Connect with us

Hi, what are you looking for?

ಪ್ರಮುಖ ಸುದ್ದಿ

ಸತ್ಯಳ ಚಿಂತೆಯಲ್ಲೇ ಕಾರು ಓಡಿಸುತ್ತಿದ್ದ ಅಮೂಲ್ ಬೇಬಿಗೆ ಕಾದಿತ್ತು ದೊಡ್ಡ ಗಂಡಾಂತರ..!

ಸತ್ಯಳ ಕಷ್ಟದಲ್ಲಿ ಅಮೂಲ್ ಬೇಬಿ, ಅಮೂಲ್ ಬೇಬಿ ಕಷ್ಟಕ್ಕೆ ಸತ್ಯ..ಗೊತ್ತೋ ಗೊತ್ತಿಲ್ಲದೋ ಇಬ್ಬರು ಒಬ್ಬರಿಗೊಬ್ಬರು ಸಹಾಯ ಮಾಡುತ್ತಲೇ ಇರ್ತಾರೆ. ಇನ್ನೇನು ಸತ್ಯಳ ಮುಖ ಕಂಪ್ಲೀಟ್ ಹಾಳಾಗೋದರಲ್ಲಿ ಇತ್ತು. ಅದನ್ನ ತಡೆದವನು ಇದೇ ಕಾರ್ತೀಕ್. ಬಣ್ಣದ ಮಡಿಕೆಗೆ ತುಂಬಿದ ಆ್ಯಸಿಡ್ ತೆಗೆದವನು ಇದೇ ಕಾರ್ತೀಕ್.

 

ಪ್ರೇಕ್ಷಕರಿಗೆ ಒಂದು ಕ್ಷಣ ಗೊಂದಲ ಆ್ಯಸಿಡ್ ತುಂಬಿದ ಮಡಿಕೆ ಬಣ್ಣದ ಮಡಿಕೆ ಹೇಗಾಯಿತು ಅಂತ. ದೋಸ್ತಿಗಳ ಜೊತೆ ಕಾರ್ತೀಕ್ ಮಾತಾಡುವಾಗಲೇ ಗೊತ್ತಾಗಿದ್ದು, ಆ್ಯಸಿಡ್ ತುಂಬಿದ ಮಡಿಕೆಯನ್ನ ಬದಲಾಯಿಸಿದ್ದು ಇದೇ ಕಾರ್ತೀಕ್ ಅಂತ. ಈ ವಿಚಾರವನ್ನ ಸತ್ಯಳಿಗೆ ಹೇಳಿದ್ರೆ ಕ್ಷಮಿಸುತ್ತಾಳೆ ಹಾಗೇ ಖುಷಿ ಪಡ್ತಾಳೆ, ಹೇಳೋಣಾ ಅಂತ ದೋಸ್ತಿಗಳಿ ಹೇಳಿದಾಗ, ಕಾರ್ತೀಕ್ ಬೇಡ ಅಂತಾರೆ. ಯಾಕಂದ್ರೆ ಸಿಂಪತಿಯ ಕ್ಷಮೆ ಕಾರ್ತೀಕ್ ಗೆ ಬೇಕಿಲ್ಲ. ಮನಸ್ಸಾರೆ ಕ್ಷಮಿಸೋದಷ್ಟೆ ಬೇಕಿದ್ದದ್ದು. ಅದಕ್ಕಾಗಿಯೇ ಎಲ್ಲರ ಹತ್ತಿರ ಪ್ರಮಾಣ ಮಾಡಿಸಿಕೊಳ್ಳುತ್ತಾನೆ.

