Connect with us

Hi, what are you looking for?

ಪ್ರಮುಖ ಸುದ್ದಿ

ನಮಗೆ ಉಪ್ಪು ದೊರೆಯುವ ಮೂಲ ಯಾವುದು ಗೊತ್ತಾ; ಇಲ್ಲಿದೆ ಓದಿ ಸ್ವಾರಸ್ಯಕರ ಮಾಹಿತಿ

ವಿಶೇಷ ಲೇಖನ: ಜೆ.ಪರಶುರಾಮ

ಉಪ್ಪು ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಸುಳಿಯುವುದು ಅಡುಗೆ ಮನೆಯ ಉಪ್ಪು. ಆದರೆ ವಿಜ್ಞಾನಿಗಳಿಗೆ ಉಪ್ಪು ಎಂದರೆ ರಾಸಾಯನಿಕ ವಸ್ತುಗಳು ಅಥವಾ ಲವಣಗಳು. ಅಡುಗೆ ಉಪ್ಪು ಇವುಗಳಲ್ಲಿ ಒಂದು. ಒಂದು ಆಮ್ಲ ಮತ್ತು ಪ್ರತ್ಯಾಮ್ಲದ ನಡುವಣ ರಾಸಾಯನಿಕ ಪ್ರತಿಕ್ರಿಯೆ ಅಥವಾ ಒಮದು ಲೋಹ, ಆಮ್ಲದಲ್ಲಿರುವ ಜಲಜನಕವನ್ನು ಸ್ಥಳಾಂತರಿಸಿದಾಗ ಉಪ್ಪು ಸಿಗುತ್ತದೆ. ವಿವಿಧ ಮಾದರಿಯ ಉಪ್ಪನ್ನು ಪಡೆಯಲು ವಿಜ್ಞಾನಿಗಳು ಪ್ರಯೋಗಶಾಲೆಗಳಲ್ಲಿ ಸಂಶೋಧನೆ ನಡೆಸುತ್ತಲೇ ಇದ್ದಾರೆ.

ಎಲ್ಲಾ ಉಪ್ಪುಗಳೂ ಹರಳುಗಳಿಂದಾದವು. ಅಡುಗೆ ಉಪ್ಪು ಬಿಳಿ ಹರಳಿನಂತಿರುತ್ತದೆ. ಇದರ ರಾಸಾಯನಿಕ ಹೆಸರು ಸೋಡಿಯಂ ಕ್ಲೋರೈಡ್. ನೀರಿನಲ್ಲಿ ಇದು ಸುಲಭವಾಗಿ ಕರಗುತ್ತದೆ. ವಿಶ್ವದಲ್ಲಿ ಅತಿ ಹೆಚ್ಚು ಬಳಕೆಯಾಗುವ ಲವಣವಿದು. ಸುಮಾರು 16 ಸಾವಿರ ಉಪಯೋಗಗಳು ಈ ಉಪ್ಪಿನಿಂದ ಇವೆ. ಮುಖ್ಯವಾಗಿ ಆಹಾರದ ರುಚಿಗೆ ಇದನ್ನು ಬಳಸುತ್ತಾರೆ.

ಮಾಂಸ, ಮೀನು ಮತ್ತು ತರಕಾರಿಗಳ ಸಂರಕ್ಷಣೆಗೂ ಇದನ್ನು ಉಪಯೋಗಿಸುತ್ತಾರೆ. ಕೈಗಾರಿಕೆಗಳಲ್ಲು ಇದರ ಬಳಕೆಯಿದೆ. ಬಣ್ಣ, ಪಿಂಗಾಣಿ ಪಾತ್ರೆ, ಔಷಧ, ಕಾಗದ ಮತ್ತು ಚರ್ಮ ಹದ ಮಾಡಲು ಇದನ್ನು ಬಳಸುತ್ತಾರೆ. ಕೆಲವು ರಾಷ್ಟçಗಳಲ್ಲಿ ಚಳಿಗಾಲದಲ್ಲಿ ಹಿಮ ಮತ್ತು ಮಂಜು ರಸ್ತೆಗಳನ್ನು ಮುಚ್ಚಿರುತ್ತದೆ. ಅದನ್ನು ಕರಿಗಿಸಲು ಉಪ್ಪನ್ನು ಸಿಂಪಡಿಸುತ್ತಾರೆ ಮತ್ತು ಮೋಡ ಬಿತ್ತನೆಯಲ್ಲಿ (ಮಳೆ ತರಲು) ಬಳಸುತ್ತಾರೆ.

