ಸತ್ಯಳ ಜೊತೆ ಬ್ರೇಕಪ್ ಮಾಡ್ಕೊಳೋಕೆ ರೆಡಿಯಾಗಿ ಕಾರ್ತೀಕ್ ಹೋಗ್ತಾ ಇದ್ದ. ಈ ಮಧ್ಯೆ ಭಾಮೈದನಿಗೆ ಅನುಮಾನ ಸತ್ಯಳ ರೌಡಿಸಂ ಮುಂದೆ ನೀನು ಬಾಲ ಮುದರಿಕೊಳ್ಳಲ್ಲ ಅಲ್ವಾ ಅಂತ ರೇಗಿಸ್ತಾ ಇದ್ದ. ಆದ್ರೆ ಅಮೂಲ್ ಬೇಬಿ ಸಿಕ್ಕಾಪಟ್ಟೆ ಬಿಲ್ಡಪ್ ಕೊಡ್ತಾ ಇದ್ದ.
ಆದ್ರೆ ಯಾರದ್ದೋ ತಂತ್ರಕ್ಕೆ ಸತ್ಯ ಹರಿಯಾಣಕ್ಕೆ ಹೊರಟಿದ್ಲು. ಇತ್ತ ಕಾರ್ತೀಕ್ ಸತ್ಯಳನ್ನ ಹುಡುಕಿಕೊಂಡು ಬಂದಾಗ ನಿಜಾಂಶ ತಿಳಿಯುತ್ತೆ. ಸ್ವಲ್ಪ ಬೇಸರದಂತೆ ವರ್ತಿಸಿ ಮರೆಗೆ ಬಂದು ಸಿಕ್ಕಾಪಟ್ಟೆ, ಮನಸ್ಸೋ ಇಚ್ಛೆ ಕುಣಿಯುತ್ತಾನೆ. ಆದ್ರೆ ಸತ್ಯಳ ದೋಸ್ತಿಗಳೆಲ್ಲಾ ಪಾಪ ಸತ್ತಳನ್ನ ಬಿಟ್ಟು ಅಮೂಲ್ ಬೇಬಿ ಇರೋಕೆ ಕಷ್ಟ ಪಡ್ತಾ ಇದ್ದಾನೆ ಅಂದ್ಕೋಳ್ತಾರೆ.
ಇಲ್ಲಿ ಸತ್ಯ ಹೇಳಿದ ಆ ಇಂದು ಚಿಟ್ಕೆಮ್ಯಾಟರ್ ಅನ್ನೇ ಅಮೂಲ್ ಬೇಬಿ ಕೀಡ ಹೇಳ್ತಾನೆ. ಸತ್ಯಳನ್ನ ಮಾತಾಡ್ಸಿ, ಡ್ರಾಪ್ ಮಾಡ್ತೇನೆ ಅಂತ ದೋಸ್ತಿಗಳಿಂದ ಎಸ್ಕೇಪ್ ಆಗ್ತಾನೆ ಕಾರ್ತೀಕ್.
ಇತ್ತ ಸತ್ಯ ರೇಸ್ ಗಂತ ಹರಿಯಾಣಕ್ಕೆ ಹೊರಟಿದ್ದಾಳೆ. ದಾರಿ ಮಧ್ಯೆ ಕಾರಿನಲ್ಲಿ ಮಗುವೊಂದು ಸಿಕ್ಕಿ ಹಾಕಿಕೊಂಡಿರುತ್ತೆ. ಅದನ್ನ ಕಾರ್ತೀಕ್ ಅಪ್ಪ ನೋಡ್ತಾರೆ. ಆ ಮಗುವನ್ನ ಉಳಿಸಿಕೊಳ್ಳೋದಕ್ಕೆ ಪ್ರಯತ್ನ ಪಡ್ತಾ ಇರ್ತಾರೆ. ತುಂಬಾ ಜನ ಪ್ರಯತ್ನ ಪಟ್ಟರು ಆ ಮಗುವನ್ನು ಹೊರಗೆ ತೆಗೆಯಲು ಆಗ್ತಾ ಇರ್ಲಿಲ್ಲ. ಇದನ್ನ ಸತ್ಯ ನೋಡ್ತಾಳೆ. ಸತ್ಯಳ ಮನಸ್ಸೇ ಅಂತದ್ದು. ಕಷ್ಟ ಎಂದವರಿಗೆ ಮನಸ್ಸು ಮಿಡಿಯುತ್ತೆ.
