ಜನ್ಮದಿನವು ಎಲ್ಲರಿಗೂ ತುಂಬಾ ವಿಶೇಷ ದಿನವಾಗಿದೆ. ಆದರೆ ಅದೇ ದಿನ ನಮ್ಮ ಕುಟುಂಬ ಸದಸ್ಯರ ಹುಟ್ಟುಹಬ್ಬವೂ ಇದ್ದರೆ ಆ ಮಜಾನೇ ಬೇರೆ. ಖುಷಿ ದುಪ್ಪಟ್ಟಾಗುತ್ತದೆ. ಒಂದೇ ಕುಟುಂಬದ 9 ಜನರ ಹುಟ್ಟು ಹಬ್ಬ ಒಂದೇ ದಿನವಾಗಿದ್ದರೆ ಇದೆಂತ ವಿಸ್ಮಯ. ಶಾಕ್ ಆಗ್ತೀರಾ ? ಇದು ಸತ್ಯ. ಆ ಕುಟುಂಬದ 9 ಸದಸ್ಯರು ಒಂದೇ ದಿನಾಂಕದಂದು ಜನಿಸಿದರು. ಅವರು ಪ್ರತಿ ವರ್ಷ ಸಾಮೂಹಿಕವಾಗಿ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಇದರೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಅದು ಯಾರ ಕುಟುಂಬ? ಅವರು ಎಲ್ಲಿದ್ದಾರೆ? ಎಂಬುದನ್ನು ತಿಳಿದುಕೊಳ್ಳೋಣ.
ಸುದ್ದಿಒನ್
ಒಂದು ಕುಟುಂಬದಲ್ಲಿ 9 ಜನರ ಹುಟ್ಟು ಹಬ್ಬ ಒಂದೇ ದಿನ ಬರುತ್ತವೆ ಎಂದು ಯಾರಾದರೂ ಊಹಿಸಬಹುದೇ? ಅದು ಕೂಡ ಹೆಂಡತಿ ಗಂಡ, ಮತ್ತು ಅವರ ಏಳು ಮಕ್ಕಳು ಒಂದೇ ದಿನಾಂಕದಂದು ಜನಿಸಿದ್ದಾರೆ. ಆದರೆ ಅವರು ಬೇರೆ ಬೇರೆ ವರ್ಷಗಳಲ್ಲಿ ಜನಿಸಿದರೂ, ತಿಂಗಳು ಮತ್ತು ದಿನಾಂಕ ಒಂದೇ ದಿನ ಆಗಿರುವುದು ವಿಶೇಷ. ಅದು ನಿಜವಾಗಿಯೂ ಸಾಧ್ಯಾನಾ ? ಎಂದು ಆಶ್ಚರ್ಯ ಪಡುವುದರಲ್ಲಿ ತಪ್ಪೇನಿಲ್ಲ.ಆದರೂ ಇದು ನಂಬಲೇಬೇಕಾದ ಸತ್ಯ.
ಇದು ವಿಚಿತ್ರವೆನಿಸಿದರೂ ನಿಜ.
ಹಾಗಾಗಿಯೇ ಈ ಕುಟುಂಬ ಗಿನ್ನೆಸ್ ದಾಖಲೆಗೆ ಸೇರಿದೆ. ಈ ಅಪರೂಪದ ಘಟನೆಗೆ ಸಾಕ್ಷಿಯಾದ ಕುಟುಂಬ ಇರುವುದು ಪಾಕಿಸ್ತಾನದಲ್ಲಿ. ಇದರ ಇನ್ನೊಂದು ವಿಶೇಷತೆ ಏನೆಂದರೆ ಇದೇ ದಿನ ಈ ಜೋಡಿ ಮದುವೆಯಾದದ್ದು.
ಪಾಕಿಸ್ತಾನದ ಲರ್ಕಾನಾದ ಅಮೀರ್ ಅಲಿ ಅವರ ಕುಟುಂಬ ಈ ದಾಖಲೆಯನ್ನು ಹೊಂದಿದೆ. ಅಮೀರ್ ಅಲಿ ಮತ್ತು ಅವರ ಪತ್ನಿ ಖುಡೇಜಾ ಅವರೊಂದಿಗೆ ಅವರ ಏಳು ಮಕ್ಕಳು ಒಂದೇ ದಿನಾಂಕದಂದು ಜನಿಸಿದ್ದಾರೆ.
