in

6 ವರ್ಷಗಳಿಂದ ಇಂಗ್ಲಿಷ್ ಟೀಚರ್ ಇಲ್ಲ..ಈ ಬಾರಿಯಾದರೂ ಇಂಗ್ಲೀಷ್ ಶಿಕ್ಷಕರನ್ನ ನೀಡಲು ವಿದ್ಯಾರ್ಥಿಗಳ ಮನವಿ..!

suddione whatsapp group join

ಗದಗ: ಶಾಲೆಯಲ್ಲಿ ಎಲ್ಲಾ ವಿಷಯಗಳನ್ನ ಪಾಠ ಮಾಡಿದ್ರೇನೆ ಮಕ್ಕಳ ಮುಂದಿನ ಭವಿಷ್ಯ ಸುಗಮ ಆಗೋದು. ಇರುವ ವಿಷಯಗಳಲ್ಲಿ ಒಂದು ಏರುಪೇರಾದ್ರು ಮುಂದಿನ ತರಗತಿಯಲ್ಲಿ ಮಕ್ಕಳು ಆ ವಿಚಾರವನ್ನ ಕಲಿಯೋಕೆ ಕಷ್ಟವಾಗುತ್ತೆ. ಗದಗ ಜಿಲ್ಲೆಯಲ್ಲೂ ಆಗಿದ್ದು ಇದೆ‌.

ಒಂದಲ್ಲ ಎರಡಲ್ಲ ಕಳೆದ ಆರು ವರ್ಷಗಳಿಂದ ಮಕ್ಕಳಿಗೆ ಇಂಗ್ಲೀಷ್ ಕಲಿಸಿಕೊಡಲು ಶಿಕ್ಷಕರಿಲ್ಲ. ಇಂಗ್ಲೀಷ್ ಬೋಧನೆ ಇಲ್ಲದೆ ಮಕ್ಕಳು ಪಡುತ್ತಿರುವ ಪರಿಪಾಟಲ ಅಷ್ಟಿಷ್ಟಲ್ಲ. ಹೀಗಾಗಿ ಹೈಸ್ಕೂಲ್ ಮಕ್ಕಳು ಬಿಇಓ ಕಾಲಿಗೆ ಬಿದ್ದು, ಇಂಗ್ಲೀಷ್ ಟೀಚರ್ ನೇಮಕ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ಗ್ರಾಮದಲ್ಲಿ ಈ ಮೊದಲು ಇಂಗ್ಲೀಷ್ ಟೀಚರ್ ಇದ್ರು. ಆದ್ರೆ ನಿಯಮ ಬಾಹಿರವಾಗಿ ಆ ಟೀಚರ್ ನನ್ನ ಬೇರೆ ಜಿಲ್ಲೆಗೆ ನೇಮಕ ಮಾಡಲಾಗಿದೆ. ಅಂದಿನಿಂದ ಕದಡಿ ಗ್ರಾಮಕ್ಕೆ ಇಂಗ್ಲೀಷ್ ಟೀಚರ್ ನೇಮಕವಾಗಿಲ್ಲ. ಗ್ರಾಮಸ್ಥರು, ಮಕ್ಕಳು ಎಷ್ಟೇ ವಿಧವಾಗಿ ಅಧಿಕಾರಿಗಳಿಗೆ ಮನವಿ ಮಾಡಿದ್ರು ಇದರ ಜಡೆ ಗಮನವೇ ಕೊಡ್ತಾ ಇಲ್ಲ. ಈ ತಾಳ್ಮೆ ಇಂದು ಕೆಟ್ಟಿದೆ. ಹೀಗಾಗಿ ಬಿಇಓ, ಡಿಡಿಪಿಐಗೆ ಗ್ರಾಮಸ್ಥರು ಚಳಿ ಬಿಡಿಸಿದ್ದಾರೆ.

ಸ್ಥಳಕ್ಕೆ ಬಂದ ಗದಗ ಬಿಇಓ ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದ್ದಾರೆ. ಯಾರ ಮಾತನ್ನು ಕೇಳದ ಗ್ರಾಮಸ್ಥರು ಇಂಗ್ಲೀಷ್ ಟೀಚರ್ ರನ್ನ ಈ ಕ್ಷಣದಲ್ಲೇ ನೇಮಕ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮಕ್ಜಳು ಬಿಇಓ ಕಾಲಿಗೆ ಬಿದ್ದು ಬೇಡಿಕೊಂಡ ಘಟನೆ ನಡೆದಿದೆ. ಸದ್ಯ ಹಿಂದೆ ಇದ್ದ ಶಿಕ್ಷಕಿಯನ್ನೇ ಮರು ನೇಮಕ ಮಾಡುವುದಾಗಿ ಭರವಸೆ ನೀಡಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಶಿವಚಾರ್ಯರ ಸಮಾಧಿಯನ್ನ ಮ್ಯೂಸಿಯಂ ಮಾಡಲು ಪ್ಲಾನ್.. ಸಾಧನೆಯನ್ನ ಯುವ ಪೀಳಿಗೆಗೆ ತಿಳಿಸುವ ಉದ್ದೇಶ : ಶಿವಮೂರ್ತಿ ಶಿವಾಚಾರ್ಯ

ಕೊರೋನಾದಿಂದ ಸತ್ತವರಿಗೆ ಪರಿಹಾರ ಸಿಕ್ಕಿಲ್ಲ ಸಿದ್ದರಾಮಯ್ಯ ವಾದ..ಕೊಟ್ಟಿದ್ದೀವಿ..ಕೊಡ್ತೀವಿ ಯಡಿಯೂರಪ್ಪ ಸಮರ್ಥನೆ..!