ಫ್ಲೈಟ್ ನಲ್ಲೇ ಓಡಾಡೋದಕ್ಕೆ ಸಂತೋಷ್ ಗೆ ಹಣ ಎಲ್ಲಿಂದ ಬಂತು : ಸಚಿವ ಈಶ್ವರಪ್ಪ ಪ್ರಶ್ನೆ

ಸಚಿವ ಈಶ್ವರಪ್ಪ ಅವರ ಮೇಲೆ ಗುತ್ತಿಗೆದಾರ ಸಂತೋಷ್ 40% ಕಮೀಷನ್ ವಿಚಾರದಲ್ಲಿ ಆರೋಪ ಮಾಡಿದ್ದರು. ಆ ಸಂಬಂಧ ಸಚಿವ ಈಶ್ವರಪ್ಪ ಕೂಡ ದೂರು ದಾಖಲಿಸಿದ್ದರು. ಇದೀಗ ನಿನ್ನೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯ ಹೊಟೇಲ್ ಒಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನನ್ನ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ ಎಂದು ಡೆತ್ ನೋಟ್ ಕೂಡ ಬರೆದಿಟ್ಟಿದ್ದಾರೆ.

ಈ ಸಂಬಂಧ ನಿನ್ನೆ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದ ಸಚಿವ ಈಶ್ವರಪ್ಪ, ಇಂದು ಆ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸಂತೋಷ್ ಪಾಟೀಲ್ ಕಡುಬಡವ ಅಂತಾರೆ. ಹಾಗಾದ್ರೆ ದೆಹಲಿಗೆ ಯಾವಾಗಲೂ ಫ್ಲೈಟ್ ನಲ್ಲಿಯೇ ಹೋಗಿ ಬರೋದಕ್ಕೆ ಹಣ ಎಲ್ಲಿಂದ ಬರುತ್ತಾ ಇತ್ತು. ಪ್ರಕರಣದ ತನಿಖೆ ನಡೆಯುತ್ತಾ ಇದೆ. ಎಲ್ಲವೂ ಆ ಬಳಿಕ ಹೊರ ಬರಲಿದೆ.

ಸಂತೋಷ್ ನನ್ನು ದೆಹಲಿಗೆ ಯಾರು ಕಳುಹಿಸದ್ದರು ಎಂಬುದು ಬೇಕಲ್ಲವಾ..? ಅವರೊಬ್ಬರೆ ಹೋಗಿದ್ದರೋ..? ಅಥವಾ ಜೊತೆಗೆ ಇನ್ಯಾರಾದರೂ ಹೋಗಿದ್ದರಾ..? ಅವರಿಗೆ ಫ್ಲೈಟ್ ಖರ್ಚು ಇನ್ಯಾರದರೂ ನೀಡಿದ್ದರಾ..? ಯಾರು ಕೊಟ್ಟರೂ.? ತನಿಖೆಯಾದ ನಂತರ ಎಲ್ಲವೂ ಹೊರ ಬರಲಿದೆ. ನನ್ನ ಮೇಲೆ ಈ ರೀತಿಯ ಆಪಾದನೆ ಬಂದಿರುವುದು ಇದೇ ಮೊದಲ ಬಾರಿಗೆ. ತನಿಖೆ ಆಗಲಿ ಎಂದು ಈಶ್ವರಪ್ಪ ಅವರು ಒತ್ತಾಯಿಸಿದ್ದಾರೆ.

suddionenews

Recent Posts

ಮೈಕ್ರೋ ಫೈನಾನ್ಸ್ ಸುಗ್ರಿವಾಜ್ಞೆಗೆ ಅಂಕಿತ ಹಾಕದ ರಾಜ್ಯಪಾಲರು : ಸರ್ಕಾರಕ್ಕೆ ಹಿನ್ನಡೆ

ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…

1 hour ago

ಚಿತ್ರದುರ್ಗ APMC | ಶೇಂಗಾ, ಕಡಲೆ ಸೇರಿದಂತೆ ಇತರೆ ಉತ್ಪನ್ನಗಳ ಫೆಬ್ರವರಿ 07 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

  ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…

2 hours ago

ಚಿತ್ರದುರ್ಗದ ಅಳಿಯ ಡಾಲಿ ಮೇಲೆ ದರ್ಶನ್ ಫ್ಯಾನ್ಸ್ ಗರಂ : ಫುಲ್ ಟ್ರೋಲ್..!

ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…

4 hours ago

ಮೂಡಾ ಅಪ್ಡೇಟ್: ಸಿಎಂ ಸಿದ್ದರಾಮಯ್ಯರಿಗೆ ರಿಲೀಫ್ ನೀಡಿದ ಹೈಕೋರ್ಟ್

ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…

5 hours ago

ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ

ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…

11 hours ago

ಫೆಬ್ರವರಿ 10ಕ್ಕೆ ಕರ್ನಾಟಕದಲ್ಲಿ ಕುಂಭಮೇಳ : ಹೇಗಿದೆ ತಯಾರಿ..?

  144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…

20 hours ago