ಅಮೀರ್-ಖುಡೇಜಾ ದಂಪತಿಯ ಏಳು ಮಕ್ಕಳ ವಯಸ್ಸು 19 ರಿಂದ 30 ವರ್ಷಗಳು. ಇದರ ಇನ್ನೊಂದು ವಿಶೇಷತೆ ಏನೆಂದರೆ ಅಮೀರ್-ಖುಡೇಜಾ ಮದುವೆ ದಿನವೂ ಇದೇ ಆಗಿದೆ. ಆದರೆ ಅವರಿಗೆ ಹುಟ್ಟಿದ ಮಗು ನಿಗದಿತ ಸಮಯಕ್ಕೆ ಸರಿಯಾಗಿಯೇ ಜನಿಸಿದ್ದಾರೆಯೇ ಹೊರತು ನಾವು ಸಮಯ ಮತ್ತು ದಿನಾಂಕಕ್ಕೆ ಅನುಗುಣವಾಗಿ ಹೆರಿಗೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಅಪರೂಪದ ಸಾಧನೆ ಮಾಡಿದ ಕುಟುಂಬ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದೆ. ಇದಕ್ಕಾಗಿ ಅವರಿಗೆ ಪ್ರಮಾಣಪತ್ರವನ್ನೂ ನೀಡಲಾಗಿದೆ. ಆ ಕುಟುಂಬದ ಎಲ್ಲಾ 9 ಸದಸ್ಯರು ಬೇರೆ ಬೇರೆ ವರ್ಷಗಳಲ್ಲಿ ಆಗಸ್ಟ್ 1 ರಂದು ಜನಿಸಿದ್ದಾರೆ.
ಹುಟ್ಟುಹಬ್ಬವನ್ನು ಒಂದೇ ದಿನದಲ್ಲಿ ಆಚರಿಸಲು ನಾವು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅಮೀರ್ ಅಲಿ ಹೇಳುತ್ತಾರೆ. ಆದರೆ ಇದೆಲ್ಲ ದೇವರ ದಯೆ ಎಂದರು. ತಮ್ಮ ಕುಟುಂಬಕ್ಕೆ ಈ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಸಿಕ್ಕಿರುವುದಕ್ಕೆ ದೇವರಿಗೆ ತುಂಬಾ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಅಮೀರ್ ಅಲಿ-ಖುಡೇಜಾ ಅವರು ಹೊಂದಿದ್ದ ಏಳು ಮಕ್ಕಳಲ್ಲಿ ಎರಡು ಬಾರಿ ಅವಳಿ ಮಕ್ಕಳು ಜನಿಸಿದ್ದಾರೆ. ಪ್ರತಿ ಆಗಸ್ಟ್ 1 ರಂದು ಅವರ ಇಡೀ ಕುಟುಂಬವು ಅವರ ಹುಟ್ಟುಹಬ್ಬ ಮತ್ತು ಅವರ ಮದುವೆಯ ದಿನವನ್ನು ಆಚರಿಸುತ್ತದೆ.
ಅಲ್ಲದೇ ಈಗ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿರುವುದು ಆ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ. ಈಗ ನಮ್ಮ ಹುಟ್ಟುಹಬ್ಬದ ಬಗ್ಗೆ ಎಲ್ಲರಿಗೂ ತಿಳಿಯುತ್ತಿದೆ ಎಂದು ಅವರು ಹೇಳಿದರು.
ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 25 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಮಂಗಳವಾರ, ಫೆಬ್ರವರಿ. 25 ) ಹತ್ತಿ…
ಸುದ್ದಿಒನ್ :ಭಾರತದಲ್ಲಿ ಮೂತ್ರಪಿಂಡದಲ್ಲಿ ಕಲ್ಲುಗಳ ಸಮಸ್ಯೆ ಹೆಚ್ಚುತ್ತಿದೆ. ಹೆಚ್ಚಿನ ಸಂಖ್ಯೆಯ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಬಹಳ…
ಅಂತೂ ಇಂತೂ ಈ ರಾಶಿಯವರದು ಮದುವೆಯಾಯಿತು, ಈ ರಾಶಿಯವರಿಗೆ ಉದ್ಯೋಗದ ವರ್ಗಾವಣೆಯಿಂದ ಸಂತಸ, ಮಂಗಳವಾರದ ರಾಶಿ ಭವಿಷ್ಯ 25 ಫೆಬ್ರವರಿ…
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…