ಸಂಚಾರಿ ವಿಜಯ್ ಇದ್ದಿದ್ರೆ ಇವತ್ತು ಅದೆಷ್ಟು ಖುಷಿ ಪಡ್ತಿದ್ರೋ ಏನೋ. ಯಾಕಂದ್ರೆ ಸಂಚಾರಿ ವಿಜಯ್ ಅಭಿನಯದ ಪುಕ್ಸಟ್ಟೆ ಲೈಫು ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಈ ಸಿನಿಮಾದಲ್ಲಿ ಒಂಥರ ಡಿಫ್ರೆಂಟ್ ಆಗಿಯೇ ಕಾಣ್ತಿದ್ದಾರೆ ಸಂಚಾರಿ ವಿಜಯ್.
ಅರವಿಂದ್ ಕುಪ್ಳಿಕರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಹೊಸ ಪಾತ್ರದಲ್ಲಿ ಸಂಚಾರಿ ವಿಜಯ್ ಕಾಣಿಸಿಕೊಂಡಿದ್ದು, ಮುಸ್ಲಿಂ ಯುವಕನಾಗಿ, ಬೀಗ ರಿಪೇರಿ ಮಾಡುವ ಅವತಾರದಲ್ಲಿ ಕಾಣಿಸಿದ್ದಾರೆ. ವಿಜಿ ಈ ಲುಕ್ ಗೆ ಅಭಿಮಾನಿಗಳು ದಂಗಾಗಿದ್ದಾರೆ.
ಕಳ್ಳನಾಗಿ ಕಾಣಿಸಿಕೊಳ್ಳುವ ವಿಜಯ್, ಪೊಲೀಸ್ ಆಗಿ ಅಚ್ಯುತ ಕುಮಾರ್, ಸಿಬಿಐ ಆಫೀಸರ್ ಆಗಿ ರಂಗಾಯಣ ರಘು ಹೀಗೆ ಅನೇಕ ರೀತಿಯ ಕ್ಯೂರಿಯಾಸಿಟಿಗಳು ಸಿನಿಮಾದಲ್ಲಿವೆ. ಸದ್ಯ ಟ್ರೇಲರ್ ರಿಲೀಸ್ ಆಗಿದ್ದು ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನು ಸಂಚಾರಿ ವಿಜಯ್ ಅಪಘಾತದಲ್ಲಿ ಸಾವನ್ನಪ್ಪಿದ ಬಳಿಕ ಅವರ ಸಾಕಷ್ಟು ಸಿನಿಮಾಗಳು ಹಾಡು, ಟ್ರೇಲರ್ ರಿಲೀಸ್ ಮಾಡಿ ವಿಜಿ ಅವರ ನಟನೆ, ಅವರ ನೆನಪನ್ನ ಮರುಕಳುಹಿಸುವಂತೆ ಮಾಡಿದೆ. ಸಂಚಾರಿ ವಿಜಯ್ ಒಂದೇ ಥರನಾದ ಪಾತ್ರವನ್ನ ಎಲ್ಲೂ ಮಾಡಿಲ್ಲ. ಒಂದೊಂದು ಸಿನಿಮಾದಲ್ಲೂ ಒಂದೊಂದು ತೆರನಾದ ಪಾತ್ರ ಮಾಡಿದ್ದಾರೆ. ಅಷ್ಟು ಸಿನಿಮಾಗಳನ್ನ ಪ್ರೇಕ್ಷಕರು ಕಣ್ತುಂಬಿಕೊಳ್ಳಬೇಕಷ್ಟೆ.