Connect with us

Hi, what are you looking for?

ಪ್ರಮುಖ ಸುದ್ದಿ

ಕಾರ್ತೀಕ್ ಕೋಮ ಹೋದ ಅಂತ ಭಾಮೈದ ಗೋಳೋ ಅಂತಿದ್ರೆ ಅಮೂಲ್ ಬೇಬಿ ಆ ಯಡವಟ್ ಮಾಡೋದಾ..?

 

ಕರ್ತೀಕ್ ಅಪ್ಪನ ಮಾತಿನಿಂದ ಸತ್ಯ ಅಕ್ಷರಶಃ ಕರಗಿ ನೀರಾದ್ಲು. ಕ್ಷಮೆಗಾಗಿ ಪೊಲೀಸರನ್ನೇ ಕರೆತಂದಿದ್ದ ಭಾಮೈದಾ. ಆದ್ರೆ ಅಲ್ಲಿ ಸೀರಿಯಸ್ ಸೀನ್ ಗಿಂತ ಕಾಮಿಡಿಯೇ ಜೋರಾಗಿತ್ತು. ಯಾಕಂದ್ರೆ ಆ ಪೊಲೀಸ್ ಸತ್ಯಳಿಗೆ ಚಿರಪರಿಚಿತ. ಜೋರ್ ಜೋರ್ ಗಲಾಟೆ ಮಾಡ್ತಿದ್ದ ಪೊಲೀಸಪ್ಪನನ್ನ ನೋಡಿದ ಸತ್ಯಳಿಗೆ ಇದು ಕಂಪ್ಲೀಟ್ ನಾಟಕ ಅನ್ನೋದು ಗೊತ್ತಾಯ್ತು.

ಅದಕ್ಕೆ ನೀವೂ ನನ್ನನ್ನ ಅರೆಸ್ಟ್ ಮಾಡ್ಲೇಬೇಕು ಅಂತಾಳೆ ಸತ್ಯ. ಪೊಲೀಸ್ ಕಕ್ಕಾಬಿಕ್ಕಿಯಾದಾಗ ಇಲ್ಲ ಅಮೂಲ್ ಬೇಬಿಯನ್ನೇ ಅರೆಸ್ಟ್ ಮಾಡಿ ಅಂತಾಳೆ. ಇದು ಯಾಕೋ ಕೈಮೀರಿ ಹೋಗ್ತಾ ಇದೆ ಅಂತ ಗೊತ್ತಾದಾಗ ಕಾರ್ತೀಕ್ ಅಪ್ಪ ಪೊಲೀಸರನ್ನ ಹೊರ್ಎ ಕರೆದುಕೊಂಡು ಹೋಗ್ತಾರೆ. ಅವರ ನಾಟಕದ ಪೇಮೆಂಟ್ ಕೊಟ್ಟು ಹೊರಡಿ ಅನ್ನುವಾಗ್ಲೇ ಸತ್ಯ ಅದನ್ನ ನೋಡ್ತಾಳೆ.

 

ನಕಲಿ ಪೊಲೀಸ್ ಸತ್ಯಳ ಹತ್ರ ಕ್ಷಮೆ ಕೇಳ್ತಾನೆ. ಎಲ್ಲೂ ಶೂಟಿಂಗ್ ಇರ್ಲಿಲ್ಲ ಪೇಮೆಂಟ್ ಗಾಗಿ ಬಂದೆ ಅಂದಾಗ ಆಯ್ತು ಪೇಮೆಂಟ್ ಸಿಕ್ತಲ್ವಾ ಹೊರಡಿ ಅಂತಾಳೆ. ಕಾರ್ತೀಕ್ ಅಪ್ಪನಿಗೆ ಸತ್ಯಳಿಗೆ ಈತ ಮೊದಲೇ ಗೊತ್ತಾ ಅಂತ ಶಾಕ್ ಆಗುತ್ತೆ. ಆಗ ಕಾರ್ತೀಕ್ ಅಪ್ಪ ತುಂಬಾ ಎಮೋಷನಲ್ ಆಗ್ತಾರೆ. ನೀನು ಮನೆ ಬಿಟ್ಟಾಗಿನಿಂದ ಕಾರ್ತೀಕ್ ಕೂಡ ಸರಿಯಾಗಿ ಊಟ ಮಾಡಿಲ್ಲ. ಈ ಮುದಿಯನಿಗೂ ಊಟ ಸೇರಿಲ್ಲ ಅಂತಾರೆ. ಅದನ್ನ ಕೇಳಿ ಸತ್ಯಳ‌ ಮನಸ್ಸಿಗೆ ತುಂಬಾ ನೋವಾಗುತ್ತೆ. ಕರಗಿ ನೀರಾಗ್ತಾಳೆ. ಅಪ್ಪ ಮಗಳ ನಡುವೆ ಕ್ಷಮೆ ಎಂತದು ಅಂತ ಎಲ್ಲವನ್ನು ಮರೆತಿದ್ದೇನೆಂದು ಅರ್ಥ ಮಾಡಿಸ್ತಾಳೆ.