ಸತ್ಯ ಹೊರಗೆ ಆತನ‌ ಮೇಲೆ ರೇಗಿದ್ರು ಒಳಗೊಳಗೆ ಪ್ರೀತಿ. ಖುಷಿಯ ಕ್ಷಣಗಳನ್ನ ನೆನೆದು ಸಂತಸ ಪಡುವಷ್ಟರಲ್ಲೇ ಅವರ ಮನೆಯಲ್ಲಿ ನಡೆದ ಆ ಕೆಟ್ಟ ಘಟನೆ ನೆನಪಾಗಿ ಮತ್ತೆ ಕಲ್ಲಾಗ್ತಾಳೆ. ಅವನ ಅಂತಸ್ತು ಜಾಸ್ತಿ, ನಮ್ಗೆ ಸ್ವಾಭಿಮಾನಿ ಜಾಸ್ತಿ ಅಂತ ಪ್ರೀತಿಯನ್ನ ಕಿತ್ತೆಸೆಯಲು ಪ್ರಯತ್ನ ಪಡ್ತಾ ಇರ್ತಾಳೆ.

ಇತ್ತ ಕಾರ್ತೀಕ್ ಗೆ ಕೂಡ ಸತ್ಯಳದ್ದೇ ಚಿಂತೆ. ಆಕೆ ಕ್ಷಮಿಸಲೇ ಇಲ್ವಲ್ಲ ಅನ್ನೋ ಯೋಚನೆಯಲ್ಲಿ ಹೋಗ್ತಾ ಇದ್ದವನಿಗೆ ಎದುರು ಬಂದ ಗಂಡಾಂತರ ಕಾಣಲೇ ಇಲ್ಲ. ದೊಡ್ಡ ಲಾರಿಯೊಂದು ಕಾರಿಗೆ ಗುದ್ದೆ ಬಿಡುತ್ತೆ. ಇದರಿಂದ ಕಾರ್ತೀಕ್ ಆಸ್ಪತ್ರೆಗೆ ಸೇರ್ತಾನೆ.

ಇತ್ತ ದೋಸ್ತಿಗಳೆಲ್ಲಾ ಕಾರ್ತೀಕ್ ಬಗ್ಗೆ ಸಮಾಧಾನ ಮಾಡ್ತಾರೆ. ಆತ ತುಂಬಾ ಒಳ್ಳೆಯವನು ನೀನೇ ತಪ್ಪು ಮಾಡಿರೋದು ಅಂತ. ಅಷ್ಟರಲ್ಲೇ ಭಾಮೈದ ಬಂದು ಕಾರ್ತೀಕ್ ಬಗ್ಗೆ ಮಾತಾಡ್ತಾನೆ. ಅವನನ್ನ ಕ್ಷಮಿಸೋದನ್ನ ಬಿಟ್ಟು ಇಷ್ಟು ಹಠ ಒಳ್ಳೆಯದಲ್ಲ ಅನ್ನೋ ಥರ ಮಾತಾಡ್ತಾನೆ. ಅವತ್ತು ಮನೆಯಲ್ಲಿ ಆಗಿದ್ದೇನು ಅನ್ನೋದನ್ನು ವಿವರಿಸಿದ.

ನೀನು ಕಲ್ಲು ಮನಸ್ಸಿನವಳು. ಆತ ನೀನ್ ಮನೆ ಬಿಟ್ಟು ಬಂದ ಮೇಲೆ ಆತ ಎಷ್ಟು ಬೇಸರ ಮಾಡಿಕೊಂಡ ಗೊತ್ತಾ..? ಆತ ನಿನ್ನ ಹಿಂದೆ ಬಿದ್ದು ಕ್ಷಮೆ ಕೇಳ್ದಾ. ಆದ್ರೆ ಅವ್ನು ಇನ್ಯಾವತ್ತು ಮಾತಾಡದೆ ಇದ್ದ ಹಾಗೇ ಮಾಡಿದ್ದೀಯಾ. ಈ ಪ್ರಪಂಚದಿಂದಲೇ ದೂರಾದ ಅನ್ನೋ ಥರ ಮಾತಾಡಿ ಸತ್ಯಳ ಎದೆ ಬಡಿತವನ್ನ ನಿಲ್ಲಿಸಿದ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಕೊಡಗು: ಸದ್ಯ ಲಾಕ್ಡೌನ್ ನಿಂದಾಗಿ ಅದೆಷ್ಟೋ ಜನ ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥವರ ಸಹಾಯಕ್ಕಾಗಿ ಅದೆಷ್ಟೋ ಜನ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ಮಧ್ಯೆ ಅಲ್ಲೊಬ್ಬ ಯುವಕ ತನ್ನ...

