ಕೇಂದ್ರ ಅಹಂಕಾರವನ್ನ ರೈತರ ಸತ್ಯಾಗ್ರಹ ಮಣಿಸಿದೆ : ರಾಹುಲ್ ಗಾಂಧಿ

ನವದೆಹಲಿ: ಭಾರೀ ವಿರೋಧಕ್ಕೆ ಕಾರಣವಾಗಿದ್ದ, ಮಳೆ, ಗಾಳಿ, ಬಿಸಿಲು ಎನ್ನದೆ ರೈತರು ಹೋರಾಟ ಮಾಡುತ್ತಿದ್ದ ಹೋರಾಟಕ್ಕೆ ಕಡೆಗೂ ಜಯ ಸಿಕ್ಕಿದೆ. ರೈತರ ಹೋರಾಟಕ್ಕೆ ಫಲ ದೊರೆತಿದೆ. ವರ್ಷಗಳಿಂದಲೂ ಮೂರು ಕೃಷಿ ಕಾಯ್ದೆಗಳನ್ನ ಹಿಂಪಡೆಯಲೇ ಬೇಕೆಂದು ಧರಣಿ ಕುಳಿತಿದ್ದರು. ಆ ರೈತರ ದಿಟ್ಟತನಕ್ಕೆ ಕೇಂದ್ರ ಸರ್ಕಾರ ಕಡೆಗೂ ಮಣಿದಿದೆ. ಆ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನ ವಾಪಾಸ್ ಪಡೆದುಕೊಳ್ಳುವ ಬಗ್ಗೆ ಮೋದಿ ನಿರ್ಧಾರ ತಿಳಿಸಿದ್ದಾರೆ.

ಈ ವಿಚಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ಕೇಂದ್ರದ ಅಲಂಕಾರವನ್ನ ರೈತರ ಸತ್ಯಾಗ್ರಹ ಮಣಿಸಿದೆ. ರೈತರು ತಮ್ಮ ಸುದೀರ್ಘ ಸತ್ಯಾಗ್ರಹದಿಂದ ರೈತರಿಗೆ ಮಾರಕವಾಗಿದ್ದ ಕಾಯ್ದೆಗಳ ವಿರುದ್ಧ ಪ್ರತಿಭಟಿಸಿದ್ದರು. ಆ ಪ್ರತಿಭಟನೆಗೆ ಜಯ ಸಿಕ್ಕಿದೆ. ಜೈ ಹಿಂದ್ ಜೈ ಕಿಸಾನ್ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *