ಸಿದ್ದರಾಮಯ್ಯ ಸರಕಾರವನ್ನು ವಜಾಮಾಡಿ :  ಚಿತ್ರದುರ್ಗದಲ್ಲಿ ವಿಹಿಂಪ ಮನವಿ

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.08 :ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು ಮುಸ್ಲಿಮರಿಗೆ ಹತ್ತು ಸಾವಿರ ಕೋಟಿ ರೂಪಾಯಿ ಅನುದಾನ ಕೊಡುತ್ತೇನೆ ಎಂದು ಹೇಳಿರುವುದು ಸಂವಿಧಾನದಕ್ಕೆ

ವಿರೋಧವಾಗಿದ್ದು, ಸಿದ್ದರಾಮಯ್ಯನವರ ಸರಕಾರವನ್ನು ವಜಾಮಾಡಬೇಕು
ಮತ್ತು ಹುಬ್ಬಳ್ಳಿ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಂಕಿತ ಐಸಿಸ್ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸುವಂತೆ ವಿಶ್ವ ಹಿಂದೂ ಪರಿಷತ್ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ನಂತರ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿಯವರಿಗೆ ಮನವಿ ಪತ್ರವನ್ನು ನೀಡಿದರು.

ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಈಗಾಗಲೇ ನಾಲ್ಕು ಸಾವಿರ ಕೋಟಿ ಅನುಧಾನ ನೀಡಿದ್ದು, ಮುಂದಿನ ವರ್ಷ ಮುಸ್ಲಿಮರಿಗೆ ಹತ್ತು ಸಾವಿರ ಕೋಟಿ ಅನುಧಾನ ಖಂಡಿತವಾಗಿ ಕೊಟ್ಟೆ ಕೊಡುತ್ತೇನೆ ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ, ಈ ಹೇಳಿಕೆ ಸಂವಿಧಾನ ವಿರೋಧಿಯಾಗಿದ್ದು, ಮುಸ್ಲಿಮರಿಗೆ ಪ್ರತ್ಯೇಕ   ಅನುದಾನ ಕೊಡಲು ಸಂವಿಧಾನದಲ್ಲಿ ಅವಕಾಶವಿರುವುದಿಲ್ಲ. ಆರ್ಟಿಕಲ್-29 ಅಲ್ಪಸಂಖ್ಯಾತರ ಹಿತರಕ್ಷಣೆ ಪ್ರಕಾರ ಭಾರತದ ಯಾವುದೇ ರಾಜ್ಯ ಅಥವಾ ಯಾವುದೇ ಭಾಗದಲ್ಲಿ ವಾಸವಾಗಿರುವ ನಾಗರೀಕರ ಯಾವುದೇ ವಿಭಾಗವು, ತನ್ನದೇ ಆದ ವಿಶಿಷ್ಟ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಹೊಂದಿದ್ದರೆ ಅವುಗಳನ್ನು ರಕ್ಷಿಸುವ ಹಕ್ಕು ಉಳ್ಳತಕ್ಕದ್ದು, ಆದರೆ ಮುಸ್ಲಿಂ ಸಮುಧಾಯಕ್ಕೆ ವಿಶಿಷ್ಟ ಭಾಷೆ, ಲಿಪಿ, ಸಂಪ್ರದಾಯ ಭಾಷೆ ಇಲ್ಲದಿರುವುದರಿಂದ ಸದ್ರಿ ಆರ್ಟಿಕಲ್ ವ್ಯಾಖ್ಯೆಯ ಪ್ರಕಾರ ಅವರಿಗೆ ವಿಶೇಷ ಅನುದಾನ ನೀಡಲು ಸಂವಿಧಾನದಲ್ಲಿ ಅವಕಾಶವಿರುವುದಿಲ್ಲ.

