in ,

ಪುಕ್ಸಟ್ಟೆ ಲೈಫು ಚಿತ್ರಕ್ಕೆ ಸ್ಯಾಂಡಲ್‌ವುಡ್‌ ನಟರ ಸಾಥ್

suddione whatsapp group join

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಭಿನಯದ ಪುಕ್ಸಟ್ಟೆ ಲೈಫು ಚಿತ್ರ ಈಗಾಗಲೇ ತೆರೆ ಕಂಡಿದ್ದು, ಪ್ರೇಕ್ಷಕರಿಂದ ಶಹಬ್ಬಾಶ್ ಹೇಳಿಸಿಕೊಂಡಿದೆ.

ಅದ್ಭುತ ಒಪನಿಂಗ್ ಪಡೆದುಕೊಂಡಿರುವ ಪುಕ್ಸಟ್ಟೆ ಲೈಫು ಚಿತ್ರ ನಿರೀಕ್ಷೆಯಂತೆ ಬಹುದೊಡ್ಡ ಮಟ್ಟದ ಪಾಸಿಟಿವ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.

ಚಿತ್ರದ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರದ ಬಗೆಗಿನ ಬರಹ ಕಂಡು ಸ್ಯಾಂಡಲ್‌ವುಡ್‌ ನಟರು ಪುಕ್ಸಟ್ಟೆ ಲೈಫು ಚಿತ್ರ ವೀಕ್ಷಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದರಂತೆ ಇಂದು ನಟರಾದ ರಕ್ಷಿತ್ ಶೆಟ್ಟಿ, ವಸಿಷ್ಠ ಸಿಂಹ, ಅನೀಶ್ ಹಾಗೂ ಬೆಲ್ ಬಾಟಂಚಿತ್ರತಂಡ ಇಂದು ಪುಕ್ಸಟ್ಟೆ ಲೈಫು ಸಿನಿಮಾವನ್ನು ವೀಕ್ಷಿಸಲಿದ್ದಾರೆ. ಇಂದು ಸಂಜೆ 6.30ಕ್ಕೆ ಗೋಪಾಲನ್ ಆರ್ಕೆಡ್ ಮಾಲ್ ನಲ್ಲಿ ಇವರೆಲ್ಲರೂ ಸಿನಿಮಾ ವೀಕ್ಷಿಸಿ ಪುಕ್ಸಟ್ಟೆ ಲೈಫು  ಚಿತ್ರತಂಡ್ಕಕೆ ಸಾಥ್ ನೀಡಲಿದ್ದಾರೆ.


ಅರವಿಂದ್ ಕುಪ್ಲೀಕರ್ ನಿರ್ದೇಶನದಲ್ಲಿ  ಮೂಡಿಬಂದಿರುವ ಪುಕ್ಸಟೆ ಲೈಫು ಚಿತ್ರಕ್ಕೆ  ವಾಸು ಧೀಕ್ಷಿತ್ ಸಂಗೀತ ನಿರ್ದೇಶನ ಮಾಡಿದ್ದಾರೆ.  ಸರ್ವಸ್ವ ಪ್ರೊಡಕ್ಷನ್ಸ್ನ ಬ್ಯಾನರ್ ಅಡಿಯಲ್ಲಿ ಚಿತ್ರ ಅಚ್ಟುಕಟ್ಟಾಗಿ ಮೂಡಿಬಂದಿದೆ. ಚಿತ್ರಕ್ಕೆ ಸುರೇಶ್ ಆರ್ಮುಗಂ ಸಂಕಲನ,  ಪೂರ್ಣಚಂದ್ರ ತೇಜಸ್ವಿಯವರ ಹಿನ್ನೆಲೆ ಸಂಗೀತ ಮತ್ತು ಅದ್ವೈತ್ ಗುರುಮೂರ್ತಿ ಛಾಯಾಗ್ರಹಣವಿದೆ.

ಪುಕ್ಸಟೆ ಲೈಫು ಚಿತ್ರದಲ್ಲಿ ಸಂಚಾರಿ ವಿಜಯ್ ಅವರ ಜೊತೆಗೆ ಮಾತಂಗಿ ಪ್ರಸನಾ ನಾಯಕಿಯಾಗಿ ನಟಿಸಿದ್ದು, ಅಚ್ಯುತ್ ಕುಮಾರ್ ಹಾಗೂ ರಂಗಾಯಣ ರಘು ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಕೈಕೊಟ್ಟ ಮುಂಗಾರು..ತಲೆ ಮೇಲೆ ಕೈ ಹೊತ್ತ ರೈತ..ಬೆಳೆಯನ್ನೇ ನಂಬಿದವರ ಬದುಕೇನು..?

ಹೊಸದುರ್ಗ: “ಫಿಟ್ ಇಂಡಿಯಾ ಪ್ರೀಡಂ ರನ್”ಗೆ ತಹಶೀಲ್ದಾರ್ ಚಾಲನೆ