Connect with us

Hi, what are you looking for?

ಪ್ರಮುಖ ಸುದ್ದಿ

ದರ್ಶನ್ ಕಥೆಗೆ ಸಿಡಿತು ಆಡಿಯೋ ಬಾಂಬ್ : ಅದರಲ್ಲೇನಿದೆ ಗೊತ್ತಾ..?

ಮೈಸೂರು: ದರ್ಶನ್ ಗೆ ಸಂಕಷ್ಟ ತಪ್ಪಿದ್ದಲ್ಲ. ಹೊಟೇಲ್ ನಲ್ಲಿ ವೇಟರ್ ಗೆ ಹೊಡೆದೆ ಇಲ್ಲ ಎಂಬ ವಾದದ ನಡುವೆ ಇದೀಗ ಆಡಿಯೋವೊಂದು ವೈರಲ್ ಆಗಿದೆ. ಈ ಆಡಿಯೋದಲ್ಲಿ ದರ್ಶನ್ ಹೊಡೆದಿದ್ದಾರೆ ಎಂಬ ಬಗ್ಗೆ ಉಲ್ಲೇಖವಾಗಿದೆ.

ಸಂದೇಶ್ ನಾಗರಾಜ್ ಪುತ್ರ ಹಾಗೂ ಇಂದ್ರಜಿತ್ ಲಂಕೇಶ್ ಧ್ವನಿ ಹೋಲುತ್ತಾ ಇದೆ. ಆದ್ರೆ ಇದು ಯಾರ ಜೊತೆ ಮಾತಾಡಿರುವುದು ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಆ ಆಡಿಯೋದಲ್ಲಿ ಹದಿನೈದು ಜನ ಸೇರ್ಕೊಂಡು ಒಬ್ಬನಿಗೆ ಹೊಡೆದಿದ್ದಾರೆ ಎಂಬದನ್ನ ಹೇಳಿದ್ದಾರೆ.

ಅವರ ಜೊತೆ ಯಾರೋ ಕ್ಲಬ್ ನಲ್ಲಿ ಅವ್ನು ಕೂತ್ಕೊಂಡು ಅವ್ನೆ ಹೊಡೆದಿದ್ದಾನೆ ಬೇರೆ ಕಸ್ಟಮರ್ ಗೆ. ದರ್ಶನ್ ಹಾಗೂ ಅವರು ಒಂದ್ ರೂಮು. ಈ ಬೃಹಸ್ಪತಿಗೇನೆ ಊಟ ಹಾಕಿರೋದು. ಯಾರೋ ದೊಡ್ ಇವ್ರನ ಕರ್ಕೊಂಡ್ ಬರ್ತಾ ಇದ್ದಾನೆ ಅಂದ್ರೆ ಅದು ಈ ಹದಿನೈದು ಜನ. ನಾನು ಬಂದು ಬೈದಿದ್ದೀನಿ. ಹದಿನೈದು ಜನ ಸೇರ್ಕೊಂಡು ಇಬ್ಬನಿಗೆ ಹೊಡೆದಿದ್ದೀರಲ್ಲ ಹರ್ಷ. ನೀನು ನೋಡ್ಕೋಬೇಕು ಅಲ್ವಾ ಎಂದಾಗ. ಆತ ಬಂದು ಅಣ್ಣ ಅಣ್ಣ ಅಂತ ಕಾಲಿಡಿದುಕೊಂಡ.

ಆಗಲೂ ಹೇಳಿದೆ. ನಿನ್ನ ಜೊತೆ ಇರೋರೆಲ್ಲ ಒಳ್ಳೆಯವರಲ್ಲ. ತಲೆ ಕಡೀತೀನಿ ಅಂತ ಅಂದಲ್ಲ. ಇದೆಲ್ಲ ಶಾಶ್ವತವಲ್ಲ ದರ್ಶನ್. ಆಂಡ್ ನಿನ್ ಜೊತೆ ಇರೋರು ಒಳ್ಳೆಯವರಲ್ಲ. ಉಮಾಪತಿ ಬಗ್ಗೆ ನಿಂಗೆ ಗೊತ್ತು. ನಾನು ಬೇರೆ ಪ್ರೊಡ್ಯೂಸರ್ ಬಗ್ಗೆ ಮಾತಾಡಬಾರದು. ಪೊಲೀಸ್ ತನಿಖೆಯಲ್ಲಿ ನೀನೂ ತಗಲಾಕಿಕೊಳ್ತೀಯಾ. ನಂಗೆ ಬೇರೆ ಮಾಹಿತಿನೇ ಬಂದಿದೆ. ಪೊಲೀಸರು ನೋಡಿ ಸರ್ ಅವರು ಸೆಲೆಬ್ರೆಟಿಗಳು ನಾವೇನು ಮಾಡೋಕ್ ಹಾಗಲ್ಲ. ಅವರ ಫ್ರೇಂಡ್ಸ್ ಕೂಡ ಬರಬೇಕು ಅಂದ್ರು. ದರ್ಶನ್ ಗೆ ಇದನ್ನೇ ಹೇಳ್ದೆ.