ಹೀಗಾಗಿ ಸತ್ಯ ಆಟೋದಿಂದ ಇಳಿದು ಬಂದು ಪ್ರಯತ್ನ ಪಡ್ತಾಳೆ, ಆದ್ರೂ ಅಗಲ್ಲ. ಕಡೆಯದಾಗಿ ಕಾರಿನ ಗ್ಲಾಸ್ ಅನ್ನ ಕೈನಲ್ಲೇ ಹೊಡೆದು ಮಗುವಿನ ಪ್ರಾಣ ಉಳಿಸುತ್ತಾಳೆ. ಅಷ್ಟು ರಕ್ತ ಸೋರುತ್ತಿದ್ದನ್ನ ಗಮನಿಸಿದ ಕಾರ್ತೀಕ್ ತಂದೆ ಅವಳನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾಳೆ.
ಇತ್ತ ಅಮೂಲ್ ಬೇಬಿ ಸತ್ಯ ಇಲ್ಲ ಅನ್ನೋ ಖುಷಿಯನ್ನ ಭಾಮೈದನ ಜೊತೆಯಲ್ಲೆ ಎಂಜಾಯ್ ಮಾಡ್ತಾ ಇರ್ತಾನೆ. ರಸ್ತೆಯಲ್ಲಿ ಬರೋ ಭಿಕ್ಷುಕನಿಗೆ ಹಣ ಕೊಟ್ಟು ನೋ ಟೆನ್ಶನ್ ಭಾಮೈದಾ ಓನ್ಲಿ ಎಂಜಾಯ್ ಮೆಂಟ್ ಅಮನತ ಕೂಲ್ ಆಗಿ ಹೋಗ್ತಾ ಇರ್ತಾರೆ. ಈ ಖುಷಿ ಮಧ್ಯೆ ಭಾಮೈದ ಮತ್ತೆ ಸತ್ಯ ತಗಲಾಕಿಕೊಂಡ್ಲಿ ಅಂತ ಶಾಪ ಹಾಕ್ತಾನೆ.
ಸತ್ಯಳ ಕೈಗೆ ಹೆಚ್ಚು ಪೆಟ್ಟಾಗಿದ್ದ ಕಾರಣ ರೇಸ್ ಗೆ ಹೋಗೋದು ಕ್ಯಾನ್ಸಲ್ ಆಗಿತ್ತು. ಮಾಸ್ಟರ್ ಆಸ್ಪತ್ರೆಗೆ ಬಂದು ಸತ್ಯನ ಸ್ಥಿತಿ ನೋಡಿ ಶಾಕ್ ಆದ್ರೂ, ರೇಸ್ ಗೆ ಹೋಗೋದಕ್ಕೆ ಆಗಲ್ಲ ಅಂತ ಗೊತ್ತಾದಾಗ ಮಾಸ್ಟರ್ ಗು ಬೇಸರ ಆಗಿದೆ. ಈ ಮಧ್ಯೆ ಸತ್ಯಳನ್ನ ಕಾರ್ತೀಕ್ ಅಪ್ಪ ಸಮಾಧಾನ ಮಾಡ್ತಾರೆ. ಅಷ್ಟೇ ಅಲ್ಲ ಮನೆಗೂ ಕರೆದುಕೊಂಡು ಹೋಗ್ತಾರೆ.
ಭಾಮೈದನ ಶಾಪ ನಿಜವಾಗುತ್ತಿದೆ. ಮಗುವನ್ನ ಕಾಪಾಡಿದ ಸತ್ಯಳನ್ನ ಕಾರ್ತೀಕ್ ತಂದೆ ಮನೆಗೆ ಕರೆದುಕೊಂಡು ಬರ್ತಾರೆ. ಕಾರ್ತೀಕ್ ಚಿಕ್ಕಪ್ಪನಿಗೆ ಮಾತ್ರ ಹೊಸ ಗೆಸ್ಟ್ ನ ನೋಡಿ ಖುಷಿಯಾಗಿದೆ. ಆದ್ರೆ ಅವರ ಅಮ್ಮ ಚಿಕ್ಕಮ್ಮನಿಗೆ ಹಳೆಯದ್ದು ನೆನಪಾಗಿ ಕೋಪ ಬಂದಿದೆ. ಈ ಮಧ್ಯೆ ಕಾರ್ತೀಕ್ ಅಕ್ಕ ಭಾವ ಸತ್ಯಳನ್ನ ನೋಡಿ ದಂಗಾಗಿಯೇ ಹೋಗಿದ್ದಾರೆ.


