Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರತಿಯೊಂದು ಶುಭ ಕಾರ್ಯಗಳಿಗೂ ಸವಿತಾ ಸಮಾಜ ಸೇವೆ ಸಲ್ಲುತ್ತದೆ : ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಜ.28) : ಮನುಕುಲದ ಶ್ರೇಯಸ್ಸಿಗೆ, ಕಾಯಕ ತತ್ವಗಳನ್ನು ಒಳಗೊಂಡ ಉತ್ತಮ ಸಂದೇಶ ನೀಡಿದ ಮಹನೀಯರು ಸವಿತಾ ಮಹರ್ಷಿಗಳು, ಅವರ ತತ್ವ ಸಿದ್ಧಾಂತಗಳು ಎಲ್ಲ ವರ್ಗಕ್ಕೂ ಅನ್ವಯಿಸುತ್ತದೆ ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರು ಹೇಳಿದರು.

ನಗರದ ತ.ರಾ.ಸು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ,  ಸವಿತಾ ಮಹರ್ಷಿ ಜಯಂತಿ  ಕಾರ್ಯಕ್ರಮ  ಉದ್ಘಾಟಿಸಿ ಹಾಗೂ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸವಿತಾ ಮಹರ್ಷಿಗಳ ಸಿದ್ದಾಂತಗಳು, ಬೋಧನೆಗಳು ಬಹಳ ಜನಕ್ಕೆ ತಿಳಿದಿಲ್ಲ.

ಮನುಕುಲದ ಉದ್ಧಾರಕ್ಕಾಗಿ ಅವರು ನೀಡಿರುವ ಸಂದೇಶ ಉತ್ತಮ ಸಮಾಜಕ್ಕೆ ಸ್ಫೂರ್ತಿಯಾಗಿದೆ. ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಸವಿತಾ ಸಮಾಜ ನೆಲೆಸಿದ್ದು, ಪ್ರತಿಯೊಂದು ಶುಭ ಕಾರ್ಯಗಳಿಗೂ ಈ ಸಮಾಜ ಸೇವೆ ಸಲ್ಲಿಸುತ್ತದೆ ಎಂಬುದು ಗಮನಾರ್ಹ.

ಸಾಧಕರ ಜಯಂತಿಗಳು, ಕೇವಲ ಆಯಾ ವರ್ಗದ ಸಮಾಜಕ್ಕೆ ಸೀಮಿತವಾಗುತ್ತಿರುವುದು ಸರಿಯಲ್ಲ,  ಇದನ್ನು ನಾವು ಅಂಬೇಡ್ಕರ್ ಜಯಂತಿ, ಬಸವಣ್ಣನವರ ಜಯಂತಿ ಹೀಗೆ ಅನೇಕ ಮಹನೀಯರ ಜಯಂತಿ ಆಚರಣೆಗಳಲ್ಲಿ ಕಾಣುತ್ತಿದ್ದೇವೆ.

ಸಾಧಕರ ತತ್ವ ಸಿದ್ಧಾಂತಗಳು, ವಿಚಾರಗಳು ಎಲ್ಲ ಸಮುದಾಯಕ್ಕೂ ಅನ್ವಯವಾಗುವುದರಿಂದ, ಇಂತಹ ಜಯಂತಿಗಳಿಗೆ ಎಲ್ಲ ಸಮುದಾಯದವರು ಪಾಲ್ಗೊಳ್ಳಬೇಕು. ಆಧುನಿಕ ವ್ಯವಸ್ಥೆಯಲ್ಲಿ ಸವಿತಾ ಸಮಾಜದವರ ಕಾಯಕದ ಸ್ವರೂಪವೂ ಕೂಡ ಬದಲಾಗಿದೆ.  ಸವಿತಾ ಸಮುದಾಯವಷ್ಟೇ ಅಲ್ಲದೆ ಬೇರೆ ಸಮಾಜದವರೂ ಕೂಡ ಈ ಕಾಯಕ ಮಾಡುತ್ತಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಸಂಕಷ್ಟಕ್ಕೆ ಒಳಗಾದ ಸಮುದಾಯದಲ್ಲಿ ಸವಿತಾ ಸಮಾಜವೂ ಕೂಡ ಒಂದು.  ಸರ್ಕಾರದಿಂದ ಈ ವರ್ಗಕ್ಕೆ ಪರಿಹಾರವನ್ನು ಕೂಡ ಕಲ್ಪಿಸಲಾಯಿತು.  ಸವಿತಾ ಸಮಾಜ ಹಿಂದುಳಿದ ಸಮುದಾಯವಾಗಿದ್ದು, ಸಮಾಜದ ಯುವಕರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕ ತಿಪ್ಪಾರೆಡ್ಡಿ ಮನವಿ ಮಾಡಿದರು.

ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ  ಅವರು ಮಾತನಾಡಿ, ಸವಿತಾ ಮಹರ್ಷಿ ಸಮಾಜದವರು ತಮ್ಮ ವೃತ್ತಿಯಾದ ಕ್ಷೌರಿಕವನ್ನು ಪರಂಪರೆಯಿಂದ ಉಳಿಸಿಕೊಂಡು ಬಂದಿದ್ದಾರೆ ಮತ್ತು ಹಿಂದಿನ ಕಾಲದಲ್ಲಿ ಇದನ್ನು ಒಂದು ಉದ್ಯೋಗವಾಗಿ ಇಟ್ಟುಕೊಂಡಿದ್ದರು, ಇವತ್ತಿಗೂ ಕೂಡ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆಧುನಿಕ ಜಗತ್ತಿಗೆ ತಕ್ಕಂತೆ ಅವರ ಕಾಯಕ ಶೈಲಿಯೂ ಕೂಡ ಬದಲಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಅವರು ಅಳವಡಿಸಿಕೊಳ್ಳುತ್ತಿದ್ದಾರೆ.  ಸವಿತಾ ಸಮಾಜದವರು ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಮತ್ತು ಶಿಕ್ಷಣವನ್ನು ಪಡೆಯುವಲ್ಲಿ ಮುಂಚೂಣಿಯಲ್ಲಿದ್ದು, ಅನೇಕರು ಉನ್ನತ ವೃತ್ತಿಯಲ್ಲಿದ್ದಾರೆ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ತಿಪ್ಪೇಸ್ವಾಮಿ ಸಂಪಿಗೆ ಅವರು,  ಸವಿತ ಸಮಾಜವು ಒಂದು ಪವಿತ್ರ ಮತ್ತು ಸರ್ವಶ್ರೇಷ್ಠವಾದ ಸಮಾಜವಾಗಿದೆ, ಈ ಸಮಾಜದಲ್ಲಿ ಹುಟ್ಟಿರುವಂತಹವರು ಹೆಮ್ಮೆ ಪಡಬೇಕು, ಮನುಷ್ಯ ಹುಟ್ಟಿನಿಂದಲೂ ಸಾಯುವರೆಗೂ ಅವರಿಗೆ ಸವಿತ ಸಮಾಜದವರು ಬೇಕಾಗುತ್ತಾರೆ, ಹಾಗೂ ವೇದಗಳ ಕಾಲಗಳಲ್ಲಿ ಸವಿತಾ ಸಮಾಜದ ಉಲ್ಲೇಖಗಳು ಇವೆ, ಕೆಲವು ಸಲ ಅವಮಾನಗಳು ಆಗುತ್ತವೆ ಆದರೆ ನಾವು ಅವುಗಳನ್ನು ಮೆಟ್ಟಿ ನಿಲ್ಲಬೇಕು, ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಕೆ. ಮಲ್ಲಿಕಾರ್ಜುನ್, ಸವಿತಾ ಸಮಾಜದ ಅಧ್ಯಕ್ಷರಾದ ಜಿ ಎನ್ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎನ್ ಡಿ ಕುಮಾರ್, ಸೇರಿದಂತೆ ಸಮಾಜದ ಮುಖಂಡರಾದ ತಿಪ್ಪೇಸ್ವಾಮಿ, ಆರ್.ಶ್ರೀನಿವಾಸ್, ನಾಗರಾಜ್, ಕವಿತಾ ಶಾಮ್, ಹನುಮಂತಪ್ಪ, ರಾಜು, ರಂಜಿತ್, ಪ್ರಸನ್ನ ಸೇರಿದಂತೆ ವಿವಿಧ ಗಣ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು  ಉಪಸ್ಥಿತರಿದ್ದರು.

