Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಾಕುಂತಲಾ’ ಡಬ್ಬಿಂಗ್ ಗಾಗಿ ಮಾಜಿ ಪತಿಯ ಸ್ಟುಡಿಯೋಗೆ ಭೇಟಿ ಕೊಟ್ಟ ಸಮಂತಾ..!

Facebook
Twitter
Telegram
WhatsApp

ಟಾಲಿವುಡ್ ನಟಿ ಸಮಂತಾ ಹಾಗೂ ನಾಗಚೈತನ್ಯ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯವಾಡಿರೋದು ಹೊಸ ವಿಷಯವಲ್ಲ. ಆದ್ರೆ ಸಮಂತಾ ಈಗ ನಾಗಚೈತನ್ಯರಿಗೆ ಸಂಬಂಧಪಟ್ಟ ಜಾಗಕ್ಕೆ ಹೋಗಿರೋದು ಹೊಸ ವಿಷಯವಾಗಿದೆ.

ಹೌದು, ನಂಗೆ ಯಾವುದೇ ಜೀವನಾಂಶ ಬೇಡವೆಂದು ವಿಚ್ಚೇದನ ಪಡೆದಿರುವ ಸಮಂತಾ, ಸಿನಿಮಾ, ಪ್ರೊಫೇಷನಲ್ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾದ ವಿಚಾರಕ್ಕೆ ಅಕ್ಕಿನೇನಿ ಕುಟುಂಬದ ಸ್ಟುಡಿಯೋಗೆ ಹೋಗಿದ್ದಾರೆ. ಅನ್ನಪೂರ್ಣ ಸ್ಟುಡಿಯೋಗೆ ಡಬ್ಬಿಂಗ್ ಕಾರ್ಯಕ್ಕಾಗಿ ತೆರಳಿದ್ದಾರೆ.

ಶಾಕುಂತಲ ಸಿನಿಮಾ ಸಮಂತಾ ಅವರಿಗೆ ತುಂಬಾನೆ ಮುಖ್ಯ. ಗುಣಶೇಖರ್ ನಿರ್ದೇಶನದಲ್ಲಿ ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಡಬ್ಬಿಂಗ್ ಕಾರ್ಯ ಶುರುವಾಗಿದೆ.‌ಈ ಡಬ್ಬಿಂಗ್ ಗಾಗಿ ಸಮಂತಾ ನೇರವಾಗಿ ಹೈದ್ರಾಬಾದ್ ನಲ್ಲಿರುವ ತಮ್ಮ ಮಾವ ಅಕ್ಕಿನೇನಿ ನಾಗಾರ್ಜುನ ಕುಟುಂಬದ ಅನ್ನಪೂರ್ಣ ಡಬ್ಬಿಂಗ್ ಸ್ಟುಡಿಯೋಗೆ ಭೇಟಿ ನೀಡಿದ್ದಾರೆ.

ಡಿವೋರ್ಸ್ ಆದ ಬಳಿಕ ಮಾವನವರ ಸ್ಟುಡಿಯೋಗೆ ಹೋಗಿರುವುದು ಕೆಲವರ ಕಣ್ಣು ಅರಳಿಸಿದೆ. ಇನ್ನು ಕೆಲವರು ಸಮಂತಾರ ಕೆಲಸದ ಬದ್ಧತೆಗೆ ಕೊಂಡಾಡಿದ್ದಾರೆ. ವೈಯಕ್ತಿಕ ಜೀವನಕ್ಕೂ ವೃತ್ತಿ ಜೀವನಕ್ಕೂ ಮಿಕ್ಸ್ ಮಾಡದ ಸಮಂತಾರಿಗೆ ಮೆಚ್ವುಗೆ ಸೂಚಿಸಿದ್ದಾರೆ. ಸಮಂತಾ ಕೂಡ ಇದೇ ಮೊದಲ ಬಾರಿಗೆ ಡಿವೊರ್ಸ್ ಆದ ಬಳಿಕ ಮಾಜಿ ಪತಿಗೆ ಸಂಬಂಧ ಪಟ್ಟ ಜಾಗಕ್ಕೆ ಹೋಗಿರೋದು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೆಣಸಿನಕಾಯಿ ಕತ್ತರಿಸಿದ ನಂತರ ನಿಮ್ಮ ಕೈಗಳು ಉರಿಯದಂತೆ ತಡೆಯಲು ಹೀಗೆ ಮಾಡಿ….!

ಸುದ್ದಿಒನ್ : ಮೆಣಸಿನಕಾಯಿ ಕತ್ತರಿಸಿದ ನಂತರ ಕೈಗಳು ಉರಿಯುತ್ತವೆ.  ಇದು ಕೆಲವೊಮ್ಮೆ ಹೆಚ್ಚು ಆಗಬಹುದು. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ರಾಸಾಯನಿಕವೇ ಇದಕ್ಕೆ ಕಾರಣ. ಮತ್ತು ಈ ಉರಿಯನ್ನು ಕಡಿಮೆ ಮಾಡಲು ಯಾವ ಸಲಹೆಗಳನ್ನು ಅನುಸರಿಸಬಹುದು

ಬೇಸಿಗೆಯಲ್ಲಿ ಸೌತೆಕಾಯಿ ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ ?

ಸುದ್ದಿಒನ್ : ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದೆ. ಇದರಿಂದಾಗಿ ಅನೇಕರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬೇಸಿಗೆಯ ಧಗೆಗೆ ತಕ್ಕಂತೆ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸಬೇಕು. ಈ ಬೇಸಿಗೆಯಲ್ಲಿ ಪ್ರತಿದಿನ ಸೌತೆಕಾಯಿಯನ್ನು ತಿನ್ನುವುದು ಒಳ್ಳೆಯದು.

ಈ ರಾಶಿಯವರು ಇಂದು ತುಂಬಾ ಖುಷಿ ಪಡೆಯುವ ಸಂದೇಶ ಪಡೆಯಲಿದ್ದಾರೆ

ಈ ರಾಶಿಯವರು ಇಂದು ತುಂಬಾ ಖುಷಿ ಪಡೆಯುವ ಸಂದೇಶ ಪಡೆಯಲಿದ್ದಾರೆ, ಶನಿವಾರ- ರಾಶಿ ಭವಿಷ್ಯ ಏಪ್ರಿಲ್-20,2024 ಸೂರ್ಯೋದಯ: 06:00, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

error: Content is protected !!