ಆರ್ಟಿಕಲ್ – 30 ರ ಪ್ರಕಾರ ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತರಿಗೆ ಬೇಕಾದ ಶೈಕ್ಷಣಿಕ ಸಂಸ್ಥೆ ಸ್ಥಾಪಿಸಲು, ನಡೆಸಲು ಮಾತ್ರ ಹಕ್ಕು ಕೊಟ್ಟಿದೆ. ಆದರಿಂದ ಈ ಪ್ರಕಾರ ಮುಸ್ಲಿಮರಿಗೆ ವಿಶೇಷ ಅನುದಾನಕ್ಕೆ ಅವಕಾಶವಿಲ್ಲ. ಅಲ್ಪ ಸಂಖ್ಯಾತರಲ್ಲಿ ಆರು ಧರ್ಮಿಯರಿದ್ದು ಅವುಗಳನ್ನು ಸಮಾನವಾಗಿ ನೋಡಬೇಕಾಗಿರುವಾಗ, ಮುಸ್ಲಿಂ ಒಂದು ಸಮುದಾಯಕ್ಕೆ ಮಾತ್ರ ಅದು ಅಗಾಧ ಪ್ರಮಾಣದಲ್ಲಿ ಅನುದಾನ ನೀಡಿರುವುದು ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ನೀಡಲು ಉದ್ದೇಶಿಸಿರುವುದು ಸಂವಿಧಾನ ಬಾಹಿರವಾಗಿದೆ. ಮಾತ್ರವಲ್ಲ ಇದು ರಾಜ್ಯದಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಕೆಲಸವಾಗಿರುತ್ತದೆ. ಈ ಎಲ್ಲಾ ಕಾರಣದಿಂದಾಗಿ ಸಂವಿಧಾನ ವಿರೋಧವಾಗಿ ರಾಜ್ಯದ ಖಜಾನೆಯನ್ನು ಅಗಾಧ ಪ್ರಮಾಣದಲ್ಲಿ ಖರ್ಚು ಮಾಡುತ್ತಿರುವುದು ತಮ್ಮ ಗಮನಕ್ಕೆ ತರುತ್ತಿದ್ದೇವೆ, ಅದರಿಂದ ತಕ್ಷಣ ಸಿದ್ದರಾಮಯ್ಯ ಸರಕಾರವನ್ನು ವಜಾಗೊಳಿಸಲು ಆಗ್ರಹಿಸುತ್ತೇವೆ.

04  ಡಿಸೆಂಬರ್ 2023 ಸೋಮವಾರ ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಸಿದ್ದರಾಮಯ್ಯನವರ ಜೊತೆ ಅದೇ ವೇದಿಕೆಯಲ್ಲಿ, ವೇದಿಕೆ ಹಂಚಿಕೊಂಡ ತನ್ವೀರ್ ಪೀರಾ ಎಂಬ ಮುಸ್ಲಿಂ ಮೌಲ್ವಿಗೆ ಶಂಕಿತ ಭಯೋತ್ಫಾದಕ ಸಂಘಟನೆಗಳ ಜೊತೆ ನಂಟು ಇರುವುದು ಮಾಧ್ಯಮಗಳ ಮೂಲಕ ಬಹಿರಂಗವಾಗಿದ್ದು, ಅಲ್ಲದೆ ವಿಧಾನ ಸಭಾ ಸದಸ್ಯರಾದ ಬಸವನ ಗೌಡ ಯತ್ನಾಳ್ ರವರು ಟ್ವಿಟ್ಟರ್ ಮೂಲಕ ” ತನ್ವೀರ್ ಪೀರಾ ಎಂಬ ವ್ಯಕ್ತಿಗೆ ಭಯೋತ್ಫಾದಕ ಸಂಘಟನೆಗಳ ನಂಟು ಇದ್ದು, ಈತ ಸೌದಿ , ಯಮನ್, ಹಾಗು ಮಧ್ಯಪ್ರಾಚ್ಯ ದೇಶಗಳ ಪ್ರವಾಸದಲ್ಲಿ  ಭಯೋತ್ಫಾದಕ ಸಂಘಟನೆಯ ಮುಖಂಡರನ್ನು ಭೇಟಿಯಾಗಿರುವ ಫೋಟೋ ಹಂಚಿಕೊಂಡಿದ್ದು ಅಲ್ಲದೆ ಈ ವ್ಯಕ್ತಿ ಭಾರತದ ಚಟುವಟಿಕೆಗಳನ್ನು ಅರಬ್ ದೇಶಗಳಿಗೆ ರವಾನಿಸುವ ದೇಶದ್ರೋಹಿ ಕೆಲಸದ ಬಗ್ಗೆ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಹಾಗಾಗಿ ಇದು ದೇಶದ ಆಂತರಿಕ ಭದ್ರತೆಗೆ ಸವಾಲಾಗಿದ್ದು ಹಾಗಾಗಿ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಿ ರುದ್ರೇಶ್ ಜಿಲ್ಲಾ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷತದ್,  ಬಾಲಕೃಷ್ಣ, ಬಜರಂಗದಳ ಜಿಲ್ಲಾ ಸಹ ಸಂಯೋಜಕ್, ರಂಗಸ್ವಾಮಿ ನಗರ ಸಹ ಕಾರ್ಯದರ್ಶಿ, ರಂಗನಾಥ್ ನಗರ ಸಂಯೋಜಕರು, ಕಿಶೋರ್ ನಗರ ಸಹ ಸಂಯೋಜಕರು,  ಹಾಗೂ ಕಾರ್ಯಕರ್ತರಾದ ರೇಣು, ಪ್ರಮೋದ್, ಸಂಪತ್, ದೀಪಕ್ ರಾಜ್ ಇತರರು ಇದ್ದರು.

