Connect with us

Hi, what are you looking for?

ಪ್ರಮುಖ ಸುದ್ದಿ

ಪ್ರೀತಿಯೇ ಇಲ್ಲದವನ ಮೇಲೆ ಸತ್ಯಳಿಗೆ ಸಾವಿರ ಕನಸು : ಕನಸಿನ ಗೋಪುರ ಹೊಡೆದರೇ…?

ಸತ್ಯಳನ್ನ ಫ್ರೆಂಡ್ಸ್ ಪಾರ್ಟಿಗೆ ಕರೆದುಕೊಂಡು ಹೋಗೋದಕ್ಕೆ ಕಾರ್ತೀಕ್ ಗ್ಯಾರೇಜ್ ಗೆ ಬಂದಾಯ್ತು. ಈ ಮಧ್ಯೆ ಚಿಂತೆಯಲ್ಲಿ ಕೂತಿದ್ದ ಫ್ರೆಂಡ್ಸ್ ಗಳಿಗೆ ಆ ಇಬ್ಬರನ್ನ ಕಂಡಜ ಕೆಂಡದಂತ ಕೋಪ. ಸತ್ಯಳನ್ನ ಪಾರ್ಟಿಗೆ ಕರೆದುಕೊಂಡು ಹೋಗ್ಬೇಕು ಅಂದುಕೊಂಡವರಿಗೆ ದೋಸ್ತಿಗಳು ಚಳಿ-ಜ್ವರ ಬರೋ ಥರ ಮಾತಾಡಿದ್ರು. ಸತ್ಯಳಿಗೆ ನಿಮ್ಮ ಮೇಲೆ ಹೆವಿ ಕೋಪ ಇದೆ, ಇಲ್ಲಿಂದ ಹೋಗಿ, ಅವ್ಳೆ ಹೇಳಿದ್ದಾಳೆ ಅಂತ ಹೇಗೋ ಮ್ಯಾನೇಜ್ ಮಾಡಿ ಸಾಗಾಕೋದಕ್ಕೆ ಸಿದ್ಧ ಆದ್ರೂ.

ಭಯಕ್ಕೆ ಕಾರ್ತೀಕ್ ಆ್ಯಂಡ್ ಭಾಮೈದ ಹೋಗ್ಬೇಕು ಅನ್ನೋವಷ್ಟರಲ್ಲಿ ಕಾರು ಕೈ ಕೊಡ್ತು. ಕಾರು ಮುಂದೆ ಹೋಗದೆ ಕಾರ್ತೀಕ್ ಹೋಗಲ್ಲ. ಇನ್ನೇನು ಸತ್ಯ ಬಂದ್ ಬಿಡ್ತಾಳೆ, ಅವ್ನನ್ನ ನೋಡ್ ಬಿಡ್ತಾಳೆ ಅನ್ನೋ ಭಯಕ್ಕೆ ದೋಸ್ತಿಗಳೇ ಕಾರನ್ನ ಸರಿ ಮಾಡಿ ಕೊಡ್ತಾರೆ.

ಇನ್ನೇನು ಕಾರು ರೆಡಿ ಆಯ್ತು. ಹೊರಡಬೇಕು ಅನ್ನೋ ಅಷ್ಟರಲ್ಲಿ ಸತ್ಯ ಗ್ಯಾರೇಜ್ ಗೆ ಎಂಟ್ರಿ ಕೊಡ್ತಾಳೆ. ಗ್ಯಾರೇಜ್ ಒಳಗೆ ಯಾರು ಕಾಣದ್ದನ್ನು ಕಂಡು ಹಿಂದೆ ತಿರುಗಿದಾಗ ಅಮೂಲ್ ಬೇಬಿ ದರ್ಶನ.

ಅಮೂಲ್ ಬೇಬಿ ನೋಡಿದಾಕ್ಷಣ ಸತ್ಯಳ ಮುಖದಲ್ಲಿ ನಗು, ಮನಸ್ಸಲ್ಲಿ ಆನಂದ. ಗಾಡಿಯಿಂದ ಇಳಿದು ಕಾರ್ತೀಕ್ ಬಳಿ ಬಂದೇ ಬಿಟ್ಟಳು. ದೋಸ್ತಿಗಳಿಗೆಲ್ಲಾ ಬೇಸರ. ಇಲ್ಲಿವರೆಗೂ ಬಂದು ಮಾತಾಡಿಸ್ದೆ ಹೋಗ್ತಾ ಇದ್ದೀಯಾ. ನೀನ್ ಬಂದದ್ದು ನನ್ನ ನೋಡೋಕೆ ತಾನೇ ಅಂದಾಗ ಸತ್ಯಳ ಸೈನ್ಯ ಕೊಂಚ ಬೇಸರದಲ್ಲೇ ಇದ್ದಾರೆ. ಅದಕ್ಕೆ ತಕ್ಕಂತೆ ಭಾಮೈದಾ ಸೈನ್ಯದ ವಿರುದ್ಧವಾಗೇ ಹಾಕೊಡ್ತಾ ಇದ್ದಾನೆ.

ದೋಸ್ತಿಗಳನ್ನ ಪ್ರಶ್ನೆ ಮಾಡಿದಾಗ ನಿಂಗೆ ಮೋಸ ಮಾಡಿದ್ದಕ್ಕೆ ನಮಗೆ ಕೋಪ ಅಂತ ಹೇಗೋ ಸಮಜಾಯಿಷಿ ಕೊಡ್ತಾರೆ. ಪಾರ್ಟಿಗೆ ಬರ್ಲೇ ಬೇಕು ಅಂತ ಸತ್ಯಳನ್ನ ಕರೆದುಕೊಂಡು ಹೋಗೋದಕ್ಕೆ ನಿಂತ್ರೆ ಸತ್ಯಳ ಹುಡುಗ್ರು ವಿರೋಧಿಸ್ತಾ ಇದ್ದಾರೆ. ಯಾಕಂದ್ರೆ ನಿಜಾಂಶ ಹೇಳೋಕ್ ಆಗ್ತಿಲ್ಲ. ಸತ್ಯ ಹಾಗೂ ಕಾರ್ತೀಕ್ ನ ದೂರ ಮಾಡೋಣ ಅನ್ನೋ ಫ್ಯ್ಲಾನ್.

Click to comment

Leave a Reply

Your email address will not be published. Required fields are marked *

You May Also Like

error: Content is protected !!