in ,

ರೋಟರಿ ಸಂಸ್ಥೆ ಸರ್ಕಾರಿ ಶಾಲೆಗಳಿಗೆ ಅಗತ್ಯ ಕೂಡುಗೆ ನೀಡಿ ಶಿಕ್ಷಣ ಕ್ರಾಂತಿ ಮಾಡಿದೆ : ಬಿಇಓ ತಿಪ್ಪೇಸ್ವಾಮಿ

suddione whatsapp group join

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಜ.10) :  ರೋಟರಿ ಸಂಸ್ಥೆ ಜನತೆಯ ಆರೋಗ್ಯ ಮತ್ತು ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿಯನ್ನು ವಹಿಸಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾದದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ತಿಳಿಸಿದರು.

ತಾಲ್ಲೂಕಿನ ಕುರುಬರಹಳ್ಳಿಯಲ್ಲಿ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ವತಿಯಿಂದ ರೋಟರಿ ಫೌಂಡೇಷನ್ ರೋಟರಿ ಡಿಸ್ಟಿಕ್ 3160ವತಿಯಿಂದ  ಮಕ್ಕಳಿಗಾಗಿ 20 ಡೆಸ್ಕಗಳನ್ನು ಕೂಡಿಗೆಯಾಗಿ ನೀಡಿದ್ದು ಅದರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ರೋಟರಿ ಸಂಸ್ಥೆ ಜಿಲ್ಲೆಯಲ್ಲಿನ ವಿವಿಧ ಸರ್ಕಾರಿ ಶಾಲೆಗಳಿಗೆ ಅಲ್ಲಿಗೆ ಅಗತ್ಯವಾದ ಕೂಡುಗೆಯನ್ನು ನೀಡುವುದರ ಮೂಲಕ ಶಿಕ್ಷಣ ಕಾಂತ್ರಿಯಾಗುವಂತೆ ಮಾಡಿದೆ. ಇದರೊಂದಿಗೆ ಉತ್ತಮ ಶಿಕ್ಷಕರನ್ನು ಮಕ್ಕಳ ಮೂಲಕ ಆಯ್ಕೆ ಮಾಡಿ ಅವರನ್ನು ಗೌರವಿಸುವ ಕಾರ್ಯವನ್ನು ಮಾಡುತ್ತಿರುವುದು ಉತ್ತಮವಾದ ಕೆಲಸವಾಗಿದೆ. ಸಿಕ್ಷಕ ವೃತ್ತಿ ಅತಿ ಅಮೂಲ್ಯವಾಗಿದೆ ದೇಶದ ಬಾವಿ ಪ್ರಜೆಗಳನ್ನು ತಯಾರು ಮಾಡುವ ಕೆಲಸ ಇವರದ್ದಾಗಿದೆ ಎಂದರು.

ರೋಟರಿ ಸಂಸ್ಥೆಯವತಿಯಿಂದ ಸರ್ಕಾರಿ ಶಾಲೆಗಳಿಗೆ ಬೆಂಚು ಡೆಸ್ಕ್, ಕಂಪೂಟರ್, ಸ್ಮಾಟ್‌ಕ್ಲಾಸ್‌ಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇದರಿಂದ ರೋಟರಿ ಸಂಸ್ಥೆ ಶಿಕ್ಷಣಕ್ಕೆ ಹೆಚ್ಚಿನ ರೀತಿಯ ಒತ್ತನ್ನು ನೀಡಲಾಗುತ್ತಿದೆ. ಇದ್ದಲ್ಲದೆ ಜ. 19 ಮತ್ತು 20 ರಂದು ಶಿಕ್ಷಕರಿಗೆ ವಿವಿಧ ರೀತಿಯ ವಿಷಯಗಳಲ್ಲಿ ತರಬೇತಿಯನ್ನು ನೀಡುವ ಕಾರ್ಯಕ್ರಮವನ್ನು ಸಹಾ ಹಮ್ಮಿಕೊಂಡಿದೆ. ಈಗ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಜಿಲ್ಲೆ 4 ನೇ ಸ್ಥಾನದಲ್ಲಿದೆ ಮುಂದಿನ  ದಿನದಲ್ಲಿ ಮೊದಲನೇ ಸ್ಥಾನಕ್ಕೆ ತರುವ ಶಿಕ್ಷಕರ ಪ್ರಯತ್ನಕ್ಕೆ ಸಂಸ್ಥೆ ಸಹಾಯವನ್ನು ಮಾಡುತ್ತಿದೆ. ಇದಕ್ಕೆ ಶಿಕ್ಷಣ ಇಲಾಖೆಯಿಂದ ಅಬಾರಿಯಾಗಿದ್ದೇನೆ ಎಂದು ತಿಪ್ಪೇಸ್ವಾಮಿ ತಿಳಿಸಿದರು.