suddionenews

Recent Posts

ವಿರಾಟ್ ಕೊಹ್ಲಿ ಸೂಪರ್ ಸೆಂಚುರಿ : ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿದ ಭಾರತ

  ಸುದ್ದಿಒನ್ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ತಮ್ಮ 51 ನೇ ಶತಕವನ್ನು ಗಳಿಸಿದರು. ಟೀಮ್ ಇಂಡಿಯಾ ಪಾಕಿಸ್ತಾನವನ್ನು 6…

5 minutes ago

ಕಬೀರಾನಂದಾಶ್ರಮಕ್ಕೆ ಯಾವುದೆ ಜಾತಿ, ಧರ್ಮ ಇಲ್ಲ, ಎಲ್ಲರೂ ಸಮಾನರು : ಡಾ.ಬಸವಕುಮಾರ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಫೆ. 23…

30 minutes ago

ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ : ವಿಶೇಷತೆ ಏನು ಗೊತ್ತಾ?

  ಸುದ್ದಿಒನ್ ವಿರಾಟ್ ಕೊಹ್ಲಿ 14,000 ಏಕದಿನ ರನ್ ಗಳಿಸಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಸಚಿನ್…

1 hour ago

ವಿಜಯೇಂದ್ರ ನೇತೃತ್ವದಲ್ಲಿಯೇ ತಾಲೂಕು, ಜಿಲ್ಲಾ ಪಂಚಾಯತಿಗೆ ಸ್ಪರ್ಧೆ : ರೇಣುಕಾಚಾರ್ಯ

    ದಾವಣಗೆರೆ; ರಾಜ್ಯದಲ್ಲಿ ಇನ್ನೇನು ತಾಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ಸಂಬಂಧ ರೇಣುಕಾಚಾರ್ಯ ಅವರು…

1 hour ago

ತುಮಕೂರಿನ ಈ ಪ್ರದೇಶಗಳಲ್ಲಿ ಫೆಬ್ರವರಿ 24 , 27 ಹಾಗೂ 28ರಂದು ವಿದ್ಯುತ್ ವ್ಯತ್ಯಯ…!

  ತುಮಕೂರು: ಬೆಸ್ಕಾಂ ತುಮಕೂರು ನಗರ ಉಪ ವಿಭಾಗ 1ರ ವ್ಯಾಪ್ತಿಯಲ್ಲಿ ಅಟಲ್ ಭೂ ಜಲ ಯೋಜನೆಯಡಿಯಲ್ಲಿ ಪ್ರತ್ಯೇಕ ಕೃಷಿ…

1 hour ago

ಭಾರತ vs ಪಾಕಿಸ್ತಾನ : 25 ವರ್ಷಗಳ ಹಳೆಯ ದಾಖಲೆ ಮುರಿದ ಕಿಂಗ್ ಕೊಹ್ಲಿ

    ಸುದ್ದಿಒನ್ ಪ್ರತಿಯೊಬ್ಬ ಭಾರತೀಯ ಅಭಿಮಾನಿಯೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ರನ್‌ಗಳನ್ನು ನಿರೀಕ್ಷಿಸುತ್ತಾರೆ.…

2 hours ago