ನಾಟಕ ಎಲ್ಲಾ ಮುಗಿಯುವ ಹೊತ್ತಿಗೆ ಭಾಮೈದ ಮತ್ತೊಂದು ನಾಟಕಕ್ಕೆ ರೆಡಿ ಮಾಡಿರ್ತಾನೆ. ಕಾರ್ತೀಕ್ ಗೆ ಎಮರ್ಜೆನ್ಸಿ ಅಂತ ಕ್ರಿಯೇಟ್ ಮಾಡೋಕೆ ನೋಡ್ತಾನೆ. ಡಾಕ್ಟರ್ ಕೂಡ ನಕಲಿ ಅನ್ನೋದು ಸತ್ಯಳಿಗೆ ಗೊತ್ತಾಗೋಕೆ ಹೆಚ್ಚು ಸಮಯ ಬೇಕಾಗಿರೋಲ್ಲ. ಸತ್ಯಳಿಗೆ ಆ ಡಾಕ್ಟರ್ ಕ್ಲಾಸ್ ತೆಗೆದುಕೊಳ್ತಾನೆ. ಯಾಕ್ ಸತ್ಯ ಈ ಥರನ ನೋಡಿಕೊಳ್ಳೋದು ಅಂತ. ನಿಮ್ಮ ಕೇರ್ ಲೆಸ್ ನಿಂದಾಗಿ ರೋಗಿ ಕೋಮಾಗೆ ಹೋಗಿದ್ದಾರೆ ಅಂತ ಮ್ಯಾನೇಜ್ ಮಾಡ್ತಿದ್ರೆ, ಅಲ್ಲಿ ಕಾರ್ತೀಕ್ ಮುಖದ ಮೇಲೆ ಕೈಯಾಡಿಸ್ತಾ ಇದ್ದಾನೆ.

 

ಮತ್ತೆ ಸತ್ಯಳಿಗೆ ಕಾರ್ತೀಕ್ ಬಗ್ಗೆ ಭಯ ಹುಟ್ಟಿಸೋದಕ್ಕೆ ಡಾಕ್ಟರ್ ಪರ್ಸನಲ್ಲಾಗಿ ಕರೀತಾರೆ. ಭಾಮೈದನನ್ನು ಜೊತೆಗೆ ಕರೆದುಕೊಂಡು ಹೋಗ್ತಾಳೆ ಸತ್ಯ. ಡಾಕ್ಟರ್ ಅನ್ನಿಸಿಕೊಂಡವ ಭಲೇ ಬಿಲ್ಡಪ್ ಕೊಡ್ತಾನೆ. ನನ್ ಕೈ ಗುಣವೇ ಹಾಗೆ ಅಂದಾಗ ಹೌದ್ ಹೌದು ನಿಮ್ ಕೈಗುಣ ಗೊತ್ತು ನನ್ ಕೈಗುಣವೂ ಗೊತ್ತಾಗ್ಬೆರಕಲ್ಲ ಅಂತ ಸತ್ಯ ಕೈ ಎತ್ತಿದ್ದೆ ತಡ ಡಾಕ್ಟರ್ ಆದವ ಅಟೆಂಡರ್ ಕೆಲಸಕ್ಕೆ ಓಡಿದ. ಭಾಮೈದ ಎದೆಯಲ್ಲಿ ಢವ ಢವ ಶುರು ಆಯ್ತು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಕೊಡಗು: ಸದ್ಯ ಲಾಕ್ಡೌನ್ ನಿಂದಾಗಿ ಅದೆಷ್ಟೋ ಜನ ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥವರ ಸಹಾಯಕ್ಕಾಗಿ ಅದೆಷ್ಟೋ ಜನ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ಮಧ್ಯೆ ಅಲ್ಲೊಬ್ಬ ಯುವಕ ತನ್ನ...