ಸಮಾರಂಭಕ್ಕೂ ಮುನ್ನ ಸವಿತಾ ಮಹರ್ಷಿಗಳ ಭಾವಚಿತ್ರದ ಅದ್ಧೂರಿ ಮೆರವಣಿಗೆಗೆ ನಗರದ ನೀಲಕಂಠೇಶ್ವರ ದೇವಸ್ಥಾನದ ಬಳಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.  ಮೆರವಣಿಗೆಯು ಗಾಂಧಿವೃತ್ತ, ಅಂಬೇಡ್ಕರ್ ವೃತ್ತ ಮೂಲಕ ತ.ರಾ.ಸು. ರಂಗಮಂದಿರದವರೆಗೂ ನೆರವೇರಿತು.  ಮೆರವಣಿಗೆಯಲ್ಲಿ ಹಲವು ಕಲಾತಂಡಗಳು ಪಾಲ್ಗೊಂಡಿದ್ದವು.

Facebook
Twitter
Telegram
WhatsApp
suddionenews

suddionenews

Leave a Comment

Top Stories

Summer Migraine: ಬಿಸಿಲಿಗೆ ಹೋದಾ ಈ ನಿಯಮಗಳನ್ನು ಪಾಲಿಸಿ : ಮೈಗ್ರೇನ್‌ ನಿಂದ ದೂರವಿರಿ….!

ಸುದ್ದಿಒನ್ : ಈ ಬೇಸಿಗೆಯಲ್ಲಿ ಬಿಸಿಲು ಜೋರಾಗಿದೆ. ತಾಪಮಾನವು 37 ರಿಂದ 40 ಡಿಗ್ರಿ  ಆಸುಪಾಸಿನಲ್ಲಿದೆ. ವಿಪರೀತ ಬಿಸಿಲಿನಿಂದ ಮಕ್ಕಳಿಂದ ವೃದ್ಧರವರೆಗೆ ಬಹುತೇಕ ಎಲ್ಲರೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದರೆ ಮೈಗ್ರೇನ್ ಪೀಡಿತರು ಸ್ವಲ್ಪ ಹೆಚ್ಚು

ಈ ರಾಶಿಯ ತಂದೆ ತಾಯಿಗೆ ಮಗಳ ಕುಟುಂಬದಲ್ಲಿ ತುಂಬ ಸಮಸ್ಯೆ ಇದೆ

ಈ ರಾಶಿಯ ತಂದೆ ತಾಯಿಗೆ ಮಗಳ ಕುಟುಂಬದಲ್ಲಿ ತುಂಬ ಸಮಸ್ಯೆ ಇದೆ, ಈ ರಾಶಿಯವರ ಉದ್ಯೋಗದಲ್ಲಿ ತುಂಬಾ ಸಮಸ್ಯೆ ಅದರ ಜೊತೆ ಹಣಕಾಸಿನ ಸಮಸ್ಯೆ ಕಾಡಲಿದೆ, ಬುಧವಾರ ರಾಶಿ ಭವಿಷ್ಯ -ಏಪ್ರಿಲ್-24,2024 ಸೂರ್ಯೋದಯ: 05:57,

ಬಿ ಎನ್ ಚಂದ್ರಪ್ಪ ಪರ ಮತಯಾಚನೆ ಮಾಡಿ, ಮೋದಿ, ಅಮಿತ್ ಶಾ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಚಿತ್ರದುರ್ಗ: ಈ ತಿಂಗಳ 26 ಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ರನ್ನ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡ್ತೀನಿ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಮೋದಿಯವರು ಪ್ರಧಾನಿಯಾಗಿದ್ದಾರೆ.

error: Content is protected !!