲ್ಲಿ ಯಾವುದೇ ರೀತಿ ತಾರತಮ್ಯ ಇಲ್ಲದೆ, ಉತ್ತಮವಾದ ಭಾಂದವ್ಯವನ್ನು ಹೊಂದಿದ್ದರು ಎಂದರು.

ಆದರೆ ಈಗ ಆಡಳಿತವನ್ನು ನಡೆಸುತ್ತಿರುವ ಬಿಜೆಪಿ ಸರ್ಕಾರ ಗ್ರಾಮ ಪಂಚಾಯಿತಿಯ ಮೂಲವಾದ ಗ್ರಾಮಸಭೆಯನ್ನು ರದ್ದು ಮಾಡಲು ಹುನ್ನಾರವನ್ನು ನಡೆಸಿದೆ ಇದರ ಬಗ್ಗೆ ಈಗಾಗಲೇ ಕಾರ್ಯತಂತ್ರ ನಡೆಯುತ್ತಿದೆ. ಇದಲ್ಲದೆ ಪಂಚಾಯಿತಿಯ ಸದಸ್ಯರ ಅಧಿಕಾರವನ್ನು ಸಹಾ ಮೊಟಕುಗೂಳಿಸುವ ಕಾರ್ಯಕ್ಕೂ ಸಹಾ ಸರ್ಕಾರ ಮುಂದಾಗಿದೆ ಇದರ ಬಗ್ಗೆ ಮತದಾರರಿಗೆ ತಿಳಿಸುವ ಕಾರ್ಯದ ಮೂಲಕ ಮತಯಾಚನೆ ನಡೆಸಲಾಗುವುದು ಎಂದು ಅಂಜನೇಯ ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಆಗಮಿಸಿದ ಜನಸ್ತೋಮ ಕಂಡು ಮತದಾರರು ನಮ್ಮ ಪರವಾಗಿ ಇದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲುವಿಗೆ ಮುಂದಾಗಿದ್ದಾರೆ. ಈ ಸಮಯದಲ್ಲಿ ಜಿಲ್ಲೆಯ ಶಾಸಕರು, ಎಲ್ಲಾ ಮುಖಂಡರು, ಸಕ್ರಿಯವಾಗಿ ಭಾಗವಹಿಸಿದ್ದರು. ಈ ಚುನಾವಣೆಯಲ್ಲಿ ಶೇ. 60 ರಷ್ಟು ಮತದಾರರು ನಮ್ಮ ಪರವಾಗಿ ಇದ್ದಾರೆ ಇವೆರೆಲ್ಲಾ ಕಾಂಗ್ರೆಸ್‌ ನ ಅಭಿಮಾನಿಗಳಾಗಿದ್ದಾರೆ. ಇದಲ್ಲದೆ ನಮ್ಮ ವಿರೋಧಿಗಳನ್ನು ಸಹಾ ನಮಗೆ ಮತ ಹಾಕುವಂತೆ ಮನವಿ ಮಾಡಲಾಗುವುದು. ಅಲ್ಲದೆ ಬಿಜೆಪಿಯ ಹಲವಾರು ಮತದಾರರು ನಮ್ಮ ಪರವಾಗಿ ಮತ ಹಾಕುವುದಾಗಿ ತಿಳಿಸಿದ್ದಾರೆ ಎಂದರು.

ವಿಧಾನ ಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ನ.26ರಿಂದ 30ರವರೆಗೆ ಜಿಲ್ಲೆಯಲ್ಲಿ ಅಭ್ಯರ್ಥಿ ಬಿ.ಸೋಮಶೇಖರ್ ರವರವಾಗಿ ಚುನಾವಣಾ ಪ್ರಚಾರ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು ನ.26 ಶುಕ್ರವಾರರಂದು ಬೆಳಿಗ್ಗೆ 10 ರಿಂದ ಮೊಳಕಾಲ್ಮೂರು, ಮಧ್ಯಾಹ್ಮ 2ರಿಂದ ಚಳ್ಳಕೆರೆ, ನ. 27 ರ ಶನಿವಾರ ಹಿರಿಯೂರು, ಮಧ್ಯಾಹ್ನ ಹೊಸದುರ್ಗ, ನ. 28 ರ ಭಾನುವಾರ ಚಿತ್ರದುರ್ಗ ಮಧ್ಯಾಹ್ನ ಹೊಳಲ್ಕೆರೆಯಲ್ಲಿ ನಡೆಯಲಿದೆ ಎಂದು ತಿಳಿಸಿ ನ. 28ರಂದು ಚಿತ್ರದುರ್ಗದಲ್ಲಿ ನಡೆಯುವ ಪ್ರಚಾರ ಸಭೆಗೆ ವಿರೋಧ ಪಕ್ಷದ ನಾಯಕರಾಧ ಸಿದ್ದರಾಮಯ್ಯ ಸೇರಿದಂತೆ ಇತರೆ ನಾಯಕರು ಭಾಗವಹಿಸಲಿದ್ದಾರೆ ಎಂದು ಅಂಜನೇಯ ತಿಳಿಸಿದರು.

ಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ತಾಜ್‍ಪೀರ್, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಗೀತಾನಂದಿನಿಗೌಡ, ಮುಖಂಡರಾದ ಮೈಲಾರಪ್ಪ, ಕುಮಾರ್ ಗೌಡ, ಸಂಪತ್ ಸೇರಿದಂತೆ ಇತರರು ಭಾಗವಹಿಸಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ರಮೇಶ್ ಜಾರಕಿಹೊಳಿ ಸಿಡಿ ಕೇಸ್ : ನಗರ ಆಯುಕ್ತರ ತನಿಖೆಗೆ ಕೋರ್ಟ್ ಮಧ್ಯಂತರ ತಡೆ..!

ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಬಹುಮಾನ ಪಡೆದ ಬ್ರೈಟ್‍ಸ್ಟಾರ್ ಕರಾಟೆ ಅಸೋಸಿಯೇಶನ್ ಕ್ರೀಡಾಪಟುಗಳು