ಬಿಗ್ ಬಾಸ್ ಮನೆಯಲ್ಲಿ ಲವ್ ಬರ್ಡ್ಸ್ ಆಗಿದ್ದವರು ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ. ಒಟಿಟಿಯಿಂದ ಬೆಸ್ಟ್ ಫ್ರೆಂಡ್ಸ್ ಆಗಿದ್ದವರು, ಟಿವಿ ಸೀಸನ್ ಬಂದಾಗ ಲವ್ ಬರ್ಡ್ಸ್ ರೀತಿ ವರ್ತಿಸೋಕೆ ಶುರು ಮಾಡಿದರು. ತುಂಬಾ ಅಂದ್ರೆ ತುಂಬಾ ಬಾಂಧವ್ಯ ಬೆಸೆದಿತ್ತು. ಆದ್ರೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ದಿನ ರೂಪೇಶ್ ಶೆಟ್ಟಿ ಅಕ್ಷರಶಃ ಕುಸಿದು ಬಿಟ್ಟಿದ್ದರು. ಜೋರಾಗಿ ಕಣ್ಣೀರು ಹಾಕಿದ್ದರು. ಸಾನ್ಯಾ ಹೊರ ಬಂದ ಮೇಲೆ ದಿನವಿಡಿ ಅಳುತ್ತಲೇ ಮಂಕಾಗಿ ಕೂತಿದ್ದರು. ಬಳಿಕ ಸರಿಯಾದರು. ಆಟವನ್ನು ಸಖತ್ತಾಗಿ ಆಡುವುದಕ್ಕೆ ಶುರು ಮಾಡಿದರು.
ಆದ್ರೆ ಸಾನ್ಯಾ ಹೊರ ಬರುವುದಕ್ಕೂ ಮುನ್ನ ರೂಪೇಶ್ ಶೆಟ್ಟಿ ಒಂದು ಮನವಿಯನ್ನು ಮಾಡಿಕೊಂಡಿದ್ದರು. ನೀನು ವಾರ ವಾರ ಒಂದು ಟೀ ಶರ್ಟ್ ಕೊಡಬೇಕು. ವೀಕೆಂಡ್ ಪ್ರೋಗ್ರಾಂ ನಲ್ಲಿ ನಾನು ಅದನ್ನೇ ಹಾಕಿಕೊಳ್ಳುತ್ತೇನೆ ಎಂದಿದ್ದರು. ಅದರಂತೆ ಸಾನ್ಯಾ ಹೋದ ಮೊದಲ ವಾರ ಟೀ ಶರ್ಟ್ ಬಂದಿತ್ತು. ಅದರ ಮೇಲೆ ಎಸ್ ಎಂಬ ಸಿಂಬಲ್ ಕೂಡ ಇತ್ತು. ಆದ್ರೆ ನೆಕ್ಸ್ಟ್ ನೋಡಿದರೆ ಮುಂದಿನ ವಾರದಿಂದ ಅವರ ಹೆಸರಿನ ಟೀ ಶರ್ಟ್ ಇಲ್ಲ. ಸಾನ್ಯಾಗೆ ಕಷ್ಟ ಆಯ್ತಾ, ಇಷ್ಟು ಬೇಗ ಬೇಸರ ಆಗೋಯ್ತಾ ಅನ್ನೋದೆ ಎಲ್ಲರ ಪ್ರಶ್ನೆಯಾಗಿತ್ತು.
ಆದರೆ ಸಾನ್ಯಾ ತಾನು ಹೇಳಿದ್ದನ್ನೇ ಮಾಡುತ್ತಿದ್ದಾರೆ. ಪ್ರತಿ ವಾರವೂ ಟೀ ಶರ್ಟ್ ಕಳುಹಿಸುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಈ ಟೀ ಶರ್ಟ್ ಗಳು ಬಿಗ್ ಬಾಸ್ ಮನೆಯೊಳಗೆ ಹೋಗುತ್ತಾ ಇಲ್ಲ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಾನ್ಯಾ ಬೇಸರ ಹೊರ ಹಾಕಿದ್ದಾರೆ
ಸುದ್ದಿಒನ್, ಚಿತ್ರದುರ್ಗ, ಜನವರಿ. 31 : ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಚಳಿಯಲ್ಲೂ ಬೆವರುವಂತೆ ಮಾಡಿದ್ದಾರೆ. ಬೆಂಗಳೂರು, ರಾಯಚೂರು,…
ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ…
ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…
ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…