ಆಗ ದರ್ಶನ್ ತೋಟಕ್ಕೆ ಬಾ ತೋಟಕ್ಕೆ ಬಾ ಅಂದ.‌ನಾವ್ ಸೀನ್ ಗೂ ಇಲ್ಲ ಬರೋದು ಇಲ್ಲ ಅಂದೆ. ಅವ್ನು ಕಾಲ್ ಮಾಡಿದ ಅಂದ್ರೆ ಅಪ್ಪ ಕೆಂಡಮಂಡಲನಾಗಿಬಿಟ್ರು. ಏಯ್ ಮತ್ತೆ ಬಂದ್ ಗಿಂದ್ ಬಿಟ್ಟೋನು. ಅವ್ನು ತಪ್ ಮಾಡಿರೋದು. ಅವ್ನಿಗೆ ಗಿಲ್ಟಿ ಇರ್ಲಿ. ಮತ್ತೆ ನೀನೆನಾದ್ರೂ ಕರ್ಕೊಂಡ್ರೆ ಸ್ಟಾಪ್ ಬಳಿಯೂ ಬೆಲೆ ಇರಲ್ಲ. ಗಾಂಧಿನಗರದಲ್ಲೂ ಬೆಲೆ ಇಲ್ಲ.

ಈ ರೀತಿ ಇನ್ನು ಸಾಕಷ್ಟು ವಿಚಾರ ಆ ಆಡಿಯೋದಲ್ಲಿದೆ. ಆ ಆಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲೆಲ್ಲಾ ವೈರಲ್ ಆಗ್ತಾ ಇದ್ದು, ಪೊಲೀಸರ ತನಿಖೆಯ ನಂತರ ವಿಚಾರ ತಿಳಿಯಲಿದೆ.

Click to comment

Leave a Reply

Your email address will not be published. Required fields are marked *

Latest

ದಿನ ಭವಿಷ್ಯ

ಬುಧವಾರ ರಾಶಿ ಭವಿಷ್ಯ-ಆಗಸ್ಟ್-4,2021 ಕಾಮಿಕಾ ಏಕಾದಶಿ ಸೂರ್ಯೋದಯ: 06:04 AM, ಸೂರ್ಯಸ್ತ: 06:44 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಷಾಢ ಮಾಸ, ದಕ್ಷಿಣಾಯಣ, ಗ್ರೀಷ್ಮ...

ಚಿತ್ರದುರ್ಗ

upper bhadra meeting in DS Hally, chitradurga ಡಿಎಸ್ ಹಳ್ಳಿಯಲ್ಲಿ ಭದ್ರಾ ಮೇಲ್ದಂಡೆ ಸಭೆ; ಗ್ರಾಮಸ್ಥರು ಭಾಗಿ ಸುದ್ದಿಒನ್, ಚಿತ್ರದುರ್ಗ, (ಆ.03) : ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಜ್ಞಾನಪೂರ್ಣ ಶಾಲೆ ಆವರಣದಲ್ಲಿ...

ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.03) : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್ ಜೆ ಎಮ್ ಸಿ ಬಿ ಎಸ್ ಇ ರೆಸಿಡೆನ್ಷಿಯಲ್ ಶಾಲೆಯು 2020-21 ನೇ ಸಾಲಿನ ಸಿ ಬಿ ಎಸ್ ಇ...

ಪ್ರಮುಖ ಸುದ್ದಿ

ಬೆಂಗಳೂರು: ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸೋದಕ್ಕಾಗಿಯೇ ಸಿಎಂ ಮೂರು ದಿನದಿಂದ ದೆಹಲಿಯಲ್ಲಿದ್ದಾರೆ. ಈಗಾಗಲೇ ಹೈಕಮಾಂಡ್ ಜೊತೆ ಈ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಸಂಪುಟದಲ್ಲಿ ಯಾರೆಲ್ಲಾ ಇರ್ಬೇಕು...