ಪ್ರಮುಖ ಸುದ್ದಿ

ಸುದ್ದಿಒನ್, ದಾವಣಗೆರೆ,(ಜೂನ್.15): ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಮಂಗಳವಾರ ವರದಿಯಲ್ಲಿ 183 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 47668 ಕ್ಕೆ ಏರಿಕೆಯಾಗಿದೆ. ಇಂದು ಹೊಸದಾಗಿ ದಾವಣಗೆರೆ 69...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ನಗರದ ವಿ .ಪಿ. ಬಡಾವಣೆಯಲ್ಲಿ ಕನ್ಸರ್‍ವೆನ್ಸಿಗಳನ್ನು ಒತ್ತುವರಿ ಮಾಡಲಾಗಿದೆ ಇವುಗಳನ್ನು ತೆರವು ಮಾಡಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪೌರಾಯುಕ್ತರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು. ನಗರದ ವಿ.ಪಿ.ಬಡಾವಣೆಯ...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ಸುದ್ದಿಒನ್,ಬಳ್ಳಾರಿ, (ಜೂ.15) : ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್‍ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್‍ನಿಂದ 339 ಜನ ಗುಣಮುಖರಾಗಿದ್ದು ದಿನದಿಂದ ದಿನಕ್ಕೆ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ....

ಪ್ರಮುಖ ಸುದ್ದಿ

ಚಿತ್ರದುರ್ಗ,(ಜೂನ್15): ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ 95 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 33,997ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 16, ಚಳ್ಳಕೆರೆ 18, ಹಿರಿಯೂರು...

ಕ್ರೀಡೆ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಗೆದ್ದವರಿಗೆ ಎಷ್ಟು ಮೊತ್ತ ಸಿಗಬಹುದು ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಿಗೆ ಯಾವಾಗಲೂ ಕಾಡುವಂತ ಪ್ರಶ್ನೆ. ಆ ಪ್ರಶ್ನೆಗೆ ಇಂದು ಐಸಿಸಿ ಉತ್ತರಿಸಿದೆ. ಟೆಸ್ಟ್ ಚಾಂಪಿಯನ್ ಶಿಪ್...

ಪ್ರಮುಖ ಸುದ್ದಿ

ಚಿತ್ರದುರ್ಗ, (ಜೂನ್.15) : ನಗರದ ಅಲೆಮಾರಿ, ಕೂಲಿ ಕಾರ್ಮಿಕರು, ಬಡವರು ಹಾಗೂ ನಿರ್ಗತಿಕರಿಗೆ ಭಾರತೀಯ ರೆಡ್ ಕ್ರಾಸ್ ಚಿತ್ರದುರ್ಗ ಜಿಲ್ಲಾ ಶಾಖೆ ವತಿಯಿಂದ ಅಗತ್ಯ ದಿನಸಿ ವಸ್ತುಗಳನ್ನು ವಿತರಿಸಲಾಯಿತು. ನಗರದ ಪತ್ರಿಕಾ ಭವನದ...

ಪ್ರಮುಖ ಸುದ್ದಿ

ನವದೆಹಲಿ : ಕೋವಿಡ್ ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿಗೆ ಸಿದ್ಧತೆಗಳು ನಡೆದಿವೆ. ವರ್ಷದ ಅಂತ್ಯದಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಆದರೆ ಪ್ರವಾಸದ ಸಮಯ...

error: Content is protected !!