in , ,

ಸತತ 3 ನೇ ಬಾರಿಗೆ ರಾಷ್ಟ್ರೀಯ ಮಟ್ಟದ ಟಗ್ ಆಫ್ ವಾರ್ ಬಾಂಪಿಯನ್‍ಶಿಪ್ ನಲ್ಲಿ ಎಸ್. ಆರ್. ಎಸ್. ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು

suddione whatsapp group join

ಚಿತ್ರದುರ್ಗ, (ನ.26) : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್. ಆರ್. ಎಸ್. ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು ಮಹಾರಾಷ್ಟ್ರದ ಪಾಲ್ಗಾರ್‍ನಲ್ಲಿ ನ.25 ಮತ್ತು 26 ರಂದು ನಡೆಯಲಿರುವ ರಾಷ್ಟ್ರ ಮಟ್ಟದ 23 ನೇ “ರಾಷ್ಟ್ರೀಯ ಮಟ್ಟದ ಟಗ್ ಆಫ್ ವಾರ್” (ಹಗ್ಗಜಗ್ಗಾಟ) ಬಾಂಪಿಯನ್‍ಶಿಪ್ ಪಂದ್ಯಾವಳಿಗಳಲ್ಲಿ ಸಬ್ ಜೂನಿಯರ್ ಪಂದ್ಯಗಳಲ್ಲಿ  9 ನೇ ತರಗತಿಯ ವಿದ್ಯಾರ್ಥಿಗಳು 2021-22 ನೇ ಸಾಲಿನಲ್ಲಿ ಸತತ 3 ನೇ ಬಾರಿ ನಮ್ಮ ಶಾಲೆಯು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

ನ.26 ರಂದು ರಾಜಸ್ಥಾನ ಮತ್ತು ತೆಲಂಗಾಣ ಈ ಎರಡು ರಾಜ್ಯಗಳ ನಡುವೆ ಸೆಣಸಲಿದ್ದು,  ಶಾಲೆಯ ಕ್ರೀಡಾ ತರಬೇತುದಾರರಾದ ಸಿದ್ದೇಶ್ ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಸ್ವರ್ಧಿಸಲಿರುವ ವಿದ್ಯಾರ್ಥಿಗಳಿಗೆ, “ಎಸ್. ಆರ್. ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ” ಅಧ್ಯ್ಯಕ್ಷರಾದ ಬಿ.ಎ. ಲಿಂಗಾರೆಡ್ಡಿ, ಕಾರ್ಯದರ್ಶಿ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಉಪಧ್ಯಾಕ್ಷರು ಅಮೋಘ್ ಬಿ. ಎಲ್. ಡಾ|| ರವಿ ಟಿ.ಎಸ್. ಸಂಸ್ಥೆಯ ಆಡಳಿತಾಧಿಕಾರಿಗಳು, ಪ್ರಭಾಕರ್. ಎಂ. ಎಸ್, ಪ್ರಾಂಶುಪಾಲರು ಹಾಗೂ ಶಾಲೆಯ ಶಿಕ್ಷಕವೃಂದ, ಸಿಬ್ಬಂದಿ ವರ್ಗದವರು ತುಂಬು ಹೃದಯದಿಂದ ಶುಭಕೋರುವುದರೊಂದಿಗೆ ಹರ್ಷ ವ್ಯಕ್ತಪಡಿಸಿದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ದೇಹದಲ್ಲಿ ಕಬ್ಬಿಣಾಂಶದ ಕೊರತೆಯೇ ಈ ಮನೆ ಮದ್ದು ಟ್ರೈ ಮಾಡಿ

ನಿನ್ನೆ 66.. ಇಂದು 182.. ಧಾರವಾಡ ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ಸ್ಪೋಟ..!