ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ವೈದ್ಯರ ವಿರುದ್ಧ ಹರಿಹಾಯ್ದಿದ್ದಾರೆ. ವೈಧ್ಯರು ನಮ್ಮ ಅಜ್ಜಿಯ ಸಾವಿಗೆ ಕಾರಣರಾಗಿದ್ದಾರೆಂದು ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈದ್ಯರ ಬಗ್ಗೆ ಆಕ್ರೋಶಭರಿತ ಮಾತುಗಳನ್ನಾಡಿದ್ದಾರೆ.
ಕರೋನ ಸಮಯದಲ್ಲಿ 2000ಕ್ಕೂ ಹೆಚ್ಚು ಕುಟುಂಬ, ವೈದ್ಯರಿಗೆ ಪ್ರಾಮಾಣಿಕವಾಗಿ ಕಿಟ್ ತಲುಪಿಸಿದ ನನ್ನಕುಟುಂಬದ ಸ್ವಂತ ಅಜ್ಜಿಗೆ ಇವತ್ತುಬೆಡ್ ಕೊಡದೆ, ರಾತ್ರಿ ಇಡೀ ರಸ್ತೆಯಲ್ಲಿ ನರಳಿಸಿ ಸಾಯಿಸಿದ್ರು. ಮೈಸೂರಿನ ರಾಕ್ಷಸ ವೈದ್ಯ ಸಿಬ್ಬಂದಿ!. 40 ಸಾವಿರ ಕಿತ್ಕೊಂಡು ಮಧ್ಯರಾತ್ರಿ ಅಸ್ಪತ್ರೆಯಿಂದ ನಮ್ಮಜ್ಜಿನ ಓಡಿಸಿ, ಸಾಯಿಸಿದ ವೈದ್ಯಕೀಯ ಲೋಕಕ್ಕೆ ನಾಚಿಕೆಯಾಗ್ಬೇಕು ಎಂದು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.
ಕರೋನಸಮಯದಲ್ಲಿ 2000ಕ್ಕೂ ಹೆಚ್ಚು ಕುಟುಂಬ,ವೈಧ್ಯರಿಗೆ ಪ್ರಾಮಾಣಿಕವಾಗಿ ಕಿಟ್ ತಲುಪಿಸಿದ ನನ್ನಕುಟುಂಬದ ಸ್ವಂತಅಜ್ಜಿಗೆ ಇವತ್ತುbedಕೊಡದೆ ರಾತ್ರಿಇಡೀ ರಸ್ತೆಯಲ್ಲಿ ನರಳಿಸಿ ಸಾಯಿಸಿದ್ರು ಮೈಸೂರಿನ ರಾಕ್ಷಸ ವೈಧ್ಯಸಿಬ್ಬಂದಿ!40ಸಾವಿರ ಕಿತ್ಕೊಂಡು ಮಧ್ಯಾರಾತ್ರಿ ಅಸ್ಪತ್ರೆಯಿಂದ ನಮ್ಮಜ್ಜಿನ ಓಡಿಸಿ,ಸಾಯಿಸಿದ ವೈಧ್ಯಕೀಯ ಲೋಕಕ್ಕೆ ನಾಚಿಕೆಯಾಗ್ಬೇಕು
— Olle Hudga Pratham (@OPratham) December 30, 2020
ಮತ್ತೊಂದು ಪೋಸ್ಟ್ ನಲ್ಲಿ ಪ್ರಾಣ ತೆಗೆದ ನೀವೂ ವೈದ್ಯರ..? ಯಾವ ಬೇವರ್ಸಿ ನಿಮ್ಮನ್ನು ಜೀವರಕ್ಷಕರು ಅಂದಿದ್ದು..? ನಾಚಿಕೆಯಾಗ್ಬೇಕು ನಿಮ್ಗೆ. ಯಾವ ಆಸ್ಪತ್ರೆಯಲ್ಲೂ ಬೆಡ್, ವೆಂಟಿಲೇಟರ್ ಕೊಡದೆ 40 ಸಾವಿರ ರೂಪಾಯಿ ದುಡ್ಡನ್ನು ಕಿತ್ಕೊಂಡು ನಮ್ಮ ಅಜ್ಜಿಯನ್ನು ಸಾಯಿಸಿಯೇ ಬಿಟ್ಟರು. ನನ್ನ ಲೈಫ್ ನಲ್ಲಿ ಇನ್ಯಾರಿಗೂ ಒಂದು ಹನಿ ನೀರನ್ನು ಕೊಡಲ್ಲ. ಸರ್ಕಾರದವರಿಗೆ ಮನುಷ್ಯತ್ವ ಅನ್ನೋದು ಇದ್ರೆ ದೇಹವನ್ನಾದರೂ ಕೊಡಿಸಿ ಎಂದು ಮನವಿ ಮಾಡಿದ್ದಾರೆ.