ಪ್ರಮುಖ ಸುದ್ದಿ

ಮುಂಬೈ: ಶಿಲ್ಲಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟೀವ್ ಆಗಿದ್ರೋ ಮಗ ವಿಹಾನ್ ಕುಂದ್ರಾ ಕೂಡ ಅಷ್ಟೇ ಆ್ಯಕ್ಟೀವ್ ಆಗಿದ್ದ. ಸದಾ ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕ್ತಾ ಇದ್ದ. ಆದ್ರೆ ರಾಜ್...

ಪ್ರಮುಖ ಸುದ್ದಿ

ರಾಜಸ್ಥಾನ : ಹಿಂದಿನ ಕಾಲದಿಂದಲೂ ಪಾರಿವಾಳ ಸಂದೇಶ ರವಾನಿಸುವ, ಬೇಹುಗಾರಿಕೆಯಲ್ಲೂ ತನ್ನ ಚಾಣಾಕ್ಯತನ ತೋರಿದೆ. ತಂತ್ರಜ್ಞಾನ ಮುಂದುವರೆದ ಕಾಲದಲ್ಲೂ ಪಾಕಿಸ್ತಾನದಿಂದ ಪತ್ರವೊಂದನ್ನ ಹೊತ್ತು ತಂದಿದೆ ಪಾರಿವಾಳ. ಹೌದು, ಈ ಘಟನೆ ನಡೆದಿರೋದು ರಾಜಸ್ಥಾನದ...

You May Also Like

ಚಿತ್ರದುರ್ಗ

ಚಿತ್ರದುರ್ಗ, (ಜು.31): ಕೋಟೆನಾಡಿನಲ್ಲಿ ಮತ್ತೆ ಸರಗಳ್ಳತ ಹಾವಳಿ ಶುರುವಾಗಿದೆ. ಬೆಳಗಿ ಹೊತ್ತು ವಾಯು ವಿಹಾರಕ್ಕೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡುವ ಕಳ್ಳರು ಬೈಕ್ ನಲ್ಲಿ ಬಂದು ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ. ಶನಿವಾರ ಬೆಳಗ್ಗೆ...

ಪ್ರಮುಖ ಸುದ್ದಿ

ಅಭಿಮಾನಿಗಳು ತಮ್ಮ ಅಭಿಮಾನವನ್ನ ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ಅಭಿಮಾನ ತೋರಿಸ್ತಾರೆ. ಅದರಲ್ಲೂ ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಫೋಟೋಗಳಿಗೆ ಹಾರ ಹಾಕಿ, ಅಭಿಷೇಕ‌ ಮಾಡಿ ಎಂಜಾಯ್ ಮಾಡ್ತಾರೆ. ಇನ್ನು ಒಂದೆಜ್ಜೆ...

ಆರೋಗ್ಯ

ರಾಗಿ ತಿಂದೋನಿಗೆ ರೋಗವಿಲ್ಲ ಅನ್ನೋ ಮಾತು ಕೇಳಿರ್ತೀರಿ. ಆದ್ರೆ ಈ ಮಾತು ಯಾಕೆ ಹೇಳ್ತಾರೆ ಅಂತ ಗೊತ್ತಾಗ್ಬೇಕಂದ್ರೆ ರಾಗಿಯಿಂದ ಆರೋಗ್ಯಕ್ಕೆ ಅದೆಷ್ಟೆಲ್ಲ ಲಾಭಗಳಿವೆ ಎಂದು ತಿಳ್ಕೋಬೇಕು. ರಾಗಿಯಲ್ಲಿ ಸಾಕಷ್ಟು ಕ್ಯಾಲ್ಶಿಯಂ ಇದೆ. ಆಸ್ಟಿಯೋಪೋರೋಸಿಸ್...

ಆರೋಗ್ಯ

ಅರಳಿ ಮರ ಸಾಮಾನ್ಯವಾಗಿ ಎಲ್ಲೆಡೆ ಇರುತ್ತೆ. ಅದಕ್ಕೆ ನಗರ, ಗ್ರಾಮೀಣ ಅಂತೆಲ್ಲಾ ಏನಿಲ್ಲ. ನಗರ ಪ್ರದೇಶದಲ್ಲೂ ದೇವಾಲಯದ ಮುಂದೆ ಅರಳಿಮರವನ್ನ ಕಾಣಬಹುದು. ಈ ಅರಳಿ‌ಮರದ ಎಲೆಗಳಿಂದ ಸಾಕಷ್ಟು ಲಾಭಗಳಿವೆ. ಅದು ಅಷ್ಟಾಗಿ ಯಾರಿಗೂ...

Copyright © 2021 Suddione. Kannada online news portal

error: Content is protected !!