
ಪ್ರೀತಿ ವಿಫಲವಾದ ಕಾರಣಕ್ಕೆ ಶಾಲೆಯ ಆವರಣದಲ್ಲಿ ಇಬ್ಬರು ವಿದ್ಯಾರ್ಥಿಗಳು ವಿಷ ಸೇವಿಸಿದ್ದಾರೆ. ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ ಈ ಘಟನೆ ನಡೆದಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಯುವಕ ಸಾವನ್ನಪ್ಪಿದ್ದರೆ, ಅಪ್ರಾಪ್ತ ಬಾಲಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಪೊಲೀಸರ ಪ್ರಕಾರ, ಮಹಾರಾಜ್‌ಗಂಜ್‌ನ ಶಾಲೆಯೊಂದರಲ್ಲಿ 12 ನೇ ತರಗತಿ ಓದುತ್ತಿರುವ 20 ವರ್ಷದ ವಿದ್ಯಾರ್ಥಿಯು ಅದೇ ಶಾಲೆಯ 16 ವರ್ಷದ ವಿದ್ಯಾರ್ಥಿನಿಯನ್ನು ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದನು. ಇಬ್ಬರೂ ಒಂದೇ ಗ್ರಾಮದವರು. ಇವರಿಬ್ಬರ ಪ್ರೀತಿಯ ವಿಷಯ ಮನೆಯಲ್ಲಿ ಗೊತ್ತಾಗಿದ್ದು, ಅವರ ಮದುವೆಗೆ ಹಿರಿಯರು ನಿರಾಕರಿಸಿದ್ದಾರೆ.
ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ಈಗಲೇ ಮದುವೆ ಮಾಡುವುದಿಲ್ಲ ಎಂದು ಆಕೆಯ ಪೋಷಕರು ತಿಳಿಸಿದ್ದಾರೆ. ಇದರಿಂದಾಗಿ ಪ್ರೇಮಿಗಳಿಬ್ಬರೂ ಮನನೊಂದು
ಮಂಗಳವಾರ ಮಧ್ಯಾಹ್ನ ಶಾಲೆಯ ಆವರಣದಲ್ಲಿ ವಿಷ ಸೇವಿಸಿದ್ದಾರೆ.
ಶಾಲೆಯ ಸಿಬ್ಬಂದಿ ಅಸ್ವಸ್ಥ ವಿದ್ಯಾರ್ಥಿಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಯುವಕ ಮೃತಪಟ್ಟಿದ್ದಾನೆ. ಬಾಲಕಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.

GIPHY App Key not set. Please check settings