ಸಂಸ್ಥೆ ನೀಡಿರುವ ವಿವಿಧ ರೀತಿಯ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ಉತ್ತಮವಾದ ಫಲಿತಾಂಶವನ್ನು ತರಬೇಕಿದೆ, ಅಲ್ಲದೆ ಮುಂದೆ ಬರುವ ಮಕ್ಕಳಿಗೂ ಸಹಾ ಈ ಸೌಲಭ್ಯ ಸಿಗುವಂತೆ ಮಾಡಬೇಕಿದೆ ಹಾಳು ಮಾಡಬೇಡಿ ಎಂದು ಕಿವಿ ಮಾತು ಹೇಳಿ, ನಮಗೆ ಈ ರೀತಿಐಆದ ಸೌಲಭ್ಯ ಇರಲಿಲ್ಲ ನೆಲದ ಮೇಲೆ ಕುಳಿತು ಪಾಠವನ್ನು ಕೇಳ ಬೇಕಾದ ನಿವಾರ್ಯತೆ ಇತ್ತು ಆದರೆ ನಿಮಗೆ ಎಲ್ಲಾ ರೀತಿಯ ಸೌಲಭ್ಯ ಸಿಗುತ್ತಿದೆ ಇದರ ಸದುಯೋಗವನ್ನು ಮಾಡಿಕೊಳ್ಳುವಂತೆ ಕರೆ ನೀಡಿದರು.