ನಮ್ಮ ಶರೀರ ಆರೋಗ್ಯವಾಗಿರಲು ಉಪ್ಪು ಅಗತ್ಯ. ಮಲಮೂತ್ರದ ಮೂಲಕ ಶರೀರ ಸತತ ಉಪ್ಪನ್ನು ಕಳೆದುಕೊಳ್ಳುವುದರಿಂದ ದಿನವೂ ನಿಯಮಿತವಾಗಿ ಉಪ್ಪು ತಿನ್ನುವುದು ಅನಿವಾರ್ಯ. ಒಬ್ಬ ಯುವಕನಿಗೆ ದಿನಕ್ಕೆ ಸರಾಸರಿ ಅರ್ಧ ಗ್ರಾಂ ಉಪ್ಪು ಬೇಕೇಬೇಕು. ಆದರೆ ಜನರು 5 ರಿಂದ 20 ಗ್ರಾಂ ಉಪ್ಪು ತಿನ್ನುತ್ತಾರೆ. ತ್ಯಾಜ್ಯ ಉಪ್ಪನ್ನು ಶರೀರ ಬೆವರು ಮತ್ತು ಮೂತ್ರದ ಮೂಲಕ ಹೊರಹಾಕುತ್ತದೆ.

ಸಮುದ್ರದ ನೀರು ಬಹಳ ಉಪ್ಪಾಗಿರುತ್ತದೆ. ಐದು ಲೀಟರ್ ಸಮುದ್ರ ನೀರಿನಲ್ಲಿ 100 ಗ್ರಾಂನಷ್ಟು ಉಪ್ಪಿರುತ್ತದೆ. ಉಷ್ಣ ಪ್ರದೇಶಗಳಲ್ಲಿ ಸಮುದ್ರದ ನೀರನ್ನು ತೊರಗಳಿಗೆ ಹಾಯಿಸಿ ಬಸಿದು ಉಪ್ಪು ಪಡೆಯುತ್ತಾರೆ.

ಸೂರ್ಯನ ಶಾಖದಿಂದ ಸಮುದ್ರದ ನೀರು ಆವಿಯಾಗಿ ಉಪ್ಪು ಮಾತ್ರ ಉಳಿಯುತ್ತದೆ. ಅದನ್ನು ಪರಿಷ್ಕರಿಸಿ, ಅಡುಗೆ ಉಪ್ಪನ್ನು ಪಡೆಯಲಾಗುತ್ತದೆ. ಕೆಲವು ಬಾರಿ ಉಪ್ಪನ್ನು ಇಷ್ಟು ಸುಲಭವಾಗಿ ಪಡೆಯಲಾಗುವುದಿಲ್ಲ. ಕಲ್ಲುಪ್ಪಗಳು ಆಳದಲ್ಲಿರುವ ಕಲ್ಲು-ಬಂಡೆಗಳಲ್ಲಿ ದೊರೆಯುತ್ತದೆ. ಒಂದು ಕಾಲದಲ್ಲಿ ಸಮುದ್ರದ ಭಾಗವಾಗಿದ್ದ ಭೂಭಾಗಗಳಲ್ಲಿ ಕಲ್ಲುಪ್ಪುಗಳು ಹೀಗೆ ರೂಪುಗೊಂಡಿವೆ.

ಹಿಂದಿನ ಸಮುದ್ರಗಳು ಬತ್ತಿಹೋದಾಗ ಉಪ್ಪು ಉಳಿದು ಬಂಡೆಗಳ ಪದರಗಳ ನಡುವೆ ಸೇರಿಹೋಗುತ್ತದೆ. ಕೆನಡ, ಪೋಲ್ಯಾಂಡ್, ಸೈಬೀರಿಯಾ, ಇಂಗ್ಲೆಂಡ್‌ನ ಚೆಷ್ಯೆರ್‌ಗಳಲ್ಲಿ ಬೃಹತ್ ಕಲ್ಲುಪ್ಪು ನಿಕ್ಷೇಪಗಳಿವೆ. ಬಂಡೆಗಳನ್ನು ಕೊರೆದು ಇದನ್ನು ಪಡೆಯಬೇಕು. ಕೆಲವು ಬಾರಿ ನೀರನ್ನು ಬಂಡೆಗಳ ನಡುವೆ ಹಾಯಿಸಿ ಕಲ್ಲುಪ್ಪನ್ನು ನೀರಿನ ರೂಪದಲ್ಲಿ ಹೊರಕ್ಕೆತ್ತಲಾಗುತ್ತದೆ. ಆ ನೀರನ್ನು ಆವಿ ಮಾಡಿ ಉಪ್ಪು ಪಡೆಯಲಾಗುತ್ತದೆ.