ಪ್ರಮುಖ ಸುದ್ದಿ

ಸುದ್ದಿಒನ್, ದಾವಣಗೆರೆ,(ಜೂನ್.15): ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಮಂಗಳವಾರ ವರದಿಯಲ್ಲಿ 183 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 47668 ಕ್ಕೆ ಏರಿಕೆಯಾಗಿದೆ. ಇಂದು ಹೊಸದಾಗಿ ದಾವಣಗೆರೆ 69...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ನಗರದ ವಿ .ಪಿ. ಬಡಾವಣೆಯಲ್ಲಿ ಕನ್ಸರ್‍ವೆನ್ಸಿಗಳನ್ನು ಒತ್ತುವರಿ ಮಾಡಲಾಗಿದೆ ಇವುಗಳನ್ನು ತೆರವು ಮಾಡಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪೌರಾಯುಕ್ತರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು. ನಗರದ ವಿ.ಪಿ.ಬಡಾವಣೆಯ...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ಸುದ್ದಿಒನ್,ಬಳ್ಳಾರಿ, (ಜೂ.15) : ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್‍ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್‍ನಿಂದ 339 ಜನ ಗುಣಮುಖರಾಗಿದ್ದು ದಿನದಿಂದ ದಿನಕ್ಕೆ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ....

ಪ್ರಮುಖ ಸುದ್ದಿ

ಚಿತ್ರದುರ್ಗ,(ಜೂನ್15): ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ 95 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 33,997ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 16, ಚಳ್ಳಕೆರೆ 18, ಹಿರಿಯೂರು...

ಕ್ರೀಡೆ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಗೆದ್ದವರಿಗೆ ಎಷ್ಟು ಮೊತ್ತ ಸಿಗಬಹುದು ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಿಗೆ ಯಾವಾಗಲೂ ಕಾಡುವಂತ ಪ್ರಶ್ನೆ. ಆ ಪ್ರಶ್ನೆಗೆ ಇಂದು ಐಸಿಸಿ ಉತ್ತರಿಸಿದೆ. ಟೆಸ್ಟ್ ಚಾಂಪಿಯನ್ ಶಿಪ್...

ಪ್ರಮುಖ ಸುದ್ದಿ

ಚಿತ್ರದುರ್ಗ, (ಜೂನ್.15) : ನಗರದ ಅಲೆಮಾರಿ, ಕೂಲಿ ಕಾರ್ಮಿಕರು, ಬಡವರು ಹಾಗೂ ನಿರ್ಗತಿಕರಿಗೆ ಭಾರತೀಯ ರೆಡ್ ಕ್ರಾಸ್ ಚಿತ್ರದುರ್ಗ ಜಿಲ್ಲಾ ಶಾಖೆ ವತಿಯಿಂದ ಅಗತ್ಯ ದಿನಸಿ ವಸ್ತುಗಳನ್ನು ವಿತರಿಸಲಾಯಿತು. ನಗರದ ಪತ್ರಿಕಾ ಭವನದ...

ಪ್ರಮುಖ ಸುದ್ದಿ

ನವದೆಹಲಿ : ಕೋವಿಡ್ ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿಗೆ ಸಿದ್ಧತೆಗಳು ನಡೆದಿವೆ. ವರ್ಷದ ಅಂತ್ಯದಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಆದರೆ ಪ್ರವಾಸದ ಸಮಯ...

error: Content is protected !!