ಸಹಾಯಕ ನಿರ್ದೇಶಕರಾದ ಹುಲಿಕುಂಟೆರಾಯಪ್ಪ ಮಾತನಾಡಿ,  ರೋಟರಿ ಸಂಸ್ಥೆ ಉತ್ತಮವಾದ ಕಾರ್ಯವನ್ನು ಮಾಡುವುದರ ಮೂಲಕ ಜನತೆಯ ಆರೋಗ್ಯ ಮಕ್ಕಳ ಶಿಕ್ಷಣಕ್ಕೆ ನೆರವಾಗಿದೆ. ಪ್ರತಿ ವರ್ಷವೂ ಸಹಾ ಸಂಸ್ಥೆ ವಿವಿಧ ಸರ್ಕಾರಿ ಶಾಲೆಗಳಿಗೆ ಏನಾದರೂ ಒಂದು ಕೊಡುಗೆಯನ್ನು ನೀಡತ್ತಲೆ ಬರುತ್ತಿದೆ. ಇದರಿಂದ ಮಕ್ಕಳು ಪ್ರಗತಿಯನ್ನು ಹೊಂದಲು ಸಾಧ್ಯವಿದೆ. ಶೌಚಾಲಯ ನಿರ್ಮಾಣ ಮಕ್ಕಳಿಗೆ ಶುದ್ದವಾದ ಕುಡಿಯುವ ನೀರಿನ ವ್ಯವಸ್ಥೆ, ಪುಸ್ತಕಗಳನ್ನು ನೀಡುತ್ತಿದೆ. ಶೈಕ್ಷಣಿಕ ಪ್ರಗತಿಗೆ ರೋಟರಿ ಸಂಸ್ಥೆ ತನ್ನದೆ ಆದ ಕೂಡುಗೆಯನ್ನು ನೀಡಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಮಾಧುರಿ ಮಧುಪ್ರಸಾದ್ ಮಾತನಾಡಿ, ಮಕ್ಕಳು ಗುರುಗಳ ಮಾತನ್ನು ಕೇಳುವುದರ ಮೂಲಕ ಉತ್ತಮವಾದ ಪ್ರಗತಿಯನ್ನು ಸಾಧಿಸಿ, ಪರೀಕ್ಷೆಯಲ್ಲಿ ಹೆಚ್ಚಿನ ಅಂಕವನ್ನು ಪಡೆಯುವುದರ ಮೂಲಕ ಉನ್ನತ ಸ್ಥಾನವನ್ನು ಪಡೆದು ಆಸಕ್ತರಿಗೆ ಸಹಾಯವನ್ನು ಮಾಡಿ, ಪಾಠ ಮಾತ್ರವಲ್ಲದೆ ಆಟದಲ್ಲಿಯೂ ಸಹಾ ಪ್ರಥಮ ಸ್ಥಾನವನ್ನು ಪಡೆಯಿರಿ, ಜನತೆಯ ಆರೋಗ್ಯಕ್ಕಾಗಿ ಸಂಸ್ಥೆಯವತಿಯಿಂದ ಡಯೋಲಿಸಿಸಿ ಮತ್ತು ಫಿಜಿಯೊಥೇರಪಿ ಕೇಂದ್ರವನ್ನು ಮುಂದಿನ ಜೂನ್ ಒಳಗಡೆಯೂಳಗಾಗಿ ಪ್ರಾರಂಭ ಮಾಡಲಾಗುತ್ತದೆ ಇದಕ್ಕಾಗಿ ದಾನಿಗಳು ಸಹಾಯವನ್ನು ಮಾಡಿದ್ದಾರೆ. ಶಿಕ್ಷಕರಿಗೆ ವಿವಿಧ ರೀತಿಯ ಶಿಬಿರಗಳನ್ನು ಮಾಡುವುದರ ಮೂಲಕ ಅವರಿಗೆ ಹೆಚ್ಚಿನ ಜ್ಞಾನವನ್ನು ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ನಾಗರಾಜ್, ಸಹಾಯಕ ಗೌರ‍್ನರ್ ಶ್ರೀಮತಿ ಗಾಯತ್ರಿ ಶಿವರಾಂ, ರೋಟರಿ ಕ್ಲಬ್‌ನ ಸದಸ್ಯರಾದ ಎಸ್.ವಿರೇಶ್, ವಿರಭದ್ರಸ್ವಾಮಿ, ಡಾ.ತಿಪ್ಪೇಸ್ವಾಮಿ, ತರುಣ್ ಷಾ, ವಿಶ್ವನಾಥ್, ಶಿವಣ್ಣ ಕುರುಬರಹಳ್ಳಿ, ಮುಕೇಶ್, ಪ್ರಚಾರ್ಯರಾದ ಸುರೇಶ್, ಎಸ್.ಡಿ,ಎಂ,ಸಿ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷರಾದ ನಸ್ರೀನ್ ತಾಜ್ ಭಾಗವಹಿಸಿದ್ದರು ವಿದ್ಯಾರ್ಥಿ ರಕ್ಷಾ ಪ್ರಾರ್ಥಿಸಿದರೆ ಸುರೇಶ್ ಸ್ವಾಗತಿಸಿದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಜನವರಿ 14 ರಿಂದ ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ : ಮೋಹನ್ ಕುಮಾರ್

ಮಂಡ್ಯದಲ್ಲಿ ಬಾಣಂತಿ ಸಾವು : ವೈದ್ಯರ ಮೇಲೆ ಪೋಷಕರ ಆರೋಪ..!