ನಮ್ಮ ಪುರಾತನ ಸಂಸ್ಕೃತಿಗಳಲ್ಲಿ ಉಪ್ಪಿಗೂ ಧಾರ್ಮಿಕ ಮಹತ್ವವಿತ್ತು. ರೋಮ್‌ನ ಸೈನಿಕರಿಗೆ ವೇತನದ ಜೊತೆಯಲ್ಲಿ ಉಪ್ಪಿನ ಭತ್ಯೆಯನ್ನೂ ನೀಡಲಾಗುವುದು. ಇದರಿಂದಾಗಿಯೇ ವೇತನಕ್ಕೆ ಇಂಗ್ಲೀಷ್‌ನಲ್ಲಿ ‘ಸ್ಯಾಲರಿ’ ಎಂಬ ಶಬ್ದ ಬಂದಿತು.

ಲೇಖಕರು: ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ,
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ,
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ರಿ.)

Click to comment

Leave a Reply

Your email address will not be published. Required fields are marked *

Latest

ಚಿತ್ರದುರ್ಗ

upper bhadra meeting in DS Hally, chitradurga ಡಿಎಸ್ ಹಳ್ಳಿಯಲ್ಲಿ ಭದ್ರಾ ಮೇಲ್ದಂಡೆ ಸಭೆ; ಗ್ರಾಮಸ್ಥರು ಭಾಗಿ ಸುದ್ದಿಒನ್, ಚಿತ್ರದುರ್ಗ, (ಆ.03) : ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಜ್ಞಾನಪೂರ್ಣ ಶಾಲೆ ಆವರಣದಲ್ಲಿ...

ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.03) : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್ ಜೆ ಎಮ್ ಸಿ ಬಿ ಎಸ್ ಇ ರೆಸಿಡೆನ್ಷಿಯಲ್ ಶಾಲೆಯು 2020-21 ನೇ ಸಾಲಿನ ಸಿ ಬಿ ಎಸ್ ಇ...

ಪ್ರಮುಖ ಸುದ್ದಿ

ಬೆಂಗಳೂರು: ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸೋದಕ್ಕಾಗಿಯೇ ಸಿಎಂ ಮೂರು ದಿನದಿಂದ ದೆಹಲಿಯಲ್ಲಿದ್ದಾರೆ. ಈಗಾಗಲೇ ಹೈಕಮಾಂಡ್ ಜೊತೆ ಈ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಸಂಪುಟದಲ್ಲಿ ಯಾರೆಲ್ಲಾ ಇರ್ಬೇಕು...

ಪ್ರಮುಖ ಸುದ್ದಿ

ಮುಂಬೈ: ಶಿಲ್ಲಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟೀವ್ ಆಗಿದ್ರೋ ಮಗ ವಿಹಾನ್ ಕುಂದ್ರಾ ಕೂಡ ಅಷ್ಟೇ ಆ್ಯಕ್ಟೀವ್ ಆಗಿದ್ದ. ಸದಾ ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕ್ತಾ ಇದ್ದ. ಆದ್ರೆ ರಾಜ್...

ಪ್ರಮುಖ ಸುದ್ದಿ

ರಾಜಸ್ಥಾನ : ಹಿಂದಿನ ಕಾಲದಿಂದಲೂ ಪಾರಿವಾಳ ಸಂದೇಶ ರವಾನಿಸುವ, ಬೇಹುಗಾರಿಕೆಯಲ್ಲೂ ತನ್ನ ಚಾಣಾಕ್ಯತನ ತೋರಿದೆ. ತಂತ್ರಜ್ಞಾನ ಮುಂದುವರೆದ ಕಾಲದಲ್ಲೂ ಪಾಕಿಸ್ತಾನದಿಂದ ಪತ್ರವೊಂದನ್ನ ಹೊತ್ತು ತಂದಿದೆ ಪಾರಿವಾಳ. ಹೌದು, ಈ ಘಟನೆ ನಡೆದಿರೋದು ರಾಜಸ್ಥಾನದ...

ಪ್ರಮುಖ ಸುದ್ದಿ

ಬೆಂಗಳೂರು :ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕೊನೆ ಕ್ಷಣದಲ್ಲಿ ತನ್ನ ಪಾಳಯದ ಬಸವರಾಜ್ ಬೊಮ್ಮಾಯಿ ಅವರಿಗೆ ಪಟ್ಟ ಕಟ್ಟಿ ಇದೀಗ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ ಬಿ.ಎಸ್.ಯಡಿಯೂರಪ್ಪ. ದೆಹಲಿಯಲ್ಲಿ ಸಚಿವ ಸಂಪುಟ ಕಸರತ್ತು...

You May Also Like

ಚಿತ್ರದುರ್ಗ

ಚಿತ್ರದುರ್ಗ, (ಜು.31): ಕೋಟೆನಾಡಿನಲ್ಲಿ ಮತ್ತೆ ಸರಗಳ್ಳತ ಹಾವಳಿ ಶುರುವಾಗಿದೆ. ಬೆಳಗಿ ಹೊತ್ತು ವಾಯು ವಿಹಾರಕ್ಕೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡುವ ಕಳ್ಳರು ಬೈಕ್ ನಲ್ಲಿ ಬಂದು ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ. ಶನಿವಾರ ಬೆಳಗ್ಗೆ...

ಪ್ರಮುಖ ಸುದ್ದಿ

ಅಭಿಮಾನಿಗಳು ತಮ್ಮ ಅಭಿಮಾನವನ್ನ ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ಅಭಿಮಾನ ತೋರಿಸ್ತಾರೆ. ಅದರಲ್ಲೂ ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಫೋಟೋಗಳಿಗೆ ಹಾರ ಹಾಕಿ, ಅಭಿಷೇಕ‌ ಮಾಡಿ ಎಂಜಾಯ್ ಮಾಡ್ತಾರೆ. ಇನ್ನು ಒಂದೆಜ್ಜೆ...

ಆರೋಗ್ಯ

ರಾಗಿ ತಿಂದೋನಿಗೆ ರೋಗವಿಲ್ಲ ಅನ್ನೋ ಮಾತು ಕೇಳಿರ್ತೀರಿ. ಆದ್ರೆ ಈ ಮಾತು ಯಾಕೆ ಹೇಳ್ತಾರೆ ಅಂತ ಗೊತ್ತಾಗ್ಬೇಕಂದ್ರೆ ರಾಗಿಯಿಂದ ಆರೋಗ್ಯಕ್ಕೆ ಅದೆಷ್ಟೆಲ್ಲ ಲಾಭಗಳಿವೆ ಎಂದು ತಿಳ್ಕೋಬೇಕು. ರಾಗಿಯಲ್ಲಿ ಸಾಕಷ್ಟು ಕ್ಯಾಲ್ಶಿಯಂ ಇದೆ. ಆಸ್ಟಿಯೋಪೋರೋಸಿಸ್...

ಆರೋಗ್ಯ

ಅರಳಿ ಮರ ಸಾಮಾನ್ಯವಾಗಿ ಎಲ್ಲೆಡೆ ಇರುತ್ತೆ. ಅದಕ್ಕೆ ನಗರ, ಗ್ರಾಮೀಣ ಅಂತೆಲ್ಲಾ ಏನಿಲ್ಲ. ನಗರ ಪ್ರದೇಶದಲ್ಲೂ ದೇವಾಲಯದ ಮುಂದೆ ಅರಳಿಮರವನ್ನ ಕಾಣಬಹುದು. ಈ ಅರಳಿ‌ಮರದ ಎಲೆಗಳಿಂದ ಸಾಕಷ್ಟು ಲಾಭಗಳಿವೆ. ಅದು ಅಷ್ಟಾಗಿ ಯಾರಿಗೂ...

Copyright © 2021 Suddione. Kannada online news portal

error: Content is protected !!