in ,

ಬೀದಿ ದೀಪಗಳ ನಿರ್ವಹಣೆಗಾಗಿ 4 ಕೋಟಿ ರೂ. ಮೀಸಲು : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

suddione whatsapp group join

ವರದಿ : ಸುರೇಶ್ ಪಟ್ಟಣ್

ಚಿತ್ರದುರ್ಗ,(ಏ.19) : ನಗರದಲ್ಲಿ ವಿವಿಧ ಬಡಾವಣೆಗಳಲ್ಲಿ ಸುಮಾರು 25 ಲಕ್ಷ ರೂ.ವೆಚ್ಚದಲ್ಲಿ ನೂತನವಾಗಿ ಅಳವಡಿಕೆಗಾಗಿ ಬೀದಿ ದೀಪಗಳನ್ನು ನಗರಸಭೆವತಿಯಿಂದ ಖರೀದಿಸಿದ್ದು ಇಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸದಸ್ಯರಿಗೆ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ತಿಪ್ಪಾರೆಡ್ಡಿ, ಚಿತ್ರದುರ್ಗ ನಗರದಲ್ಲಿ ಈಗಾಗಲೇ ಹಲವೆಡೆ ಬೀದಿ ದೀಪಗಳು ಹಾಳಾಗಿವೆ. ಇವುಗಳ ಬದಲಿಗೆ ನೂತನವಾಗಿ ಖರೀದಿ ಮಾಡಿದ ಎಲ್‍ಇಡಿ ಬೀದಿ ದೀಪಗಳನ್ನು ಅಳವಡಿಸಲಾಗುವುದು. ನಗರೋತ್ತಾನದಲ್ಲಿ ಸರ್ಕಾರದಿಂದ 40 ಕೋಟಿ ರೂ. ಬಂದಿದ್ದು, ಇದರಲ್ಲಿ 4 ಕೋಟಿ ರೂ.ಗಳನ್ನು ಬೀದಿ ದೀಪಗಳ ನಿರ್ವಹಣೆಗಾಗಿ ಮೀಸಲಿರಿಸಲಾಗಿದೆ. ಈಗ ಬಂದಿರುವ ಬೀದಿ ದೀಪಗಳನ್ನು ಹೊಸದಾಗಿ ನಿರ್ಮಾಣವಾಗಿರುವ ಬಡಾವಣೆಗಳಲ್ಲಿ ಅಳವಡಿಸಲಾಗುವುದು ಎಂದರು.

ಪ್ರಧಾನ ಮಂತ್ರಿಗಳು ಎಲ್ಲಾ ಕಡೆಗಳಲ್ಲಿ ಎಲ್‍ಇಡಿ ದೀಪಗಳನ್ನು ಆಳವಡಿಕೆ ಮಾಡಲು ಸೂಚನೆ ನೀಡಿದ್ದರು ಇದರಿಂದ ವಿದ್ಯುತ್ ಉಳಿತಾಯವಾಗುವುದ್ದಲ್ಲದೆ ಬೆಳಕು ಸಹಾ ಚನ್ನಾಗಿ ಬರಲಿದೆ. ಇದರಿಂದ ನಗರದಲ್ಲಿ ಎಲ್ಲಡೆ ಈ ರೀತಿಯಾದ ವಿದ್ಯುತ್ ದೀಪಗಳನ್ನು ಮುಂದಿನ ದಿನದಲ್ಲಿ ಆಳವಡಿಕೆ ಮಾಡಲಾಗುವುದು ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ ವೆಂಕಟೇಶ್, ಉಪಾಧ್ಯಕ್ಷರಾದ ಶ್ರೀಮತಿ ಅನುರಾಧ ರವಿಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್ ಸದಸ್ಯರಾದ ಸುರೇಶ್, ಹರೀಶ್, ತಾರಕೇಶ್ವರಿ, ಮಾಜಿ ಸದಸ್ಯರಾದ ವೆಂಕಟೇಶ್, ವಿರೇಶ್, ಚಕ್ರವರ್ತಿ,ಪೌರಾಯುಕ್ತರಾದ ಹನುಮಂತರಾಜು ಇಂಜಿನಿಯರ್ ಕಿರಣ್ ವ್ಯವಸ್ಥಾಪಕರಾದ ಮಂಜುಳಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಏ.20 ರಂದು ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹತ್ತು ಬೆಳದಿಂಗಳ ವಿಶೇಷ ಕಾರ್ಯಕ್ರಮ

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಿ : ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸೂಚನೆ